CRIME NEWS

ಎಳೆಯ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಖ್ಯಾತ ಸೋಶಿಯಲ್ influencer ಸೆರೆ! ಚಾಲೂ ಕಿಂಗ್

Posted on

Share

ಕುಖ್ಯಾತನಾದ ಚಾಲೂ ಕಿಂಗ್

ಮಂಗಳೂರು: ಮದುವೆಯಾಗಿ ಮೂವರು ಮಕ್ಕಳಿದ್ದರೂ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಆಕೆಯನ್ನು ಮದುವೆಯಾಗುವುದಾಗಿ ಸುಳ್ಳು ಭರವಸೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ವರ್ಷದ ಕೇರಳದ ಯೂಟ್ಯೂಬರ್ ಒಬ್ಬನನ್ನು ಮಂಗಳೂರಿನ ಏರ್ ಪೋರ್ಟ್ ನಲ್ಲಿ

ಶಾಲೂ ಕಿಂಗ್ ಚಾಲು ಕಿಂಗ್

ಬಂಧಿಸಲಾಗಿದೆ

ಕಾಸರಗೋಡು ನಿವಾಸಿ ಮುಹಮ್ಮದ್ ಸಾಲಿ ಬಂಧಿತ. ಆರೋಪಿ ವಿದೇಶದಿಂದ ಹಿಂದಿರುಗಿದಾಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೊಯಿಲಾಂಡಿ ಪೊಲೀಸರು ಬಂಧಿಸಿದ್ದಾರೆ.
ಕಳೆದ ಏಳು ವರ್ಷಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯನಾಗಿದ್ದ ಸಾಲಿ, ಶಾಲು ಕಿಂಗ್ ಮೀಡಿಯಾ, ಶಾಲು ಕಿಂಗ್ ವ್ಲಾಗ್ಸ್ ಮತ್ತು ಶಾಲು ಕಿಂಗ್ ಫ್ಯಾಮಿಲಿ ಸೇರಿದಂತೆ ವಿವಿಧ ಹೆಸರುಗಳಲ್ಲಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹೊಂದಿದ್ದಾರೆ.

ಈತನಿಗೆ 2016 ರಲ್ಲಿ ಮದುವೆಯಾಗಿ ಮೂವರು ಮಕ್ಕಳಿದ್ದಾರೆ. ಪತ್ನಿಯಿಂದ ದೂರವಾಗಿದ್ದ ಸಮಯದಲ್ಲಿ ಇನ್‌ಸ್ಟಾಗ್ರಾಮ್ ಮತ್ತು ಸ್ನ್ಯಾಪ್‌ಚಾಟ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ಆಕೆಗೆ ನಾನು ಮದುವೆಯಾಗುತ್ತೇನೆ ಎಂದು ಹೇಳಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಈತನ ಮೇಲೆ ಪ್ರಕರಣ ದಾಖಲಾದ ನಂತರ, ಆರೋಪಿ ದೇಶ ಬಿಟ್ಟು ಪರಾರಿಯಾಗಿದ್ದಾನೆ. ಕೊಯಿಲಾಂಡಿ ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಿದ್ದು, ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಆತನನ್ನು ಬಂಧಿಸಲಾಗಿದೆ.

Most Popular

Exit mobile version