DAKSHINA KANNADA

ಉಳ್ಳಾಲಕ್ಕೆ ಕಾರಲ್ಲಿ ಬಂದಿದ್ದ ನಾಲ್ವರು ಯುವಕರು ಸಂಪಾಜೆ ಬಳಿ ಅಪಘಾತಕ್ಕೆ ಬಲಿ

Share

ಸಂಪಾಜೆ : ಕಾರು ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು  ದಾರುಣವಾಗಿ ಮೃತಪಟ್ಟಿದ್ದಾರೆ.

ಸಂಪಾಜೆ ಬಳಿ ಭೀಕರ ಅಪಘಾತ

ಮಾಣಿ – ಮೈಸೂರು ರಾ.ಹೆದ್ದಾರಿಯ ಸಂಪಾಜೆ ಸಮೀಪದ ಕೊಯನಾಡಿನಲ್ಲಿ ಶುಕ್ರವಾರ  ಮಧ್ಯಾಹ್ನ ಅಪಘಾತ ನಡೆದಿದೆ.

ಕೊಡಗು ಜಿಲ್ಲೆಯ ಗೋಣಿಕೊಪ್ಪಲಿನ ಮಾರುಕಟ್ಟೆ ರಸ್ತೆಯ ನಿವಾಸಿಗಳಾದ ನಿಹಾದ್, ರಿಸ್ವಾನ್, ರಾಶಿಬ್ ಮತ್ತು ರಿಶು ಮೃತಪಟ್ಟವರು.

ಇಬ್ಬರು ಅಪಘಾತ ನಡೆದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ ಇಬ್ಬರು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಉಳ್ಳಾಲಕ್ಕೆ ಬಂದಿದ್ದ ಯಾತ್ರಿಗಳು:

ಗೊಣಿಕೊಪ್ಪಲು ಮತ್ತು ಹುಣಸೂರಿನ ನಾಲ್ವರು ಯುವಕರು ದ.ಕ. ಜಿಲ್ಲೆಯ ಉಳ್ಳಾಲಕ್ಕೆ ಗುರುವಾರ ಕಾರಿನಲ್ಲಿ ತೆರಳಿದ್ದವರು ಅಲ್ಲಿಂದ ಶುಕ್ರವಾರ ವಾಪಸ್ಸಾಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಕಾರಿಗೆ ಮಡಿಕೇರಿ ಕಡೆಯಿಂದ ಸುಳ್ಯದತ್ತ ಬರುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ. ಕೊಡಗು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

To Top