DAKSHINA KANNADA
ಶಿಷ್ಯ ಡಿಸಿಎಂ ಡಿಕೆಶಿ ಪರವಾಗಿ ಘೋಷಣೆ ಗುರುಗಳು ಸಿಎಂ ಸಿದ್ದರಾಮಯ್ಯ ಪರವಾಗಿ ಘೋಷಣೆ
ಶಿಷ್ಯ ಡಿಸಿಎಂ ಡಿಕೆಶಿ ಪರವಾಗಿ ಘೋಷಣೆ ಗುರುಗಳು ಸಿಎಂ ಸಿದ್ದರಾಮಯ್ಯ ಪರವಾಗಿ ಘೋಷಣೆ!
ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕೆಸಿ ವೇಣುಗೋಪಾಲ್ ನಾರಾಯಣ ಗುರುಗಳ ಕುರಿತು ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಲು
ಮಂಗಳೂರಿಗೆ ಆಗಮಿಸುತ್ತಿದ್ದ ವೇಳೆ ವಿಮಾನ ನಿಲ್ದಾಣದಲ್ಲಿ ಡಿಕೆ ಶಿವಕುಮಾರ್ ಪರವಾಗಿ ಅನೇಕ ಮಂದಿ ಯುವ ಕಾಂಗ್ರೆಸ್ಸಿಗರು ಘೋಷಣೆಯನ್ನು ಕೂಗಿದ್ದಾರೆ.
11:00 ವೇಳೆಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ ವೇಳೆಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಯ ಘೋಷವನ್ನು ಹಾಕಿದ್ದಾರೆ.
ಡಿಕೆಶಿ ಬಣದ ಮಿಥುನ್ ರೈ ಅವರು ಘೋಷಣೆ ಕೂಗಿದನ್ನ ಸಮರ್ಥಿಸಿಕೊಂಡಿದ್ದಾರೆ. ಇಂದಿನ ಕಾರ್ಯಕ್ರಮ ಕಾಂಗ್ರೆಸ್ ಪಕ್ಷದ ಪರವಾಗಿ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಗಮಿಸುವಾಗ ಅವರ ಪರವಾಗಿ ಜಯಭೋಷಗಳನ್ನು ಹಾಕುತ್ತೇವೆ ಅದೇ ರೀತಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆಶಿ ಪರವಾಗಿ ಜಯ ಘೋಷಗಳನ್ನ ಹಾಕಿದ್ದೇವೆ. ಸರಕಾರಿ ಕಾರ್ಯಕ್ರಮ ವಾಗಿದ್ದರೆ ಸಿಎಂ ಸಿದ್ದರಾಮಯ್ಯ ಪರವಾಗಿಯೂ, ಜಯ ಘೋಷಗಳನ್ನು ಹಾಕುತ್ತೇವೆ.
ಸಿದ್ದರಾಮಯ್ಯ ಅದ್ಭುತ ನಾಯಕ, ಅವರು ನಾಯಕರನ್ನು ಬೆಳೆಸುವವರು. ಸಿ ಎಂ ಪಟ್ಟವನ್ನು ಡಿಕೆಶಿಗೆ ವಹಿಸಿಕೊಟ್ಟರೆ ನಮಗೆ ತುಂಬಾ ಸಂತೋಷ ಎಂದು ಡಿಕೆಶಿ ಮೇಲಿನ ತಮ್ಮ ಅಭಿಮಾನವನ್ನು ಮಾಧ್ಯಮದ ಮುಂದೆ ಸ್ಪಷ್ಟವಾಗಿ ತೋರ್ಪಡಿಸಿದರು.
ಹಾಗೂ ಮಾಧ್ಯಮದ ಲೋಗೋ ಗಳ ಮುಂದೆ ಸಿಎಂ ಪರವಾಗಿ ಘೋಷಣೆಗಳನ್ನು ಕೂಗಿದರು. ಡಿಕೆಶಿ ಮತ್ತು ಸಿಎಂ ಸಿದ್ದರಾಮಯ್ಯ ನಡುವೆ ಯಾವುದೇ ಗೊಂದಲವಿಲ್ಲ ಇದು ಮಾಧ್ಯಮಗಳ ಸೃಷ್ಟಿ ಎನ್ನುವುದನ್ನು ಹೇಳಲು ಮರೆಯಲಿಲ್ಲ 😁
ಒಂದು ಕಾಲದಲ್ಲಿ ಐವನ್ ಡಿಸೋಜಾ ಕಾಂಗ್ರೆಸ್ ನಾಯಕರು ಆಗಿದ್ದಾಗ ಯುವ ಕಾಂಗ್ರೆಸ್ಸಿಗೆ ಮಿಥುನ್ ರೈ ಅವರನ್ನ ನಾಯಕತ್ವ ನೀಡಿ ಬೆಳೆಸಿದ್ದರು.
ಹೀಗೆ ನಾಯಕನಾಗಿ ಬೆಳೆದ ಮಿಥುನ್ ರೈ ಲೋಕಸಭೆ ಮತ್ತು ವಿಧಾನಸಭೆಗೂ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ.
ಗುರು ಶಿಷ್ಯರು ಭಿನ್ನ ಬಣ !
ಇದೀಗ ಮಿಥುನ್ ರೈ ಡಿಕೆಶಿ ಪರವಾಗಿ ಘೋಷಣೆಗಳನ್ನು ಕೂಗಿದರೆ ಸಿಎಂ ಸಿದ್ದರಾಮಯ್ಯ ಪರವಾಗಿ ಘೋಷಣೆಗಳನ್ನು ಕೂಗಿದರು.
ಜನತಾ ದಳದಲ್ಲಿದ್ದಾಗ ಸಿದ್ದರಾಮಯ್ಯ ಮತ್ತು ಐವನ್ ಡಿಸೋಜಾ ಆತ್ಮೀಯರು. ಕಾಂಗ್ರೆಸ್ ಸೇರಿದ ಬಳಿಕ ಸಿದ್ದರಾಮಯ್ಯ ಅಭಿಮಾನಿಯಾಗಿ ಗುರುತಿಸಿಕೊಂಡಿದ್ದು ಇದೇ ಕಾರಣಕ್ಕೆ ವಿಧಾನ ಪರಿಷತ್ ನಾಮನಿರ್ದೇಶನ ಕೂಡ ಮಾಡಿಸಿಕೊಂಡಿದ್ದರು. ಸಮರ್ಥ ವಾಗಿ ನಿಭಾಯಿಸಿದ್ದು ಮಾತ್ರವಲ್ಲದೆ ಇದೀಗ ವಿಧಾನಪರಿಷತ್ ನಲ್ಲಿ ಶಾಸಕನಾಗಿ ಆಯ್ಕೆಯಾಗಿ ದ್ದಾರೆ.
