DAKSHINA KANNADA

ಕಾಂಗ್ರೆಸ್ ಸರ್ಕಾರದ ತುಘಲಕ್ ನೀತಿ ಬಟಾ ಬಯಲು – ಹರೀಶ್ ಪೂಂಜ

Share

ಜಿ ಎಸ್ ಟಿ ನೋಟಿಸ್ ಹಿಂಪಡೆದ ರಾಜ್ಯ ಸರ್ಕಾರ : ♦

ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ:
ಯೋಜನಾ ಬದ್ಧವಲ್ಲದ ಅವೈಜ್ಞಾನಿಕ ಗ್ಯಾರಂಟಿಗಳಿಂದ ತನ್ನ ಆಶ್ವಾಸನೆಯನ್ನು ಅನುಷ್ಠಾನಗೊಳಿಸಲೂ ಆಗದೆ ಇತ್ತ ದಿವಾಳಿಯಂಚಿಗೆ ತಲುಪಿದ ಆರ್ಥಿಕ ವ್ಯವಸ್ಥೆಯನ್ನು ವಾಮ ಮಾರ್ಗದ ಮೂಲಕ ಬೀದಿ ಬದಿಯ ವ್ಯಾಪಾರಿಗಳಿಗೆ ಜಿ ಎಸ್ ಟಿ ನೋಟಿಸ್ ಕಳುಹಿಸಿ ಭರ್ತಿ ಮಾಡಲು ವಿಫಲ ಯತ್ನ ನಡೆಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ನೋಟಿಸ್ ಅನ್ನು ಹಿಂಪಡೆದಿದೆ. ಇದನ್ನು ಗಮನಿಸಿದಾಗ ಶಾಲಾ ಪಠ್ಯಪುಸ್ತಕದಲ್ಲಿ ಓದಿದ ತುಘಲಕ್ ದರ್ಬಾರ್ ನ್ನು ನೆನಪಿಗೆ ತರುತ್ತದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರತಿಕ್ರಿಯಿಸಿದ್ದಾರೆ.
ಜಿ ಎಸ್ ಟಿ ಕಾಯ್ದೆಯ ಪ್ರಕಾರ ಹಾಲು, ತರಕಾರಿ, ಮಾಂಸ, ಹಣ್ಣಿನಂತಹ ಆಹಾರ ವಸ್ತುಗಳಿಗೆ ತೆರಿಗೆ ವಿನಾಯಿತಿ ಇದೆ ಎಂಬ ಅರಿವಿದ್ದರೂ, ಬೀದಿ ಬದಿಯ ವ್ಯಾಪಾರಿಗಳಿಗೆ ಸಣ್ಣವರ್ತಕರಿಗೆ ವಹಿವಾಟು ರೂ. 40 ಲಕ್ಷ ದಾಟಿದೆ ಎಂಬ ನೆಪದಲ್ಲಿ ಅವರ ಹೊಟ್ಟೆಗೆ ಹೊಡೆಯಲು ಯತ್ನಿಸಿ, ಶೇ. 18ರಂತೆ ತೆರಿಗೆ, ಬಡ್ಡಿ, ದಂಡ ಇತ್ಯಾದಿಗಳನ್ನು ನಮೂದಿಸಿದರು.‌

ನಿಯಮ ಬಾಹಿರವಾಗಿ ನೋಟಿಸ್ ನೀಡಿದ ರಾಜ್ಯ ಸರಕಾರ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿತ್ತು. ಈಗ ನಿಜ ಬಣ್ಣ ಈಗ ರಾಜ್ಯದ ಜನತೆಯ ಮುಂದೆ ಬಟಾಬಯಲಾಗಿದೆ – ಹರೀಶ್ ಪೂಂಜ, ಬೆಳ್ತಂಗಡಿ ಶಾಸಕರು

To Top