CRIME NEWS

ವಿಟ್ಲ ಅಪಘಾತ: ನವವಿವಾಹಿತನ ಸಾವು

Posted on

Share

 

ವಿಟ್ಲ: ಆಲ್ಟೋ ಕಾರು ಮತ್ತು ಮಿನಿ ಟಿಪ್ಪರ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾರು ಚಾಲಕ ಅಮೃತ ಪಟ್ಟಿದ್ದು ಕಾರಿನಲ್ಲಿದ್ದ ಚಾಲಕನ ಸಹೋದರಿ ಮತ್ತು ಮಗು ಗಂಭೀರವಾಗಿ ಗಾಯಗೊಂಡ ಘಟನೆ ವೀರಕಂಭ ಗ್ರಾಮದ ಕೆಲಿಂಜದಲ್ಲಿ ನಡೆದಿದೆ.
ಅನಂತಾಡಿ ಆಶ್ವತ್ತಡಿ ಮೂಲದ ಅನೀಶ್
ಮೃತ ಚಾಲಕ. ಕಲ್ಲಡ್ಕದಿಂದ ವಿಟ್ಲ ಕಡೆ ಬರುತ್ತಿದ್ದ ಆಲ್ಟೊ ಕಾರಿಗೆ ವಿಟ್ಲದಿಂದ ಕಲ್ಲಡ್ಕ ಕಡೆ ಚಲಿಸುತ್ತಿದ್ದ ಮಿನಿ ಟಿಪ್ಪರ್ ಢಿಕ್ಕಿ ಹೊಡೆದಿದ್ದು, ಪರಿಣಾಮ ಕಾರಿನಲ್ಲಿದ್ದ ಅನೀಶ್ ಹಾಗೂ ಅವರ ಸಹೋದರಿ ಮತ್ತು ಮಗು ಗಂಭೀರ ಗಾಯಗೊಂಡಿದ್ದರು.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಸೋಮವಾರ ತಡರಾತ್ರಿ ಚಾಲಕ ಅನೀಶ್ ಅನಂತಾಡಿ (34) ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.  ಅನೀಶ್ ಕೇವಲ ಎರಡು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು ಮತ್ತು  ಕುಟುಂಬ ಸದಸ್ಯರನ್ನು ಬಿಡಲು ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ.

 

Most Popular

Exit mobile version