Mangaluru

37 ವರ್ಷಗಳಲ್ಲಿ 279 ಮೃತದೇಹ ಹೂಳಲಾಗಿದೆ 219 ಗಂಡಸರು 49 ಮಹಿಳೆಯರು

Posted on

Share
:  ಆಸುಪಾಸಿನಲ್ಲಿ ಅತ್ಯಾಚಾರ ಕೊಲೆ ನಡೆಸಿ ನೂರಾರು ಹೆಣ್ಣು ಮಕ್ಕಳ ಶವಗಳನ್ನು ಹೂಳಲಾಗಿದೆ. ಎಂಬ ಆರೋಪದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿನಲ್ಲಿ ಈ ಕುರಿತು ಅಧಿಕೃತ ಮಾಹಿತಿ ಕೇಳಿದಾಗ 37 ವರ್ಷಗಳಲ್ಲಿ 279 ಮತ್ತು ಶವಗಳನ್ನು ಊಡಲಾಗಿದೆ ಎಂಬ ಅಧಿಕೃತ ಮಾಹಿತಿ ಲಭಿಸಿದೆ
ಹೂತ ಮೃತದೇಹಗಳ ವಿವರಗಳನ್ನು ಮಾಹಿತಿ ಹಕ್ಕಿನಡಿ ಕೇಳಿದಾಗ ಸಿಕ್ಕಿರೋದು ಇಷ್ಟು.
1987 ರಿಂದ 2025 ರ ಅವಧಿಯಲ್ಲಿ ಧರ್ಮಸ್ಥಳ ಆಸುಪಾಸಿನಲ್ಲಿ ಶಿಶುಗಳದ್ದೂ ಸೇರಿದಂತೆ 279 ಶವಗಳನ್ನು ಹೂಳಲಾಗಿದೆ. ಇವುಗಳಲ್ಲಿ ಹೆಚ್ಚಿನವು ಆತ್ಮಹತ್ಯೆ ಪ್ರಕರಣಗಳು
ಧರ್ಮಸ್ಥಳ ಆಸುಪಾಸಿನಲ್ಲಿ ಹೂಳಲಾದ 279 ಅನಾಥ ಶವಗಳಲ್ಲಿ 219 ಪುರುಷರ ಶವಗಳು,
 46 ಮಹಿಳೆಯರ ಶವ, ಶಿಶುಗಳದ್ದು ಸೇರಿದಂತೆ 14 ಶವಗಳ ಲಿಂಗವನ್ನು ಗುರುತಿಸಲು ಸಾಧ್ಯವಾಗಿಲ್ಲ
  ಧರ್ಮಸ್ಥಳ ಗ್ರಾಮ ಪಂಚಾಯತಿಯ ಸಾರ್ವಜನಿಕ ಮಾಹಿತಿ ಅಧಿಕಾರಿ (ಪಿಐಒ) ಅವರಿಂದ ಆರ್‌ಟಿಐ ಅಡಿಯಲ್ಲಿ ಪಡೆದಾಗ ಸಿಕ್ಕಿದ ಖಚಿತ ಮಾಹಿತಿ.
2003-2004, 2006-2007 ಮತ್ತು 2014-2015ರ ಅವಧಿಯಲ್ಲಿ 17 ಅನಾಥ ಶವಗಳನ್ನು ಹೂಳಲಾಗಿದೆ.
2015-25 ವರೆಗೆ 10 ವರ್ಷಗಳಿಂದ 101 ಅನಾಥ ಶವಗಳನ್ನು ಹೂಳಲಾಗಿದೆ. ಧರ್ಮಸ್ಥಳದ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿಂದಿನ ವೈದ್ಯರೊಬ್ಬರ‌ ಪ್ರಕಾರ ಶವಗಳು ಕಾಡಿನೊಳಗೆ ಪತ್ತೆಯಾಗಿದೆ.
ತನಿಖೆಗೆ ವಿದೇಶದ ತಂತ್ರಜ್ಞಾನ
ಅನಾಮಿಕ ಗುರುತಿಸಿದ ಸಮಾಧಿ ಸ್ಥಳಗಳಲ್ಲಿ ಸಿಕ್ಕಿದ ಮೂಳೆ ಸಮಗ್ರ ಮಾಹಿತಿ ಪತ್ತೆಗೆ ಅತ್ಯಾಧುನಿಕ ವಿದೇಶಿ ತಂತ್ರಜ್ಞಾನ ಬಳಕೆ‌ ಮಾಡಲು ನಿರ್ಧರಿಸುವ ವಿಚಾರ ತಿಳಿದು ಬಂದಿದೆ.
 ಅಸ್ಪಾರ್ಟಿಕ್ ಅಮಿನೋ ಆ್ಯಸಿಡ್ ರೆಸಮೈಜಸನ್‌, ಇನ್ಫ್ರಾರೆಡ್‌ ಸ್ಪೆಕ್ಟ್ರೋಸ್ಕೋಫಿ ಹಾಗೂ ರಾಮನ್‌ ಸ್ಪೆಕ್ಟ್ರೋಸ್ಕೋಫಿ ಪರೀಕ್ಷೆ.
ದೇಶದಲ್ಲೇ ಮೊದಲ ಬಾರಿಗೆ ಇಂತಹ ತಂತ್ರಜ್ಞಾನವನ್ನು ಅಪರಾಧ ಪ್ರಕರಣ ಸಂಬಂಧಿಸಿ ಬಳಸಲಾಗುತ್ತದೆ.‌ ವಿದೇಶದ ವಿಧಿ ವಿಜ್ಞಾನ ಪ್ರಯೋಗಾಲದ ತಜ್ಞರ ನೆರವು ಪಡೆಯಲು  ರಾಜ್ಯದ ಎಫ್‌ಎಸ್‌ಎಲ್ ತಜ್ಞರೇ ಶಿಫಾರಸು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ತಂತ್ರಜ್ಞಾನದಿಂದ ಏನು ಲಾಭ?
ತಲೆ ಬುರುಡೆ ಉತ್ಕನನದಲ್ಲಿ 17 ಪಾಯಿಂಟ್ ಗಳಲ್ಲಿ 20 ಕಡೆ ಶೋಧಿಸಿದಾಗ 6ನೇ ಪಾಯಿಂಟ್‌ನಲ್ಲಿ ಮೂಳೆಗಳು ಪತ್ತೆಯಾಗಿದ್ದವು. ಮರಣೋತ್ತರ ಪರೀಕ್ಷೆಯಲ್ಲಿ ಇವು ಪುರುಷನಿಗೆ ಸೇರಿದ ಮೂಳೆಗಳಾಗಿವೆ ಎಂದು ಖಚಿತವಾಯಿತು.
ಆದರೆ ಹೆಣ ಹೂತದ್ದು ಯಾವಾಗ. ಮೊದಲೇ ಹೂತದ್ದೆ? ನಂತರ ಹೂಳಲಾಯಿತೆ. ಮೊದಲೇ ಹೂತು ಹಾಕಿದ್ದರೆ.
 ಹೂತು ಹಾಕಿದ್ದು ಯಾವಾಗ ಎಂಬ ನಿರ್ದಿಷ್ಟ ಕಾಲದ ಮಾಹಿತಿ ಹೊರಬಂದಿಲ್ಲ.
ಹೀಗಾಗಿ ವಿದೇಶದಲ್ಲಿ ಚಾಲ್ತಿಯಲ್ಲಿರುವ ಮೂರು ಮಾದರಿಯ ಪರೀಕ್ಷೆಗೆ ಚಿಂತನೆ ನಡೆದಿದೆ.
ಗುಂಡಿ‌ತೋಡುವ‌ ಮುನ್ನ..
ಮತ್ತಷ್ಟು ಗುಂಡಿ ತೋಡಿ ಮೂಳೆ ಹುಡುಕುವ ಪ್ರಯತ್ನ ಮಾಡುವ ಮೊದಲು ಚಿಕ್ಕ ಮೂಳೆಗಳ ಕೂತ ವಿಷಯಗಳ ಬಗ್ಗೆ ತನಿಖೆ ಮಾಡಿ ಅದಾದ ಬಳಿಕ ಮುಸುಕು ದಾರಿಯ ಮಂಪರು ಪರೀಕ್ಷೆ ನಡೆಸಿದರೆ ವ್ಯರ್ಥ ವಿಳಂಬ ಮಾಡುವುದು ತಪ್ಪುತ್ತದೆ ಎಂಬ ಸಲಹೆ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ

Most Popular

Exit mobile version