CRIME NEWS
ನಕಲಿ ದೇವಮಾನವ ವಿರುದ್ಧ ಹೋರಾಟ ಎಂದು ಪಾದಯಾತ್ರೆಗೆ ಬಂದವರು ಠಾಣೆಯ ದರ್ಶನ ಪಡೆದು ವಾಪಸ್ ಹೋದರು! ಧರ್ಮಸ್ಥಳದ ಮಂಜುನಾಥನ ದರ್ಶನ ಸಿಗಲೇ ಇಲ್ಲ
ಬೆಳ್ತಂಗಡಿ: ಸೌಜನ್ಯಳಿಗೆ ನ್ಯಾಯಕೊಡಿಸಬೇಕು ಎಂದು ಒತ್ತಾಯಿಸಿ ಬೊಬ್ಬೆ ಹೊಡೆಯುತ್ತಾ ಗದ್ದಲ ಎಬ್ಬಿಸುತ್ತಿದ್ದ ಬೆಂಗಳೂರು ಯಲಹಂಕದ ಶರಣಬಸಪ್ಪ ಕಬ್ಜ ಮತ್ತು ತಂಡದವರನ್ನು ಸೋಮವಾರ ಧರ್ಮಸ್ಥಳದ ಸ್ಥಳೀಯರು ಮಹಾದ್ವಾರದ ಬಳಿ ತಡೆದು ಬುದ್ದಿ ಮಾತು ಹೇಳಿದ್ದಾರೆ.
ಈ ಸಂದರ್ಭ ಎರಡು ಗುಂಪಿನ ನಡುವೆ ಮಾತಿನ ಚಕಮಕಿ, ಗಲಾಟೆ ನಡೆದು ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕೊನೆಗೆ ಮಂಜುನಾಥನ ದರ್ಶನ ಸಿಗದೇ ಧರ್ಮಸ್ಥಳ ಪೊಲೀಸ್ ಠಾಣೆಯ ದರ್ಶನ ಮಾಡಿ ವಾಪಸು ತೆರಳಿದ ಪ್ರಸಂಗ ನಡೆದಿದೆ.
ಪೊಲೀಸರು ಮಧ್ಯಪ್ರವೇಶಿ ಪಾದಯಾತ್ರೆ ಬಂದವರನ್ನು ಠಾಣೆಗೆ ಕರೆದೊಯ್ದು ಪರಿಸ್ಥಿತಿ ಶಾಂತಗೊಳಿಸಿದರು.
ಸೋಮವಾರ ಮಧ್ಯಾಹ್ನದ ವೇಳೆಗೆ ಪಾದಯಾತ್ರೆಯಲ್ಲಿ ಬಂದ ಶರಣಬಸಪ್ಪ ಕಬ್ಜ ಹಾಗೂ ಇತರ ಹತ್ತು ಮಂದಿ ಧರ್ಮಸ್ಥಳಕ್ಕೆ ಬಂದರು.
ಘೋಷಣೆ ಪಲಕಗಳನ್ನು ಹಿಡಿದುಕೊಂಡು ಬರುತ್ತಿದ್ದ ತಂಡವು ಪಬ್ಲಿಕ್ ನ್ಯೂ ಸೆನ್ಸ್ ಉಂಟು ಮಾಡುತ್ತಿದ್ದು ಧರ್ಮಸ್ಥಳ ದ್ವಾರದ ಬಳಿ ಸ್ಥಳೀಯರ ಸುಮಾರು 50ಕ್ಕೂ ಹೆಚ್ಚು ಮಂದಿಯ ತಂಡ ದವರು ತಡೆದರು.
ಪಾದಯಾತ್ರೆ ಬಂದವರು ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಸ್ಥಳದ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಬಗ್ಗೆ ಆಕ್ಷೇಪಾರ್ಹವಾದ ಹೇಳಿಕೆಗಳನ್ನು ನೀಡಿದ್ದರು
ನಕಲಿ ದೇವಮಾನವ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿ ಪಾದಯಾತ್ರೆ ನಡೆಸುವುದಾಗಿ ಹೇಳಿದ್ದೀರಿ ಧರ್ಮಸ್ಥಳ ಕ್ಷೇತ್ರ ಬಿಟ್ಟು ಬೇರೆ ಎಲ್ಲಿಗೆ ಹೋಗಿದ್ದರೆ ನಿಮ್ಮನ್ನು ನಾವು ಪ್ರಶ್ನೆ ಮಾಡುತ್ತಿರಲಿಲ್ಲ. ಧರ್ಮಸ್ಥಳಕ್ಕೆ ಬಂದು ಇಲ್ಲಿ ಗದ್ದಲ ಎಬ್ಬಿಸುತ್ತಿದ್ದೀರಿ ನೀವು ಹೇಳಿದ ನಕಲಿ ದೇವಮಾನವ ಯಾರು ಎಂದು ಮೊದಲು ಸ್ಪಷ್ಟಪಡಿಸಿ- ಧರ್ಮಸ್ಥಳದ ಸ್ಥಳೀಯರು
ಸೌಜನ್ಯ ಪ್ರಕರಣದ ಬಗ್ಗೆ ಸ್ವಲ್ಪ ಜ್ಞಾನ ಇಲ್ಲದ 18 19 ವರ್ಷದ ಈ ತಂಡ ಕೇವಲ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಟಿ ಆರ್ ಪಿ ಹೆಚ್ಚಿಸಿಕೊಳ್ಳಲು ಹುಚ್ಚು ಹೇಳಿಕೆಗಳನ್ನ ನೀಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು.
ಧರ್ಮಸ್ಥಳ ಕ್ಷೇತ್ರದ ಬಗ್ಗೆ ಕೆಟ್ಟದಾಗಿ ಜಾಲತಾಣದಲ್ಲಿ ಬಿಂಬಿಸುತ್ತಿರುವ ಈ ತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಕ್ಷಮೆ ಕೇಳಬೇಕು ಎಂದು ಒತ್ತಾ ಯಿಸಿದರು.
ಈ ಸಂದರ್ಭ ಸ್ಥಳೀಯರು ಹಾಗೂ ಪಾದಯಾತ್ರಿಕರ ನಡುವೆ ಮಾತನ ಚಕಮಕಿ ನಡೆಯಿತು. ನೂಕು ನುಗ್ಗಲು ನಡೆಯಿತು. ಸುಮಾರು ಅರ್ಥ ಗಂಟೆಕಾಲ ನಡೆದ ಮಾತಿನ ಚಕಮಕಿ, ಗೊಂದಲಗಳ ಬಳಿಕ ಅಲ್ಲೇ ಇದ್ದ ಪೊಲೀಸರು ಮಧ್ಯಪ್ರವೇಶಿಸಿ ಪಾದಯಾತ್ರಿಕರನ್ನು ಅಲ್ಲಿಂದ ಧರ್ಮಸ್ಥಳ ಠಾಣೆಗೆ ಕರೆ ದೊಯ್ದರು. ಈ ವೇಳೆ ನೂರಾರು ಸಂಖ್ಯೆಯಲ್ಲಿ ಸ್ಥಳೀಯರು ಠಾಣೆಯ ಮುಂದೆ ಜಮಾಯಿಸಿ ಪಾದ ಯಾತ್ರಿಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿಜರು. ಪೊಲೀಸರ ಸೂಚನೆಯಂತೆ ಪಾದಯಾತ್ರಿಗಳ ಸದಸ್ಯರು ಠಾಣೆಯಿಂದಲೇ ಹಿಂತಿರುಗಿದ್ದಾರೆ.
- ಬಂದವರು ತಿರುಬೋಕಿಗಳು
ಸಾವಿರಾರು ಮಂದಿ ಧರ್ಮಸ್ಥಳಕ್ಕೆ ಪಾದಯಾತ್ರೆ ಬರುತ್ತಾರೆ. ವಿಶೇಷ ದಿನಗಳಲ್ಲಿ ಛತ್ರ ಸಿಗದೆ ಸಾವಿರಾರು ಮಂದಿ ರಸ್ತೆಯ ಬದಿಗಳಲ್ಲಿಯೂ ನಿಶ್ಚಿಂತೆಯಿಂದ ಮಲಗುತ್ತಾರೆ. ಇಂತಹ ಧರ್ಮಸ್ಥಳದಲ್ಲಿ ಸಾವಿರಾರು ಮಂದಿಗೆ ಬದುಕು ನೀಡಿದೆ ಲಕ್ಷಾಂತರ ಮಂದಿಗೆ ಅನ್ನದಾಸೋಹ ನಡೆಯುತ್ತಿದೆ. ಯಾವನೋ ಒಬ್ಬ ತಿರುಬೋಕಿ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಧರ್ಮ ಅಧಿಕಾರಿಯ ಬಗ್ಗೆ ಕೆಟ್ಟದಾಗಿ ಹೇಳಿಕೊಂಡು ಪಾದಯಾತ್ರೆ ಹೆಸರಲ್ಲಿ ಧರ್ಮಸ್ಥಳದ ಹೆಸರು ಕೆಡಿಸಲು ಬರುತ್ತಿದ್ದಾನೆ.
ನಾನು ಕೇರಳದವ ಇಲ್ಲಿ ಬಂದು ಬದುಕು ಕಟ್ಟಿಕೊಂಡಿದ್ದೇನೆ ನನ್ನಂಥ ಸಾವಿರಾರು ಜನರ ಬದುಕು, ಹಸನುಗಳಿಸಿದ ಕ್ಷೇತ್ರ ಧರ್ಮಸ್ಥಳ. ಇಂಥ ತಿರುಬೋಕಿಗಳಿಗೆ ತಕ್ಕ ಪಾಠ ಕಲಿಸಬೇಕು.
– ಧರ್ಮಸ್ಥಳದ ಸ್ಥಳೀಯರು
ಇವರು ಸೌಜನ್ಯ ಹೆಸರಿನಲ್ಲಿ ಪಾದದಯಾತ್ರೆ ನಡೆಸಿ ಪ್ರಚಾರ ಗಿಟ್ಟಿಸುವ ಕಾರ್ಯ ಮಾಡುತ್ತಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ, ಧರ್ಮಾಧಿಕಾರಿ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಇವರ ಈ ವರ್ತನೆಯಿಂದಾಗಿ ಧರ್ಮಸ್ಥಳದಲ್ಲಿ ಅನಗತ್ಯ ಗೊಂದಲಕ್ಕೆ ಕಾರಣವಾಗಿದೆ. ಇಂತಹ ವರ್ತನೆಗಳನ್ನು ಸಹಿಸಲು ಸಾಧ್ಯವಿಲ್ಲ”.
-ಚಂದ್ರ ಧರ್ಮಸ್ಥಳ ನಿವಾಸಿ
“ಧರ್ಮಸ್ಥಳದಲ್ಲಿ ನಡೆದಿರುವ ಅತ್ಯಾಚಾರ, ಕೊಲೆ ಪ್ರಕರಣಗಳ ಬಗ್ಗೆ ತನಿಖೆ ನಡೆದು ನ್ಯಾಯ ಸಿಗಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ನಾವು ಪಾದಯಾತ್ರೆಯಲ್ಲಿ ಬಂದರೂ ನಮಗೆ ದೇವರ ದರ್ಶನಕ್ಕೆ ಅವಕಾಶ ನೀಡಲಿಲ್ಲ ಇಲ್ಲಿ ನಮ್ಮ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ”.
-ಶರಣಬಸಪ್ಪ ಕಬ್ಜ, ಪಾದಯಾತ್ರಿಗಳ ಸದಸ್ಯ