KARNATAKA

ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಗೌರವ ಡಾಕ್ಟರೇಟ್: ದಾನ ಶೂರ ಕರ್ಣ (HS Shetty) ನಿಗೆ ಗೌರವ

Posted on

Share

Ji

ಕೋಲಾರ: ಉದ್ಯಮಿ ಹಾಲಾಡಿ ಶ್ರೀನಿವಾಸ ಶೆಟ್ಟಿ (ಸಾಮಾಜಿಕ ಸೇವಾ ಕ್ಷೇತ್ರ), ಜಾನಪದ ಗಾಯಕ, ರಂಗಕರ್ಮಿ ಪಿಚ್ಚಳ್ಳಿ ಶ್ರೀನಿವಾಸ್ (ಸಂಗೀತ ಮತ್ತು ರಂಗಭೂಮಿ ಕ್ಷೇತ್ರ) ಹಾಗೂ ಹೋಟೆಲ್ ಉದ್ಯಮಿ ರಾಧಾಕೃಷ್ಣ ಅಡಿಗ (ಉದ್ಯಮ ಕ್ಷೇತ್ರ) ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಪ್ರಕಟಿಸಿದೆ.

ವಿಶ್ವವಿದ್ಯಾಲಯದ 5ನೇ ವಾರ್ಷಿಕ ಘಟಿಕೋತ್ಸವ ನಗರ ಹೊರವಲಯದ ನಂದಿನಿ ಪ್ಯಾಲೇಸ್‍ನಲ್ಲಿ ಶುಕ್ರವಾರ (ಆ.1) ನಡೆದಿದೆ. ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಗೌರವ ಡಾಕ್ಟರೇಟ್‌ ಹಾಗೂ ಪದವಿ ಪ್ರದಾನ ಮಾಡಿದರು.

ಹಾಲಾಡಿ ಶ್ರೀನಿವಾಸಶೆಟ್ಟಿ (ಎಚ್.ಎಸ್.ಶೆಟ್ಟಿ) ಚಿಕ್ಕಂದಿನಲ್ಲೇ ಮುಂಬೈ ಸೇರಿ ನಂತರ ಬಹ್ರೈನ್‍ಗೆ ತೆರಳಿ ಉದ್ಯಮದಲ್ಲಿ ತೊಡಗಿದರು. ವಾಪಸ್ ಬೆಂಗಳೂರಿಗೆ ಬಂದು ಮೈಸೂರು ಮೆರ್ಕ್ಯಾಂಟೈಲ್‌ ಕಂಪನಿ (ಎಂಎಂಸಿಎಲ್‌) ಸ್ಥಾಪಿಸಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಅತ್ಯುತ್ತಮ ರಫ್ತುದಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಸೂರಿಲ್ಲದ ಕೊರಗರಿಗೆ ನೂರು ಮನೆ ಕಟ್ಟಿಸಿಕೊಡುವ ಕಾರ್ಯಕ್ಕೆ ಕೈ ಹಾಕಿದ್ದಾರೆ. 41ಸಾವಿರಕ್ಕೂ ಅಧಿಕ ಮಕ್ಕಳಿಗೆ ವರ್ಷವೂ ಉಚಿತ ಸಮವಸ್ತ್ರ ನೀಡಿದ್ದಾರೆ. ಖಾಸಗಿ ಪಾಲುದಾರತ್ವದ ಸರ್ಕಾರಿ ಶಾಲೆಯ ಸ್ಥಾಪನೆಗೆ ಕಾರಣರಾಗಿದ್ದಾರೆ

 

Most Popular

Exit mobile version