CRIME NEWS

ನಲ್ಲೂರು ಅಕ್ರಮ ಕಸಾಯಿಖಾನೆ ಪ್ರಕರಣ: ದನ- ಕರು‌ ಮಾರಾಟ ಮಾಡಿದ್ದ ಬಂಧುತ್ವ ಕಾರ್ಯಕರ್ತನ ಸೆರೆ

Posted on

Share

ಕಾರ್ಕಳ: ನಲ್ಲೂರಿನ ಮನೆಯೊಂದರಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತನೊಬ್ಬನನ್ನು ಕಾರ್ಕಳ ಪೊಲೀಸರು ಬಂಧಿಸಿದ್ದಾರೆ.

ನಲ್ಲೂರಿನ ಶಿವಪ್ರಸಾದ್ ಯಾನೆ ಅಣ್ಣು ಮಡಿವಾಳ (28) ಬಂಧಿತ. ನ.12ರಂದು ನಲ್ಲೂರಿನ ಮನೆಯೊಂದಕ್ಕೆ ದಾಳಿ ನಡೆಸಿದ ಕಾರ್ಕಳ ಗ್ರಾಮಾಂತರ ಪೊಲೀಸರು ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿದ್ದ ಆರೋಪದಲ್ಲಿ ಅಶ್ರಫ್ ಅಲಿ ಹಾಗೂ ಆತನ ಪತ್ನಿಯನ್ನು ಬಂಧಿಸಿದ್ದರು.

ಈ ಬಗ್ಗೆ ವಿಶ್ವ ಹಿಂದು ಪರಿಷತ್, ಭಜರಂಗ ದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ದನಕರುವನ್ನು ಕಳವು ಮಾಡಿ ತಂದು ಕಡಿದು ಮಾಂಸ ಮಾಡಲಾಗಿದ್ದು, ಈ ಅಕ್ರಮ ಕಸಾಯಿಖಾನೆಯ ಮನೆಯನ್ನು ಸರಕಾರ ಮುಟ್ಟುಗೋಲು ಹಾಕಬೇಕು ಎಂದು ಆಗ್ರಹಿಸಿದ್ದರು.

ತನಿಖೆ ತೀವ್ರಗೊಳಿಸಿದ ಪೊಲೀಸರು ಆರೋಪಿ ಅಶ್ರಫ್ ಅಲಿಯನ್ನು ವಿಚಾರಣೆಗೆ ಒಳಪಡಿಸಿದರು. ಆಗ ಆತ, ಈ ದನ ಮತ್ತು ಕರುವನ್ನು ಬಂಧುತ್ವ ದ ತಳಮಟ್ಟದ ಕಾರ್ಯಕರ್ತ ಶಿವಪ್ರಸಾದ್ ಎಲ್ಲಿಂದಲೋ ಖರೀದಿಸಿ ತಂದು ತಮಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ. ಅದರಂತೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಶಿವಪ್ರಸಾದ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

 

Most Popular

Exit mobile version