DAKSHINA KANNADA

ನಿಯಂತ್ರಣ ತಪ್ಪಿ ಕಂಪೌಂಡ್ ಗೊಡೆಗೆ ಸ್ಕೂಟರ್ ಡಿಕ್ಕಿ ಸವಾರ ಸಾವು

Posted on

Share
ಉಳ್ಳಾಲ : ಸವಾರನ ನಿಯಂತ್ರಣ ತಪ್ಪಿ ಸ್ಕೂಟರ್ ಕಂಪೌಂಡ್ ಗೊಡೆದೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸಾವನಪ್ಪಿದ ಘಟನೆ ಮಂಗಳವಾರ ರಾತ್ರಿ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಅಂಬಿಕಾ ರಸ್ತೆ ಎಂಬಲ್ಲಿ ನಡೆದಿದೆ. ಮೃತರನ್ನು ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ಮಹಾಲಕ್ಷ್ಮೀ ಮಂದಿರ ಬಳಿಯ ನಿವಾಸಿ ರಾಘವೇಂದ್ರ ಸಾಲ್ಯಾನ್ (44)ಯಾನೆ ರಘು ಎಂದು ಗುರುತಿಸಲಾಗಿದೆ.
ಖಾಸಗಿ ಕಂಪನಿಯೊಂದರಲ್ಲಿ ಇಲೆಕ್ಟಿಕಲ್ ಗುತ್ತಿಗೆದಾರರಾಗಿದ್ದ ರಾಘವೇಂದ್ರ ಅವರು ಮಂಗಳವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಅಂಬಿಕಾ ರಸ್ತೆಯ ನಿರ್ಮಲಾ ಟ್ರಾವೆಲ್ಸ್ ಗ್ಯಾರೇಜ್ ಬಳಿ ರಸ್ತೆ ಅಪಘಾತ ನಡೆದಿದೆ. ಘಟನೆಯಲ್ಲಿ ರಾಘವೇಂದ್ರ ಅವರ ತಲೆಯು ರಸ್ತೆ ಬದಿಯ ಆವರಣ ಗೋಡೆಗೆ ಬಡಿದ ಗಂಭೀರ ಗಾಯಗೊಂಡಿದ್ದರು. ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ದಾರಿ ಮಧ್ಯದಲ್ಲೇ ಅವರು ಸಾವನಪ್ಪಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ

Most Popular

Exit mobile version