LATEST NEWS

ಚಿರ ನಿದ್ರೆಗೆ ಜಾರಿದ ಸ್ಲೀಪಿಂಗ್ ಪ್ರಿನ್ಸ್! ಯಾರಿವನು ನಿದ್ರಿಸುವ ರಾಜಕುಮಾರ

Posted on

Share
  • ಎರಡು ದಶಕ ಕೋಮಾದಲ್ಲಿದ್ದ ‘ಸ್ಲೀಪಿಂಗ್ ಪ್ರಿನ್ಸ್’ ಇನ್ನಿಲ್ಲ
  • 15ನೇ ವರ್ಷದಲ್ಲಿ ರಾಜಕುಮಾರನಿಗೆ ಅಪಘಾತ
  • 35ನೇ ವಯಸ್ಸಿನ ಮರಣ ಹೊಂದಿದ ಅಲ್ -ವಲೀದ್

20 ವರ್ಷಗಳ ಕಾಲ ಕೋಮಾದಲ್ಲಿದ್ದ ‘ಸ್ಲೀಪಿಂಗ್ ಪ್ರಿನ್ಸ್ ಎಂದೇ ಹೆಸರಾಗಿದ್ದ ಸೌದಿ ಅರೇಬಿಯಾದ ರಾಜಕುಮಾರ ಅಲ್ ವಲೀದ್ ಬಿನ್ ಖಾಲಿದ್ ಬಿನ್ ತಲಾಲ್ ಅಲ್ ಸೌದ್(36) ನಿಧನರಾಗಿದ್ದಾರೆ

ಭಾನುವಾರ ರಿಯಾದ್‌ನಲ್ಲಿ ಅಲ್ ವಲೀದ್ ಅವರ ಅಂತ್ಯಕ್ರಿಯೆ ನಡೆಯಿತು. ಮಗನ ನಿಧನದ ಗೌರವ ಸೂಚಕವಾಗಿ ಮುಂದಿನ ಮೂರು ದಿನಗಳ ಕಾಲ ಸಂತಾಪ ಸಭೆ ನಡೆಸಲಾಗುವುದು ಎಂದು ತಂದೆ ಪ್ರಿನ್ಸ್ ಖಾಲಿದ್ ತಿಳಿಸಿದ್ದಾರೆ.

ಮಗನ ನಿಧನ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ತಂದೆ ಭಾವನಾತ್ಮಕ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ದೇವರ ಚಿತ್ತ ಮತ್ತು ಆಜ್ಞೆ. ನಮ್ಮ ಪ್ರೀತಿಯ ಪುತ್ರ, ರಾಜಕುಮಾರ  ಅಲ್ ಸೌದ್ ನಿಧನಕ್ಕೆ ನಾವು ತೀವ್ರ ಶೋಕಿಸುತ್ತೇವೆ.  ಅಲ್ಲಾಹು ಅವರಿಗೆ ಸ್ವರ್ಗದಲ್ಲಿ ಸ್ಥಾನ ನೀಡಲಿ. ಕುಟುಂಬಸ್ಥರು ಮತ್ತು ಪ್ರೀತಿಪಾತ್ರರಿಗೆ ಸಾಂತ್ವನ ನೀಡಲಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.

ಸೌದಿ ಅರೇಬಿಯಾದ ರಾಜಕುಮಾರ ವಲೀದ್ 1990 ರಂದು ಜನನ. 2005ರಲ್ಲಿ ಲಂಡನ್ ಮಿಲಿಟರಿ ಕಾಲೇಜಿನಲ್ಲಿ ಓದುತ್ತಿದ್ದಾಗ ರಾಜಕುಮಾರ ಅಲ್-ವಲೀದ್ ಅಪಘಾತವಾಗಿತ್ತು. ಅಪಘಾತದಲ್ಲಿ ಮೆದುಳಿನ ರಕ್ತಸ್ರಾವವಾಗಿತ್ತು. ಬಳಿಕ ಅವರನ್ನು ರಿಯಾದ್‌ನ ಕಿಂಗ್ ಅಬ್ದುಲಜೀಜ್ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಮೆರಿಕ ಮತ್ತು ಸ್ಪೇನ್‌ನ ತಜ್ಞ ವೈದ್ಯರು ಅವರಿಗೆ ಅವಿರತವಾಗಿ ಚಿಕಿತ್ಸೆ ನೀಡಿದ್ದರು. ಆದ್ರೆ 15ನೇ ವಯಸ್ಸಿನ ಅಲ್‌-ವಲೀದ್ ಅವರಿಗೆ ಪ್ರಜ್ಞೆ ಮರಳಿ ಬರಲೇ ಇಲ್ಲ.

ಆನಂತರ ಅವರನ್ನು ರಿಯಾದ್‌ನ ಅರಮನೆಯಲ್ಲಿ ವಿಶೇಷ ಕೋಣೆಯಲ್ಲಿ ಇರಿಸಲಾಯಿತು. ವೈದ್ಯರು ನೆರವಿನಲ್ಲಿ ದಿನದ 24 ಗಂಟೆಯೂ ಪ್ರಿನ್ಸ್ ಅಲ್ ವಲೀದ್​ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆಗಾಗ  ವಿಡಿಯೋಗಳು ​ ಹೊರ ಜಗತ್ತಿಗೆ ಬರುತ್ತದೆ ಇದ್ದವು. 20 ವರ್ಷಗಳ ಕಾಲ ಅವರು ಕೋಮಾದಲ್ಲಿದ್ದ ಸ್ಲೀಪಿಂಗ್ ಪ್ರಿನ್ಸ್ ಈ ಲೋಕಕ್ಕೆ ಕೊನೆಗೂ ವಿದಾಯ ಹಾಡಿದ್ದಾರೆ.

Most Popular

Exit mobile version