CRIME NEWS

ಗಂಡಸಿನ ಅಸ್ಥಿ ಪಂಜರ ಪತ್ತೆ: ಹೋರಾಟಗಾರರಿಗೆ ಮತ್ತೆ ಹಿನ್ನಡೆ

Share
  1. ಅಜ್ಞಾತ ವ್ಯಕ್ತಿ ಅಸ್ಪಷ್ಟ ಚಿತ್ರ

    ತಲೆಬುರುಡೆ ಸಿಕ್ಕಿಲ್ಲ. ಆದರೆ 15 ಮೂಳೆಗಳು ಪತ್ತೆಯಾಗಿವೆ ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದ್ದು, ಸ್ಥಳದಲ್ಲೇ ಇದ್ದ ವಿಧಿವಿಜ್ಞಾನ ವೈದ್ಯರು ಮೇಲ್ನೋಟಕ್ಕೆ ನೋಡಿದಾಗ ಇದು ಪುರುಷನ ಮೂಳೆಗಳಂತೆ ಕಾಣಿಸುತ್ತವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದ್ದು, ಇದರಲ್ಲಿ ಸರಿಯಾದ ವಿವರ ತಿಳಿದು ಬರಲಿದೆ. ವಿಧಿವಿಜ್ಞಾನ ವೈದ್ಯರು, ಸ್ಥಳದಲ್ಲಿದ್ದ ಅಧಿಕಾರಿಗಳು ಹಾಗೂ ಪೊಲೀಸರು ಈ ಮೂಳೆಗಳನ್ನು ವಶಕ್ಕೆ ಪಡೆದು ವಿವರಗಳನ್ನು ದಾಖಲಿಸಿಕೊಂಡಿದ್ದಾರೆ.

ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರು ಸ್ಥಳದಲ್ಲಿ ಹಾಜರಿದ್ದರು.

ಧರ್ಮಸ್ಥಳದಲ್ಲಿ ಅಪರಾಧ ಎಸಗಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂದು ಅಜ್ಞಾತ ವ್ಯಕ್ತಿ ದೂರುದಾರನೊಬ್ಬ ಜುಲೈ 3ರಂದು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದ. ಮಾಜಿ ನೈರ್ಮಲ್ಯ ಕಾರ್ಮಿಕನಾಗಿರುವ ನಾನು 1995 ರಿಂದ 2014 ರವರೆಗೆ ನೂರಾರು ಶವಗಳನ್ನು ಹೂತಿದ್ದಾಗಿ ಸ್ಫೋಟಕ ಮಾಹಿತಿ ನೀಡಿದ್ದ. ಈ ಪ್ರಕರಣ ದೇಶಾದ್ಯಂತ ಸದ್ದು ಮಾಡಿ ಎಸ್‌ಐಟಿ ರಚನೆಯಾಗಿತ್ತು.

ಈ ವಿಶೇಷ ತನಿಖಾ ತಂಡ ಜುಲೈ 28 ರಂದು ದೂರುದಾರರನ್ನು ಧರ್ಮಸ್ಥಳದ ಸಮೀಪದ ನೇತ್ರಾವತಿ ಸ್ನಾನಘಟ್ಟ ಪ್ರದೇಶಕ್ಕೆ ಕರೆದೊಯ್ದು ಹೆಣಗಳನ್ನು ಹೂಳಲಾಗಿದೆ ಎನ್ನಲಾದ 13 ಸ್ಥಳಗಳನ್ನು ಗುರುತು ಹಾಕಿಕೊಂಡಿತ್ತು. ಈ ಸ್ಥಳಗಳಲ್ಲಿ ಜುಲೈ 29ರಿಂದ ಅಗೆಯುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು.

ಆದರೆ ಜುಲೈ 30ರವರೆಗೆ ಒಟ್ಟು ಐದು ಸ್ಥಳಗಳನ್ನು ಅಗೆದರೂ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. ಗುರುತು ಮಾಡಿದ ಆರನೇ ಸ್ಥಳದಲ್ಲಿ ಜುಲೈ 31ರಂದು ಅಗೆದಾಗ ಮನುಷ್ಯನ ಅವಶೇಷಗಳು ಸಿಕ್ಕಿವೆ.

 

 

To Top