CRIME NEWS
ಧರ್ಮಸ್ಥಳ: ಮಹಿಳೆಯರ ಅಸ್ಥಿಪಂಜರಗಳ ಫೋಟೋ ಪತ್ತೆ! ನಿಜವಾಗಿಯೂ ಧರ್ಮಸ್ಥಳದ್ದೆ? ಯಾವ ಸಂದರ್ಭದಲ್ಲಿ ತೆಗೆದದ್ದು! Digvijaya news ಫ್ಯಾಕ್ಟ್ ಚೆಕ್
ಧರ್ಮಸ್ಥಳದಲ್ಲಿ ಹೆಣ್ಣು ಮಕ್ಕಳ ಅಸ್ಥಿಪಂಜರ ಪತ್ತೆಯಾಗಿದೆ ಎಂದು ತೆಲುಗು ಭಾಷೆಯಲ್ಲಿ ಒಕ್ಕಣೆ ಬರೆದಿರುವಂತಹ ಅಸ್ಥಿಪಂಜರಗಳ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ಬಗ್ಗೆ ದಿಗ್ವಿಜಯ ನ್ಯೂಸ್ ಫ್ಯಾಕ್ಚ್ ಚೆಕ್ ಮಾಡಿದಾಗ ತಿಳಿದು ಬಂದದ್ದು ಇಷ್ಟು. ಈ ಫೋಟೋವು 2011 ಮತ್ತು 2013 ರ ನಡುವೆ ಫ್ರಾನ್ಸ್‌ನ ರೆನ್ನೆಸ್‌ನಲ್ಲಿರುವ ಜಾಕೋಬಿನ್ಸ್ ಕಾನ್ವೆಂಟ್‌ನಲ್ಲಿ ನಡೆದ ಉತ್ಕನನ ಸಂದರ್ಭ ಪತ್ತೆಯಾಗಿರುವ ಅಸ್ತಿಪಂಜರಗಳ ಫೋಟೋ.
ಆದರೆ, ವೈರಲ್ ಫೋಟೋವು ತಲೆಬುರುಡೆಗಳನ್ನು ಹೊಂದಿರುವ ಹಲವಾರು ಅಸ್ಥಿಪಂಜರಗಳನ್ನು ತೋರಿಸುತ್ತಿದೆ.
ಆದರೆ ಧರ್ಮಸ್ಥಳ ಪರಿಸರದಲ್ಲಿ ನಡೆಸಿದ ಎಸ್ ಐ ಟಿ ಇದುವರೆಗಿನ ಉತ್ಕನನದಲ್ಲಿ ಒಂದು ಕಡೆ ಅಸ್ತಿಪಂಜರ ಸಿಕ್ಕಿದ್ದರೆ ಇನ್ನೊಂದು ಕಡೆ ಭೂಮಿಯ ಮೇಲ್ಭಾಗದಲ್ಲಿ ಅಸ್ತಿ ಪಂಜರ ಪತ್ತೆಯಾಗಿದೆ. ಎರಡೂ ಗಂಡಸಿನ ಅಸ್ತಿ ಪಂಜರ ಎಂಬುದು ವಿಶ್ವವಾಣಿಯ ಪತ್ರಿಕೆಯಲ್ಲಿ ಬರೆಯಲಾಗಿದೆ.
ಅಲ್ಲದೆ ಎಸ್ಐಟಿ ಈವರೆಗೆ ಉತ್ಖನನದ ಕುರಿತು ಯಾವುದೇ ಫೋಟೋ ಬಿಡುಗಡೆ ಮಾಡಿಲ್ಲ. ಹೀಗಾಗಿ ಇದು ಧರ್ಮಸ್ಥಳ ಉತ್ಖನನಗಳಿಗೆ ಸಂಬಂಧಿಸಿದ್ದಲ್ಲ ಎಂದು ಪ್ಯಾಕ್ಟ್ ಚೆಕ್ನಲ್ಲಿ ದೃಢಪಟ್ಟಿದೆ.♦