Mangaluru
ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಹೊಟೇಲ್ ಉದ್ಯಮಿ ನಿತಿನ್ ಪೂಜಾರಿ
ಮಂಗಳೂರು: ಕದ್ರಿಯಲ್ಲಿ ಕೊಡಕ್ಕೆನ ಹೆಸರಿನ ಹೊಟೇಲ್ ನಡೆಸುತ್ತಿದ್ದ ಹೊಟೇಲ್ ಉದ್ಯಮಿ ನಿತಿನ್ ಪೂಜಾರಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.ಮಂಗಳೂರು ಪ್ರವಾಸ ಸ್ಥಳಗಳು
ಮಂಗಳೂರಿನ ಕದ್ರಿಯಲ್ಲಿ ಕೊಡಕ್ಕೆನ ಎಂಬ ಹೆಸರಿನ ಹೊಟೇಲ್ ಉದ್ಯಮ ನಡೆಸುತ್ತಿದ್ದ ನಿತಿನ್ ಪೂಜಾರಿ ನಿನ್ನೆ ರಾತ್ರಿ ಮಣ್ಣಗುಡ್ಡದ ಗುಂಡೂರಾವ್ ಲೇನಲ್ಲಿರುವ ಫ್ಲಾಟ್ ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಹೇಳಲಾಗಿದೆ. ಅವರನ್ನು ತಡರಾತ್ರಿ ಆಸ್ಪತ್ರೆಗೆ ಒಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಸುಕಿನಲ್ಲಿ ಮೃತಪಟ್ಟಿದ್ದಾರೆ.
ಬಿಜೆಪಿ ನಾಯಕರು, ಶಾಸಕರ ಜೊತೆಗೆ ಒಡನಾಟದಲ್ಲಿದ್ದ ನಿತಿನ್ ಎಂಟು ತಿಂಗಳ ಹಿಂದೆ ಸ್ವಂತ ಉದ್ಯಮ ಸ್ಥಾಪನೆಯ ಉದ್ದೇಶದಿಂದ ಕದ್ರಿಯಲ್ಲಿ ಕೊಡಕ್ಕೆನ ಹೆಸರಿನ ಹೊಟೇಲ್ ಸ್ಥಾಪನೆ ಮಾಡಿದ್ದರು. ಅದಕ್ಕೂ ಹಿಂದೆ ಮುಡಿಪಿನಲ್ಲಿ ಪಾಲುದಾರಿಕೆಯಲ್ಲಿ ಹೊಟೇಲ್ ನಡೆಸುತ್ತಿದ್ದರು. ನಾನ್ ವೆಜ್ ಊಟಕ್ಕಾಗಿ ಕದ್ರಿಯ ಹೊಟೇಲ್ ಅಲ್ಪ ಸಮಯದಲ್ಲಿ ಒಳ್ಳೆಯ ಹೆಸರು ಪಡೆದಿತ್ತು. ಮೂಲತಃ ಮರೋಳಿಯವರಾಗಿದ್ದು ಇತ್ತೀಚೆಗಷ್ಟೇ ಮಣ್ಣಗುಡ್ಡದಲ್ಲಿ ಫ್ಲಾಟ್ ಖರೀದಿಸಿ ತಾಯಿ ಜೊತೆಗೆ ನೆಲೆಸಿದ್ದರು.