CRIME NEWS
ಯೂಟ್ಯೂಬರ್ ಹೋರಾಟಗಾರರಿಗೆ ಹಿನ್ನಡೆ: ಧರ್ಮಸ್ಥಳ ವಿಡಿಯೋ ಡಿಲೀಟ್ ಮಾಡಲು ಒಪ್ಪದೇ ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದ ಥರ್ಡ್ ಐ, ನಿರಾಕರಿಸಿದ ಸುಪ್ರೀಂ
ನವದೆಹಲಿ: ಧರ್ಮಸ್ಥಳ ಧರ್ಮಾಧಿಕಾರಿ ಸಹೋದರನ ವಿರುದ್ಧ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ಹೊರಡಿಸಲಾಗಿದ್ದ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
8000ಕ್ಕೂ ಹೆಚ್ಚು ವಿಡಿಯೋ ಲಿಂಕ್ ಗಳು, 390ಕ್ಕೂ ಹೆಚ್ಚು ವಿವಿಧ ಮಾಧ್ಯಮಗಳಿಗೆ ನೋಟಿಸ್ ನೀಡಲಾಗಿದ್ದು, ವಿವಾದಿತ ವಿಡಿಯೋಗಳನ್ನು ಕಿತ್ತು ಹಾಕುವಂತೆ ಹೈಕೋರ್ಟ್ ಆದೇಶ ನೀಡಿತ್ತು.
ಬಹುತೇಕ ಮಾಧ್ಯಮ ಸಂಸ್ಥೆಗಳು ವಿಡಿಯೋ ಡಿಲೀಟ್ ಮಾಡುವುದೇ ಸುಲಭದ ದಾರಿ ಎಂದು ಕಂಡುಕೊಂಡರೆ, ಯೂಟ್ಯೂಬರ್ (3rdeye) ಕಡೆಯಿಂದ ಮಾತ್ರ ಈ ಆದೇಶಕ್ಕೆ ತಡೆಯಾಜ್ಞೆ ಕೋರಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿ ಲಾಗಿತ್ತು. ವಾದ ವಿವಾದ ಆಲಿಸಿದ ಸುಪ್ರೀಂಕೋರ್ಟ್ ನ್ಯಾಯಾಧೀಶರು stay ನೀಡಲು ನಿರಾಕರಿಸಿದ್ದಾರೆ.
ನೀವು ಹೈಕೋರ್ಟಿಗೆ ಹೋಗಿ ಅಲ್ಲೇ ಪರಿಹಾರ ಕಂಡುಕೊಳ್ಳುವಂತೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.
ಈ ಮೂಲಕ ಧರ್ಮಸ್ಥಳ ಕ್ಷೇತ್ರದ ವಿರುದ್ಧ ಪ್ರಕರಣಗಳನ್ನು ಉಲ್ಲೇಖಿಸಿ, ತೇಜೋವಧೆಗೆ ಯತ್ನಿಸುತ್ತಿದ್ದ ಗುಂಪಿಗೆ ಹಿನ್ನಡೆಯಾಗಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.