CRIME NEWS

ಬಹುಕೋಟಿ ವಂಚಕನ ಡುಬಾಯ್ಸ್ ಪ್ರೊಡಕ್ಷನ್ಸ್ ನಲ್ಲಿ ಮಕ್ಕಳ ಸಿನಿಮಾ!

Posted on

Share

ಮಂಗಳೂರು :  ಕೋಟಿ ಕೋಟಿ ರೂ. ವಂಚಿಸಿ  ಜೈಲು ಸೇರಿರುವ ಬಜಾಲ್ ನಿವಾಸಿ ರೋಶನ್ ಸಲ್ಡಾನ ಐಷಾರಾಮಿ ಬದುಕಿನ  ಜೊತೆಯಲ್ಲಿ ಸಿನಿಮಾ ಮಾಡುವ ಅಭ್ಯಾಸವು ಇತ್ತು.

2018ರಲ್ಲಿ  ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದ. ತನ್ನ ಪತ್ನಿಯ ಹೆಸರಲ್ಲಿ ಡುಬಾಯ್ಸ್ ಪ್ರೊಡಕ್ಷನ್ಸ್

ಬ್ಯಾನರ್‌ನಲ್ಲಿ ಮಕ್ಕಳ ಸಿನೆಮಾವನ್ನು ನಿರ್ಮಾಣ ಮಾಡಿದ್ದ. ಆದರೆ ಅದು ಥಿಯೇಟರ್ ಗಳಲ್ಲಿ ಸದ್ದು ಮಾಡಲೇ ಇಲ್ಲ.

ಬಾಲ್ಯದಲ್ಲಿ ಸಹಪಾಠಿಯ ಚಿನ್ನ ಕದ್ದಿದ್ದ ಸಲ್ದಾನ, ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ತೋರಿಸಿದ್ದ.  ಕಳೆದ 15 ವರ್ಷಗಳಲ್ಲಿ ಸುಮಾರು 200 ಕೋ.ರೂ.ಗೂ ಅಧಿಕ ವಂಚನೆ ಮಾಡಿದ್ದಾನೆ  ಎಂದು ಪೊಲೀಸರು ಅಂದಾಜಿಸಿದ್ದಾರೆ.

ಇಂದು ಪೊಲೀಸ್ ಕಸ್ಟಡಿಗೆ

ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಕಸ್ಟಡಿಗೆ ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಸೋಮವಾರ ಪೊಲೀಸ್ ಕಸ್ಟಡಿಗೊಳಗಾಗುವ ಸಾಧ್ಯತೆ ಇದೆ.

ಆರೋಪಿಯ ವಿರುದ್ಧ 2 ವಂಚನೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಜಪ್ಪಿನಮೊಗರು ನಲ್ಲಿರುವ ಐಷಾರಾಮಿ ಮನೆಯಿಂದ ಬಂಧಿಸಿ ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆರೋಪಿಯನ್ನು ಪೊಲೀಸರು ಬಂಧಿಸಿದ ಬಗ್ಗೆ ಮಾಹಿತಿ ಪಡೆದ ವಂಚನೆಗೊಳಗಾದ ಮೂವರು ಪೊಲೀಸರಿಗೆ ದೂರು ನೀಡಿದ್ದಾರೆ.

Most Popular

Exit mobile version