CRIME NEWS

ಬಸಿರು ಮಾಡಿದ ಪ್ರಕರಣ: ಬಿಜೆಪಿ ಕಾರ್ಯಕರ್ತನ ಮನದಾಳದ ಮಾತು

Posted on

Share

♦ಪುತ್ತೂರಿನಲ್ಲಿ ನಿನ್ನೆ ನಡೆದ ಎಸ್ ಡಿ ಪಿ ಐ ಸಂತ್ರಸ್ತೆಗೆ ನ್ಯಾಯ ಒದಗಿಸಿಕೊಡಬೇಕು ಎಂಬ ಸ್ಲೋಗನ್ ಇಟ್ಟುಕೊಂಡು ಪ್ರತಿಭಟನೆ ನಡೆಯಿತು. ನಾನು ಒಬ್ಬ ಹಿಂದೂ ಆಗಿ ಹಿಂದೂ ಸಂಘಟನೆಯ ಸೇವಕನಾಗಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತನಾಗಿ ಈ ಪ್ರಕರಣವನ್ನು ಖಂಡಿಸುತ್ತೇನೆ. ಮೊದಲನೆಯದಾಗಿ….

 ನಿನ್ನೆ ಎಸ್ ಡಿ ಪಿ ಐ ಮಾಡಿದ ಪ್ರತಿಭಟನೆಯಲ್ಲಿ ಅವರಿಗೆ ಟಾರ್ಗೆಟ್ ಇದ್ದದ್ದು ಹಿಂದೂ ನಾಯಕರು ಶರಣ್ ಪಂಪೆಲ್ ಮುರಳಿ ಕೃಷ್ಣ ಹಸಂತಡ್ಕ ಅರುಣ್ ಕುಮಾರ್ ಪುತ್ತಿಲ ಪದೇ ಪದೇ ಇವರ ಹೆಸರನ್ನು ಹೇಳಿಕೊಂಡು
ನಿಮ್ಮ ಬಾಯಿಯಲ್ಲೂ ಅವರ ಹೆಸರನ್ನು ಹೇಳಿಸಬೇಕಿತ್ತು ಅದನ್ನು ನೀವು ಚಾಚು ತಪ್ಪದೆ ಮಾಡಿದ್ದೀರಿ ಅಷ್ಟಕ್ಕೆ ಪ್ರತಿಭಟನೆಯನ್ನು ಮುಗಿಸಿದರು ಅಷ್ಟೇ
ಇವರ ಸಮುದಾಯದಿಂದಲೇ ಹಿಂದೂ ಹುಡುಗಿಯರಿಗೆ ಅನ್ಯಾಯವಾದಾಗ ಇವರು ಎಷ್ಟು ಪ್ರತಿಭಟನೆ ಮಾಡಿದ್ದಾರೆ..?
ಇವರ ಸಮುದಾಯದಿಂದ ಬಡ ಹೆಣ್ಣು ಮಕ್ಕಳಿಗೆ ಅನ್ಯಾಯವಾದಾಗ ಚಲಾವಣೆ ಇಲ್ಲದ ನ್ಯಾಯದ ಹಾಗೆ ವರ್ತಿಸುವ ಸ್ವಭಾವ ಇವರದು.
ಮಾತೃಶ್ರೀಯಾದ ಹುಡುಗಿಯ ತಾಯಿ ತಾಳ್ಮೆಯಿಂದ ಓದಿ ಈ ಪ್ರಕರಣವನ್ನು ಸುಖ ಅಂತ್ಯಗೊಳಿಸಿ ನಿಮ್ಮ ಮಗಳು ಪ್ರೀತಿಸಿದ ಹುಡುಗನ ಜೊತೆಗೆ ಆದರ್ಶ ಜೀವನ ನಡೆಸಬೇಕೆಂಬ ಉದ್ದೇಶದಿಂದ ಭಾರತೀಯ ಜನತಾ ಪಕ್ಷ ಹಿಂದೂ ಸಂಘಟನೆಯ ಮುಖಂಡರು ಹಲವು ಪ್ರಯತ್ನ ಮಾಡಿದ್ದಾರೆ.

ಕೆಲವು ಪ್ರಮುಖ ವ್ಯಕ್ತಿಗಳಿಂದ ಅವರ ಮನವಳಿಸುವಂತಹ ಪ್ರಯತ್ನಗಳನ್ನು ಮಾಡಿದ್ದಾರೆ ಅದು ನಿಮಗೆ ಬೇಕಾಗಿರಲಿಲ್ಲ..

ಓಕೆ ನಿಮ್ಮ ದಾರಿಯಲ್ಲಿಯೇ ಹೋಗೋಣ ಈ ರೀತಿ ಬೀದಿರಂಪಾಟ ಮಾಡಿ ನಾಳೆ ಮದುವೆಯಾಗಿ ನಿಮ್ಮ ಮಗಳು ಮತ್ತು ಆ ಹುಡುಗ ನೆಮ್ಮದಿಯ ಜೀವನ ನಡೆಸುತ್ತಾರೆಯಾ…?

ಇಂಥ ಪ್ರತಿಭಟನೆಯಿಂದ ನಿಮ್ಮ ಅಮೋಘ ನಿಲುವಿನಿಂದ ಇನ್ನಷ್ಟು ಅವರಿಬ್ಬರ ಪ್ರೀತಿ ಬೆಲೆಯಬಹುದೇ..? ಸ್ವಲ್ಪ ಆಲೋಚನೆ ಮಾಡಿ ಮುಂದುವರಿಯಿರಿ. ಮಕ್ಕಳ ಜೀವನದ ಪ್ರಶ್ನೆ ಸಮಾಜದಲ್ಲಿ ಮುಂದೆಯೂ ತಲೆಯೆತ್ತಿ ಬದುಕಬೇಕು.

ಆದರೆ ನಿಮ್ಮ ಉದ್ದೇಶ ಏನಿದ್ದದ್ದು ಎಲ್ಲವನ್ನು ಬೀದಿರಂಪಾಟ ಮಾಡಿ ನಾಳೆ ಅವರು ಸುಖ ಜೀವನ ನಡೆಸುತ್ತಾರೆ ಎಂಬ ಭ್ರಮೆಯಲ್ಲಿ ನೀವಿದ್ದೀರಾ…?

ನೀವೇ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದೀರಿ ನನ್ನ ಗಂಡ ಮತ್ತು ಹುಡುಗನ ತಂದೆ ಆತ್ಮೀಯ ಸ್ನೇಹಿತರು ಎಂದು ನಿಮ್ಮನ್ನು ಆ ಹುಡುಗ ಆಂಟಿ ಎಂದು ಕರೆಯುತ್ತಿದ್ದ ನಿಮ್ಮೊಳಗಿನ ಬಾಂಧವ್ಯ ಚೆನ್ನಾಗಿತ್ತು ಅಲ್ಲವೇ…?

ನಿಮ್ಮ ಕೆಲವು ದುಡುಕಿನ ನಿರ್ಧಾರವೇ ಈ ಪ್ರಕರಣ ಇಷ್ಟು ದೊಡ್ಡ ಮಟ್ಟಕ್ಕೆ ಹೋಗಲು ಕಾರಣ ಎಂಬ ಕಲ್ಪನೆ ಸಮಸ್ತ ಹಿಂದೂ ಬಾಂಧವರಲ್ಲಿದೆ.

ವೈಯಕ್ತಿಕವಾಗಿ ನಾನು ಮಾಜಿ ಶಾಸಕ ಸಂಜೀವ ಮಠದೂರು ಮುರಳಿ ಕೃಷ್ಣ ಹಸಂತಡ್ಕ ರಾಧಾಕೃಷ್ಣ ಬೋರ್ಕರ್ ಹಲವು ವ್ಯಕ್ತಿಗಳಲ್ಲಿ ಈ ವಿಚಾರವಾಗಿ ಮಾತಾಡಿದ್ದೇವೆ.

ನಮ್ಮಿಂದ ಸಾಧ್ಯವಾದಷ್ಟು ಪ್ರಯತ್ನವನ್ನು ಪಟ್ಟಿದ್ದೇವೆ ಇದು ನಿಮಗೆ ತಿಳಿದಿರಲಿಕ್ಕಿಲ್ಲ ಮೇಡಂ.

ಒಂದಂತು ನೆನಪಿಟ್ಟುಕೊಳ್ಳಿ ನಮ್ಮ ಪಕ್ಷ ಹಿಂದೂ ಸಂಘಟನೆ ಎಲ್ಲವನ್ನು ಬೀದಿರಂಪಾಟ ಮಾಡುವುದಿಲ್ಲ, ನಿಮ್ಮ ಮಗಳು ಮತ್ತು ಆ ಹುಡುಗ ಮಾಡಿದ ಘನಂದಾರಿ ಕೆಲಸವನ್ನ ಪಬ್ಲಿ ಸಿಟಿ ಮಾಡಲು ಒಲಿಂಪಿಕ್ಸ್ ನಲ್ಲಿ ಕಪ್ಪು ಗೆದ್ದದಲ್ಲ.

ನಮಗೆ ಒಂದು ಚೌಕಟ್ಟಿದೆ ಅದರ ಮುಖಾಂತರ ಇತ್ಯರ್ಥ ಮಾಡಲು ಪ್ರಯತ್ನಪಟ್ಟಿದ್ದೇವೆ ಮೇಡಂ.

ನಿನ್ನೆ ಒಂದು ಮಾತು ಹೇಳಿದ್ದೀರಿ ನಮಗೆ ಯಾಕೆ ಬೇಕು ಹಿಂದು ಸಂಘಟನೆ ನಮಗೆ ಸಹಾಯಕ್ಕೆ ಬಂದಿಲ್ಲ.. ಎಂದು ಅದು ನಿಮ್ಮ ಭ್ರಮೆ, ನಿಮ್ಮ ಕುಟುಂಬದ ಚಾರಿತ್ರ್ಯ ವಧೆ ಆಗಬಾರದು ಎಂದು ಗೌಪ್ಯವಾಗಿ ಮಾಡಿದೆ.

ಆದರೆ ಹಲವು ಹೆಣ್ಣು ಮಕ್ಕಳಿಗೆ ಮುಸ್ಲಿಂ ಹುಡುಗರಿಂದ ತೊಂದರೆಯಾಗಿ ನೋವು ಸಂಕಷ್ಟ ಅನುಭವಿಸಿ ಜೀವನವೇ ಬೇಡ ಎಂಬ ಪರಿಸ್ಥಿತಿ ಬಂದಾಗ ಅರುಣ್ ಕುಮಾರ್ ಪುತ್ತಿಲ ಮುರಳಿ ಕೃಷ್ಣ ಹಸಂತಡ್ಕ ಹಲವು ಪ್ರತಿಭಟನೆಗಳನ್ನು ಪುತ್ತೂರಲ್ಲಿ ಮಾಡಿದ್ದಾರೆ. ನೀವು ಎಷ್ಟು ಕಾರ್ಯಕ್ರಮಕ್ಕೆ ಬಂದಿದ್ದೀರಿ ಅವರು ಕೂಡ ನಿಮ್ಮ ಮಗಳ ಹಾಗೆ ಹಿಂದೂ ಹೆಣ್ಣು ಎಂದು ನಿಮಗೆ ಜ್ಞಾನೋದಯ ಆಗಿಲ್ಲವೇ?

ನಿಮ್ಮ ಮಗಳು ಪ್ರೀತಿಸಿ ಮಾಡಿಕೊಂಡ ಎಡವಟ್ಟನ್ನು ಸಂಘಟನೆಯ ಮೇಲೆ ಹಾಕಬೇಡಿ ನಿಮ್ಮದೇ ಮಗಳು ಒಂದೇ ಮನೆಯಲ್ಲಿ ಇದ್ದೀರಿ. ಒಂದು ಹಾಸ್ಪಿಟಲ್ ನಲ್ಲಿ ಉದ್ಯೋಗ ಮಾಡುತ್ತಿದ್ದೀರಿ.

7 ತಿಂಗಳವರೆಗೆ ನಿಮ್ಮ ಮಗಳ ದೈನಂದಿನ ಚಟುವಟಿಕೆಯಲ್ಲಿ ವ್ಯತ್ಯಾಸ ನೀವು ಕಾಣಲಿಲ್ಲವೇ..? ಅದು ನಿಮ್ಮ ಗಮನಕ್ಕೆ ಬರೆದಿದ್ದರೆ ನಿಮ್ಮ ಮಗಳ ಬಗ್ಗೆ ನೀವು ಎಷ್ಟು ಗಮನ ಇಟ್ಟಿದ್ದೀರಿ ಎಂದು ಹಿಂದೂ ಸಮಾಜಕ್ಕೆ ಅರ್ಥವಾಗುತ್ತದೆ.

ನಿನ್ನೆ ನಿಮ್ಮ ಸಮುದಾಯದ ಸಂಘಟನೆಗಳು ಹುಡುಗಿ ನ್ಯಾಯ ಸಿಗಬೇಕು ಎಂದು ಮೀಟಿಂಗ್ ಮಾಡಿದ್ದಾರೆ ಮಾಧ್ಯಮ ಹೇಳಿಕೆಯನ್ನು ಕೊಟ್ಟಿದ್ದಾರೆ ಕಾನೂನು ಹೋರಾಟಕ್ಕೆ ರೂಪುರೇಷೆಗಳನ್ನು ತಯಾರು ಮಾಡಿದ್ದಾರೆ.

ನಿಮ್ಮದೇ ಸಮುದಾಯದ ಪುರಸಭೆಯ ಸದಸ್ಯರಲ್ಲಿ ಮಾಜಿ ಶಾಸಕ ಸಂಜೀವ ಮಠದೂರ್ ಪ್ರಕರಣದ ಗಂಭೀರತೆಯ ಬಗ್ಗೆ ಮಾತನಾಡಲು ಸೂಚಿಸಿದ್ದರು. ಇದು ನಿಮಗೆ ಗೊತ್ತಿದೆಯೇ…?

ಇದರ ವಾಸ್ತವಂಶವನ್ನು ತಿಳಿದು ತುರ್ತಾಗಿ ನಿನ್ನೆ ಸಂಜೆ ಎಸ್ ಡಿ ಪಿ ಐ ಮುಖಾಂತರ ಬೀದಿಗಿಲಿದು ಹಿಂದೂ ನಾಯಕರನ್ನು ದ್ವೇಷಿಸುವ ಪ್ರಯತ್ನ ಮಾಡಿದ್ದೀರಿ ಅಕ್ಕಾ ಇದು ಒಳ್ಳೆಯ ಬೆಳವಣಿಗೆಯಲ್ಲ.

ಸಮಸ್ತ ಹಿಂದೂ ಬಾಂಧವರು ನಿಮ್ಮ ಮೇಲೆ ಗೌರವ ಸಿಂಪತಿ ತೋರಿಸಿದ್ದರು. ಹೆಣ್ಣುಮಗಳಿಗೆ ನ್ಯಾಯ ಸಿಗಲೇಬೇಕು ಎಂಬ ಕಲ್ಪನೆಯಲ್ಲಿದ್ದ ಸಮಸ್ತ ಹಿಂದೂ ಬಾಂಧವರ ಮನಸ್ಸಿಗೆ ಕೊಳ್ಳಿ ಇಟ್ಟರಲ್ಲವೇ ನೀವು…?
ನಿಮ್ಮ ಮನಸ್ಥಿತಿಯ ದೌರ್ಬಲ್ಯತೆಯನ್ನು ಎಸ್ ಡಿ ಪಿ ಯವರು ಸರಿಯಾಗಿ ಬಳಸಿಕೊಂಡರು ಅಷ್ಟೇ.

ಮೇಡಂ ನಿಮ್ಮ ಮನಸ್ಥಿತಿ ಹಿಂದೂ ಸಂಘಟನೆಯ ಹುಡುಗರು ಆ ಹುಡುಗನನ್ನು ಒಡಿದು ಬಡಿದು ಎತ್ತಾಕೊಂಡು ಬರಬೇಕು, ನಿಮ್ಮ ಮುಂದೆ ನಿಲ್ಲಿಸಬೇಕು. ಕಾರ್ಯಕರ್ತರ ನಾಯಕರ ಮೇಲೆ ಕೇಸ್ ಆಗಬೇಕು. ನಾವು ಜೈಲಲ್ಲಿ ಮುದ್ದೆ ಮುರಿಯಬೇಕು. ನೀವು ಪ್ರೀತಿಸಿದ ಹುಡುಗ ಹುಡುಗಿ ನೆಮ್ಮದಿಯ ಜೀವನ ನಡೆಸಬೇಕು ಇಂತಹ ಮನಸ್ಥಿತಿಯಿಂದ ಹೊರಗೆ ಬನ್ನಿ ಮೊದಲು..

ನಿಮ್ಮ ಮಗಳು 7 ತಿಂಗಳು ಗರ್ಭಿಣಿಯಾಗುವ ವರೆಗೆ ನಿಮ್ಮ ಗಮನಕ್ಕೆ ಬಂದಿಲ್ಲ.‌  ನಿಮ್ಮ ಮಗಳನ್ನು ಆ ಹುಡುಗನನ್ನು ಮನವೊಲಿಸುವ, ಒಂದುಗೂಡಿಸುವ ಪ್ರಯತ್ನವನ್ನು ಹಿಂದೂ ಸಂಘಟನೆ, ಬಿಜೆಪಿ ಪಕ್ಷ ಮಾಡಿದ್ದು. ಇದು ನಿಮ್ಮ ಗಮನಕ್ಕೆ ಬರಲು ಸಾಧ್ಯವಿಲ್ಲ ಬಿಡಿ..

-ನವೀನ್ ಕುಮಾರ್ ರೈ ಪನಡ್ಕ ಕೈಕಾರ, ಪುತ್ತೂರು

1 Comment

  1. ವಸಂತ್

    July 5, 2025 at 4:03 pm

    *ಸಂಘಟನೆಗೆ ಹಿಂದೂಗಳು ಎಲ್ಲರೂ ಒಂದೆ, ಹಿಂದೂಗಳನ್ನು ಒಟ್ಟು ಮಾಡಿಸುವುದು ಸಂಘಟನೆಯ ಕೆಲಸ, ಅದನ್ನು ಅವರು ಗೌಪ್ಯವಾಗಿ ಮಾಡಿದ್ದಾರೆ, ಇದು ಸಂಘಟನೆಗೆ ಸಂಬಂಧಪಟ್ಟ ವಿಷಯವಲ್ಲ, ಈ ವಿಷಯ ಇತ್ಯರ್ಥ ಆಗಬೇಕು ಎರಡು ಕುಟುಂಬಗಳ ನಡುವೆ,ಆ ಹುಡುಗ ಹುಡುಗಿ ಇಬ್ಬರಲ್ಲೂ ತಪ್ಪಾಗಿದೆ, ಸಂಘಟನೆಯು ಅದೇ ಹೇಳೋದು…ಮನೆಯ ಮಕ್ಕಳ ಮೇಲೆ ತಂದೆ ತಾಯಿ ಗಮನ ಇಡಬೇಕು ಅಂತ.
    ಹುಡುಗ ಪ್ರೌಢಾವಸ್ಥೆಗೆ ಬಂದಾಗ ಗಾಂಜ ಡ್ರಗ್ಸ್ ಗಿರಾಕಿಯಾಗ್ತಾನೆ,ಮನೆಗೆ ಮಾರಿಯಾಗ್ತಾನೆ,ಹುಡುಗಿ ಪ್ರೌಢಾವಸ್ಥೆಗೆ ಬಂದಾಗ ಇಂತಹ ದುರಂತಗಳು ನಡೆಯುತ್ತದೆ,

Leave a Reply

Your email address will not be published. Required fields are marked *

Most Popular

Exit mobile version