CRIME NEWS

ಸುಳ್ಯದ ವಿದ್ಯಾರ್ಥಿ ಕಣ್ಣೂರಿನ ಕೆರೆಯಲ್ಲಿ ಮುಳುಗಿ ಸಾವು

Posted on

Share

ಸುಳ್ಯ : ತನ್ನ ಸ್ನೇಹಿತನ ಮನೆಗೆ ತೆರಳಿದ್ದ ಡೆಂಟಲ್ ಕಾಲೇಜ್ ಸ್ಟೂಡೆಂಟ್ ಕೇರಳದ ಕಣ್ಣೂರಿನ ಕೆರೆಯೊಂದರಲ್ಲಿ  ಮುಳುಗಿ ಮೃತಪಟ್ಟಿದ್ದಾರೆ.

ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಬಾಳಿಕಲ ನಿವಾಸಿ ಆಸ್ತಿಕ್ ರಾಘವ್ (19) ಮೃತಪಟ್ಟವರು.

ಸುಳ್ಯದ ನಿವೃತ್ತ ತಾಲೂಕು ಆರೋಗ್ಯಾಧಿಕಾರಿ ಡಾ.ನಂದ ಕುಮಾರ್ ಅವರ ಪುತ್ರ, ಮಂಗಳೂರಿನ ಖಾಸಗಿ ಡೆಂಟಲ್ ಕಾಲೇಜಿನಲ್ಲಿ ಪ್ರಥಮ ವರ್ಷದ ದಂತ ವಿಜ್ಞಾನ ಕಲಿಯುತ್ತಿದ್ದ ಆಸ್ತಿಕ್ ರಾಘವ್ ಮಂಗಳೂರಿನಿಂದ ತನ್ನ ಸಹಪಾಠಿಯೊಂದಿಗೆ ಕೇರಳದ ಕಣ್ಣೂರಿನ ಸಹಪಾಠಿ ಮನೆಗೆ ಭಾನುವಾರ ಬೆಳಿಗ್ಗೆ ಹೋಗಿದ್ದರು.

ಅಲ್ಲಿ ಅವರು ಮನೆ ಪಕ್ಕದ ಕೆರೆಗೆ ಸ್ನಾನಕ್ಕೆ ಹೋದಾಗ ಆಸ್ತಿಕ್ ಕಾಲು ಜಾರಿ ನೀರಿಗೆ ಬಿದ್ದು  ಮುಳುಗಿ ಸಾವನ್ನಪ್ಪಿದ್ದಾರೆ. ಘಟನೆ ಮಾಹಿತಿ ತಿಳಿದ ಮನೆಯವರು ಕೇರಳದ ಕಣ್ಣೂರಿನ ಘಟನಾ ಸ್ಥಳಕ್ಕೆ ತೆರಳಿದ್ದಾರೆ.  ಮೃತದೇಹವನ್ನು ಹುಟ್ಟೂರಿಗೆ ತರಲಾಗುತ್ತದೆ ಎಂದು ತಿಳಿದುಬಂದಿದೆ

Most Popular

Exit mobile version