DAKSHINA KANNADA
ಮಂಗಳೂರಿಗೆ ಅಪ್ಪಿ ದಕ್ಷಿಣ ಕನ್ನಡ ಜಿಲ್ಲೆಗೆ ಉಷಾ
ಮಂಗಳೂರು ಕಾಂಗ್ರೆಸ್ ಅಧ್ಯಕ್ಷೆ ಅಪ್ಪಿ
ದಕ್ಷಿಣಕನ್ನಡ ಜಿಲ್ಲಾ ಗ್ರಾಮಾಂತರಕ್ಕೆ ಊಷಾ ಅಧ್ಯಕ್ಷೆ
ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಹಿಳಾ ಕಾಂಗ್ರೇಸ್ ಗೆ ಇಬ್ಬರು ನೂತನ ಅಧ್ಯಕ್ಷರುಗಳನ್ನು ನೇಮಕ ಮಾಡಲಾಗಿದೆ. ಒಬ್ಬರು ನಗರಕ್ಕೆ ಅಧ್ಯಕ್ಷರಾದರೆ ಮತ್ತೊಬ್ಬರು ಗ್ರಾಮೀಣ ಜಿಲ್ಲಾ ಅಧ್ಯಕ್ಷರಾಗಿರುತ್ತಾರೆ.
ದಕ್ಷಿಣಕನ್ನಡ ಜಿಲ್ಲಾ ಕಾಂಗ್ರೇಸ್ ಮಹಿಳೆಯರಿಗಾಗಿ ಜಿಲ್ಲೆಯನ್ನು ಎರಡು ಘಟಕಗಳನ್ನಾಗಿ ವಿಭಾಗಿಸಲಾಗಿದೆ. ಒಂದು ದಕ್ಷಿಣಕನ್ನಡ ಜಿಲ್ಲೆಯ ನಗರ ಭಾಗ ಮತ್ತೊಂದು ಗ್ರಾಮೀಣ ಭಾಗ. ಇದೀಗ ಎರಡು ಘಟಕಕ್ಕೂ ನೂತನ ಅಧ್ಯರುಗಳ ನೇಮಕ ವಾಗಿದ್ದು, ಮಂಗಳೂರು ನಗರ ಜಿಲ್ಲಾ ಅಧ್ಯಕ್ಷರಾಗಿ ಅಪ್ಪಿ.ಎಸ್ ಮತ್ತು ಮತ್ತು ಗ್ರಾಮೀಣ ಜಿಲ್ಲಾ ಅಧ್ಯಕ್ಷರಾಗಿ ಉಷಾ ಅಂಚನ್ ನೇಮಕಗೊಂಡಿದ್ದಾರೆ.
ಇದೇ ವೇಳೆ ದ.ಕ. ಜಿಲ್ಲೆಯ ಇಬ್ಬರನ್ನು ರಾಜ್ಯ ಮಹಿಳಾ ಕಾಂಗ್ರೆಸ್‌ನ ಪದಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ. ರಾಜ್ಯ ಮಹಿಳಾ ಕಾಂಗ್ರೆಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನಮಿತಾ ಡಿ ರಾವ್ ಮತ್ತು ರಾಜ್ಯ ಕಾರ್ಯದರ್ಶಿಯಾಗಿ ಝೀನತ್ ಅವರನ್ನು ನೇಮಕ ಮಾಡಲಾಗಿದೆ. ಕರ್ನಾಟಕ ರಾಜ್ಯ ಮಹಿಳಾ ಕಾಂಗ್ರೆಸ್ ನಿಂದ ಕಳುಹಿಸಲಾದ ಪದಾಧಿಕಾರಿಗಳ ನೇಮಕಾತಿಯ ಪಟ್ಟಿಯನ್ನು ಮಹಿಳಾ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷೆ ಅಲ್ಕಾ ಲಂಬಾ ಅಂಗೀಕರಿಸಿ, ಆದೇಶ ಹೊರಡಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.