KARNATAKA

ಇಂಥವರಿಗೆ ಪದ್ಮಶ್ರೀ ಸಿಕ್ಕರೆ ಅದಕ್ಕೊಂದು ಗೌರವ❤️ ಮಕ್ಕಳ ಶಿಕ್ಷಣ, ಕೊರಗರ ಮನೆ ನಿರ್ಮಾಣ ಕ್ಷೇತ್ರದಲ್ಲಿ HS Shetty ದಾನ ಶೂರ ಕರ್ಣ

Share

ಹಾಲಾಡಿ ಶ್ರೀನಿವಾಸ ಶೆಟ್ಟಿ !
ಇವರು ರಾಜಕಾರಣಿ ಅಲ್ಲ, ಮಾಜಿ ಶಾಸಕರೂ ಆಲ್ಲ. ಆದರೆ ಅದಕ್ಕಿಂತ ಹೆಚ್ಚಾಗಿ ಕಷ್ಟ ಪಡುವ ಕಟ್ಟ ಕಡೆಯ ವ್ಯಕ್ತಿಗೂ ನೆರವು ನೀಡಬೇಕು ಎನ್ನುವ ತುಡಿತ ಇರುವ ಮಾಹಾನ್‌ ವ್ಯಕ್ತಿತ್ವದ ಸರಳ ವ್ಯಕ್ತಿ. ಶಾರ್ಟ್‌ ಆಂಡ್‌ ಸ್ವೀಟಾಗಿ H S Shetty ಎಂದು ಕರೆಯುತ್ತಾರೆ.

HS Shetty
ಮೌನ ಕ್ರಾಂತಿಯ ಮೂಲಕ ೧೭ ವರ್ಷಗಳಿಂದ ಶಿಕ್ಷಣ ಮತ್ತು ಬಡವರ ಕಣ್ಣೊರೆಸುವ ಕಾರ್ಯ ಮಾಡುವ ಶೆಟ್ಟರದ್ದು ಸಮಾಜ ಸೇವೆ ವೈಶಿಷ್ಟ್ಯತೆ ಏನೆಂದರೆ ಅರ್ಹರಿಗೆ ಮಾತ್ರ ಸೌಲಭ್ಯ ಸಲ್ಲಿಸುವುದು.‌ 

೪೧ ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಶಾಲಾ ಸಮವಸ್ತ್ರ ನೀಡುವ, ಮಕ್ಕಳ ಶಿಕ್ಷಣಕ್ಕೆ ಕಂಪ್ಯೂಟರ್‌ ಒದಗಿಸಿ ಕೊಡುವ, ಕೊಠಡಿ ನಿರ್ಮಾಣ ಜತೆಯಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೂ ವಿಶೇಷ ಶಿಕ್ಷಣ ಸೌಲಭ್ಯ ಕಲ್ಪಿಸುತ್ತಿರುವ ದೂರದರ್ಶಿತ್ವದ ತೆರೆ ಮರೆಯ ನಾಯಕ!

ಒಂದು ಹೆಜ್ಜೆ ಮುಂದೆ ಹೋಗಿ ಕೊರಗರಿಗೆ ನೂರು ಮನೆ ಕಟ್ಟಿಸಿಕೊಡುವ ಆಸೆ ಹೊತ್ತು 14 ಮನೆಗಳನ್ನು ನಿರ್ಮಿಸಿಕೊಟ್ಟು ಇನ್ನು ಎರಡನೇ ಹಂತದಲ್ಲಿ ಒಟ್ಟು 28 ಮನೆಗಳನ್ನು ನಿರ್ಮಿಸಿ ಕೊಡಲಿರುವ ದಾನ ಶೂರ ಕರ್ಣ. .
ಮಾಧ್ಯಮ ಸಂಸ್ಥೆಯನ್ನು ಕಟ್ಟಿದ ಸಾಮಾರ್ಥ್ಯ ಇರುವ ಆದರೂ ಇದ್ಯಾವುದನ್ನೂ ವಿಜೃಂಬಿಸಿ ಪ್ರಚಾರಕ್ಕೆ ತಾರದ ವಿಚಿತ್ರ ವ್ಯಕ್ತಿತ್ವದ ಹಾಲಾಡಿ ಶ್ರೀನಿವಾಸ ಶೆಟ್ಟರ ಬಾಲ್ಯದಿಂದ ಈಗ ೬೬ ವರ್ಷದ ವರೆಗಿನ ಬದುಕೇ ಒಂದು ಉತ್ಕೃಷ್ಟ ಕಾದಂಬರಿಗೆ ಸಾಕಾಗುವಷ್ಟು ಸರಕಿದೆ. ಅದನ್ನು ಖಂಡಿತಾ ಇನ್ನೊಮ್ಮೆ ದೀರ್ಘವಾಗಿ ಬರೆಯಬೇಕು.
ಒಂದು ಕಾಲದಲ್ಲಿ ಭಾರತೀಯ ಉದ್ಯಮದ ದಿಗ್ಗಜ ಧೀರೂ ಭಾಯಿ ಅಂಬಾನಿಯ ಸಹವರ್ತಿಯಾಗಿದ್ದ ಎಚ್‌ಎಸ್‌ ಶೆಟ್ಟರು, ನಾನಾ ಉದ್ಯಮಗಳಿಗೆ ಕೈ ಹಾಕಿ ಕೊನೆಗೆ ಕೆಮಿಕಲ್‌ ಇಂಡಸ್ಟ್ರಿಯಲ್ಲಿ ಯಶಸ್ಸು ಗಳಿಸಿದರು.

ಕೇವಲ ಹಣ ಮಾಡುವುದೇ ದೊಡ್ಡಸ್ತಿಕೆಯಲ್ಲ ಎಂದು ತಿಳಿದು ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಉಪದೇಶದಂತೆ ಭಾರತೀಯ ಸಂಸ್ಕೃತಿ, ಸಂಸ್ಕಾರ ಉದ್ದೀಪನಗೊಳಿಸುವ ಕೆಲಸದಲ್ಲಿ ಮುಂದಾದರು. ಅದರಂತೆಯೇ ಕೊರಗ ಜನಾಂಗದವರರಿಗೆ ನೂರು ಮನೆ ಕಟ್ಟಿಸಿಕೊಡುವ ಸಂಕಲ್ಪ ಮಾಡಿದರು.   ಆ ಸಂಕಲ್ಪವು ಹಂತ ಹಂತವಾಗಿ ಈಡೇರುತ್ತಿದೆ. ‌

ಪ್ರತಿಯೊಂದು ಸುಸಜ್ಜಿತ 2 ಮಲಗುವ ಕೋಣೆ ಮನೆಯ ಬೆಲೆ 14 ಲಕ್ಷ ರೂ.. ಸಮುದಾಯಕ್ಕೆ 100 ಉಚಿತ ಮನೆಗಳನ್ನು ತಲುಪಿಸುವ ಡಾ.ಶೆಟ್ಟಿಯವರ ಗುರಿಯ ಎರಡನೇ ಹಂತ ಮುಂದೆ ಅನುಷ್ಠಾನಗೊಳ್ಳಲಿದೆ.
ಹಿಂದೊಮ್ಮೆ 50,000 ಕ್ಕೂ ಹೆಚ್ಚು ಜನರಿದ್ದ ಬಲಿಷ್ಠ ಸಮುದಾಯವಾಗಿದ್ದ ಕೊರಗರು ಕಾಡಿನಲ್ಲಿದ್ದು, ಕುಪೌಷ್ಟಿಕತೆಯಿಂದ ಮರಣ ಪ್ರಮಾಣ ಹೆಚ್ಚಿ ಇದೀಗ 7,000 ಮಂದಿಗೆ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದಾರೆ. ಅವರ ಬದುಕು ಹಸನು ಮಾಡಲು ಟೊಂಕ ಕಟ್ಟಿ ನಿಂತಿರುವ ಶೆಟ್ಟರು, ನೂರು ಮನೆಯ ಯೋಜನೆ ಸಿದ್ಧ ಪಡಿಸಿದ್ದಾರೆ.
ಮೊದಲ ಹಂತದಲ್ಲಿ ಉಡುಪಿ ಜಿಲ್ಲೆಯ ಹಾರ್ದಳ್ಳಿ ಮಂಡಲಿ ಗ್ರಾಮ ಪಂಚಾಯತ್‌ನ ಬಡ ಕೊರಗ ಕುಟುಂಬಗಳಿಗೆ 14 ಉಚಿತ ಮನೆ ನಿರ್ಮಾಣ. 605 ಚದರ ಅಡಿ ಒಳಗೆ ಎರಡು ಮಲಗುವ ಕೋಣೆಗಳ ಹಾಲ್ ಅಡುಗೆಮನೆ (2BHK) ಮತ್ತು ನೀರಿನ ಟ್ಯಾಂಕ್ ಹೊಂದಿದ ಸ್ನಾನಗೃಹ ಇದೆ. ಪ್ರತಿ ಮನೆಯ ಸರಾಸರಿ ವೆಚ್ಚ ಸುಮಾರು 14 ಲಕ್ಷ ರೂ.

17 ವರ್ಷಗಳಿಂದ ಸಮಾಜಮುಖಿ ಸೇವೆ ಮಾಡಿಕೊಂಡು ಬಂದಿರುವ ಹೆಗ್ಗುಂಜೆ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಡಾ.ಎಚ್‌.ಎಸ್‌. ಶೆಟ್ಟಿ ಮನಪರಿವರ್ತನೆ ಮಾತುಗಳು ಅದ್ಭುತ

ಹಿಂದೆ ನಾನು ದೇಣಿಗೆಗಳನ್ನು ಸೇವೆ ರೂಪದಲ್ಲಿ ಕೊಡುತ್ತಿದ್ದೆ ಆದರೆ, ಕೊಟ್ಟ ಬಳಿಕ ಸಂಕಟಪಡುತ್ತಿದ್ದೆ. ಆದರೆ ಯಾವಾಗ ಇದನ್ನು ಧಾರ್ಮಿಕ ಶ್ರದ್ಧೆ ರೂಪದಲ್ಲಿ ದಾನ ಧರ್ಮ ಮಾಡಲು ಆರಂಭಿಸಿದೆನೋ ಆಗ ನೆಮ್ಮದಿ ಲಭಿಸುತ್ತಿದೆ. ಒಳ್ಳೆಯ ಕೆಲಸಗಳಿಗೆ ಇನ್ನಷ್ಟು ದಾನ ಧರ್ಮ ಮಾಡಬಹುದಿತ್ತು ಎಂಬ ಕಾರಣಕ್ಕೆ ಇನ್ನು ಹೆಚ್ಚು ದುಡಿಯಬೇಕಿತ್ತು ಎಂಬ ಭಾವ ಇದೆ.

  • ಬೆಂಗಳೂರು ಮೂಲದ ಮೈಸೂರು ಮರ್ಕೆಂಟೈಲ್ ಕಂಪನಿ ಲಿಮಿಟೆಡ್‌ನ ಸ್ಥಾಪಕ, ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಎಚ್.ಎಸ್. ಶೆಟ್ಟಿ ಸಮಾಜ ಮುಖಿ ಕೆಲಸಗಳಲ್ಲಿಯೇ ಹೆಚ್ಚು ತೊಡಗಿಕೊಂಡಿದ್ದಾರೆ. ದ್ರವ ಸರಕು ಬಿಟುಮೆನ್ ನಿರ್ವಹಿಸುವುದಕ್ಕಾಗಿ ಕಾರವಾರ ಬಂದರಿನಲ್ಲಿ ದ್ರವ ಸರಕು ಸಂಗ್ರಹಣಾ ಟ್ಯಾಂಕ್ ಸೌಲಭ್ಯ ಸ್ಥಾಪಿಸಿದ ಭಾರತದ ಮೊದಲ ಉದ್ಯಮಿ. ಎರಡು ದಶಕಗಳ ಹಿಂದೆ ಮಂಗಳೂರು ಬಂದರಿನಲ್ಲಿ ಒಂದು ದೊಡ್ಡ ಖಾದ್ಯ ತೈಲ ಸಂಸ್ಕರಣಾಗಾರ ನಿರ್ಮಿಸಿದ ಚಾಣಾಕ್ಷ ಉದ್ಯಮಿ.
To Top