CRIME NEWS

ಧರ್ಮಸ್ಥಳ ಹೆಣಹೂತ ಪ್ರಕರಣ: ತನಿಖೆಗೆ ಸರ್ಕಾರದಿಂದ ವಿಶೇಷ ತಂಡ SIT ರಚನೆ ಆದೇಶ! ಕೊನೆಗೂ ಆರೋಪಿ ಪರ ವಕೀಲರ ಒತ್ತಡಕ್ಕೆ ಮಣಿದ ಸರಕಾರ

Posted on

Share

ಮಂಗಳೂರು /ಬೆಂಗಳೂರು 

ಧರ್ಮಸ್ಥಳದಲ್ಲಿ ನೂರಾರು ಹೆಣಹೂತಿದ್ದೇನೆ ಎಂದು ಅಜ್ಞಾತ ವ್ಯಕ್ತಿಯು ಆರೋಪಿಸಿದ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಹೊತ್ತಿನಲ್ಲಿ ಈ ಪ್ರಕರಣದ ತನಿಖೆ ನಡೆಸಲು ವಿಶೇಷ ತಂಡವನ್ನು ನಿಯುಕ್ತಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

 

ಧರ್ಮಸ್ಥಳದಲ್ಲಿ ಅನೇಕ ಹೆಣಗಳನ್ನು ಹೂತಿದ್ದೇನೆ ಎಂದು ಹೇಳಿಕೊಂಡ ವ್ಯಕ್ತಿ ಬೆಳ್ತಂಗಡಿ ಕೋರ್ಟಿಗೆ ವಕೀಲರ ಜೊತೆ ಹಾಜರಾಗಿದ್ದಾನೆ

ತನಿಖಾ ತಂಡದ ಮುಖ್ಯಸ್ಥರಾಗಿ ಹಿರಿಯ ಐಪಿಎಸ್ ಅಧಿಕಾರಿ ಪ್ರಣವ ಕುಮಾರ್ ಮೊಹಂತಿ ಅವರನ್ನು ನೇಮಿಸಲಾಗಿದ್ದು ತಂಡದಲ್ಲಿ IPS ಅಧಿಅಕರಿ ಎಂ.ಎನ್ ಅನುಚೇತ್. ಶ್ರೀಮತಿ ಸೌಮ್ಯ ಲತ IPS, ಹಾಗೂ ಜಿತೇಂದ್ರ ಕುಮಾರ್ IPS ಅವರನ್ನು ನೇಮಿಸಲಾಗಿದೆ

 

 

 

ಧರ್ಮಸ್ಥಳ ಪರಿಸರದಲ್ಲಿ ನೂರಾರು ಹೆಣ ಹೂತಿರುವುದಾಗಿ ಅಜ್ಞಾತ ವ್ಯಕ್ತಿಯೊಬ್ಬನು ಹೇಳಿಕೆ ನೀಡಿದ ಕುರಿತು ವಕೀಲರ ಪತ್ರ ಕಳೆದ ತಿಂಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.‌ ಇದರ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆ ಎಸ್ಪಿ ಅರುಣ್ ಕುಮಾರ್ ಅವರು ಈ ಕುರಿತು ದೂರು ಬಂದರೆ ಪ್ರಕರಣ ದಾಖಲಿಸುವುದಾಗಿ ಭರವಸೆ ನೀಡಿದ್ದರು.

ಒಂದು ವಾರ ಕಳೆದ ಬಳಿಕ ವಕೀಲರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಕಚೇರಿಗೆ ಆಗಮಿಸಿ ದೂರು ನೀಡಲು ಬಂದಿದ್ದರು.

ಅಂದು ಎಸ್ಪಿ ಕಚೇರಿಯಲ್ಲಿ ಇರಲಿಲ್ಲ. ಬಳಿಕ ವಕೀಲರ ತಂಡ ಮತ್ತೊಮ್ಮೆ ಬಂದು ಎಸ್ಪಿ ಅವರಿಗೆ ದೂರು ನೀಡಿದ್ದು, ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹೆಣಹೂತಿದ್ದೇನೆ ಎಂದು ಹೇಳಿಕೊಂಡ ಅಜ್ಞಾತ ವ್ಯಕ್ತಿ ಆರೋಪಿ ಬೆಳ್ತಂಗಡಿ ಕೋರ್ಟಿಗೆ ಹಾಜರಾಗಿ ನ್ಯಾಯಾಧೀಶರ ಸಮ್ಮುಖ ಹೇಳಿಕೆಯನ್ನು ನೀಡಿದ್ದು ಬಳಿಕ ಬೆಳ್ತಂಗಡಿ ಠಾಣೆಗೆ ಹಾಜರಾಗಿದ್ದರು.

ಅಲ್ಲಿ ಆರಂಭಿಕ ವಿಚಾರಣೆ ಎದುರಿಸಿದ ಬಳಿಕ ಆರೋಪಿತ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆಯದೆ ಹಾಗೆಯೇ ಕಳುಹಿಸಿದ್ದರು.

ಇದಾದ ಬಳಿಕ ಪೊಲೀಸರು ಹೆಣಹೂತ ಪ್ರಕರಣದ ಬಗ್ಗೆ ತಕ್ಷಣ ತನಿಖೆ ನಡೆಸಬೇಕು. ತಲೆಬುರುಡೆ ಮೇಲೆತ್ತಿ ಮಹಜರು ತಕ್ಷಣವೇ ಮಾಡಬೇಕು ಎಂಬ ಒತ್ತಾಯ ವಕೀಲರ ಕಡೆಯಿಂದ, ಸಾಕ್ಷಿದಾರರ ಕಡೆಯಿಂದ ಬರತೊಡಗಿದವು.

ಇದರ ನಡುವೆ ಸಾಕ್ಷಿದಾರರ ಪರವಾಗಿದ್ದವರು ದೂರುದಾರ ಮಾಹಿತಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಿದ ಕುರಿತು ದಕ್ಷಿಣ ಕನ್ನಡ ಜಿಲ್ಲಾಾ ಎಸ್ ಪಿ ಸೂಚನೆಯಂತೆ ತನಿಖೆ ಆರಂಭಗೊಂಡಿತು.

ದೂರುದಾರ ತಲೆಮರೆಸಿಕೊಳ್ಳುವ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ಬಹಳ ಜಾಗೃತೆ ಮತ್ತು ಕಾನೂನಿನ ಅನುಸಾರ ಎಚ್ಚರಿಕೆಯಿಂದ ತನಿಖಾ ವಿಧಾನ ಮುಂದುವರಿಸಿದರು.

ಈ ನಡುವೆ ವಕೀಲರ ತಂಡ ಪ್ರತ್ಯೇಕ ತನಿಖೆ ನಡೆಸಲು ಸುಪ್ರೀಂಕೋರ್ಟಿಗೂ ಮನವಿ ಸಲ್ಲಿಸಿತ್ತು. ಕೇರಳ ಸರ್ಕಾರವು ಈ ಕುರಿತು ವಿಶೇಷ ತನಿಖೆ ನಡೆಸಲು ತಂಡ ರಚಿಸುವಂತೆಯೂ ಮನವಿ ಮಾಡಿತ್ತು.

ಇದು ಕರ್ನಾಟಕ ಸರ್ಕಾರಕ್ಕೆ ಅವಮಾನ ಎಂಬ ಭಾವನೆಯು ಸಾರ್ವಜನಿಕ ವಲಯದಲ್ಲಿ ಮೂಡಿತು. ಈ ನಡುವೆ ಪೊಲೀಸರು ವಿಳಂಬವಾಗಿ ತನಿಖೆ ನಡೆಸುತ್ತಿದ್ದಾರೆ ಎಂಬ ಆರೋಪವು ಒಂದು ವರ್ಗದಿಂದ ಕೇಳಿಬಂದಿತ್ತು.

ಬೇಡ ಎಂದಿದ್ದ ಸಿಎಂ

ಇದಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಗ್ರಹ ಸಚಿವ ಪರಮೇಶ್ವರ್ ಅವರ ಬಳಿಯೂ ಈ ಪ್ರಕರಣದ ತನಿಕ ನಡೆಸಲು ವಿಶೇಷ ತಂಡ ಎಸ್ಐಟಿ ರಚಿಸುವಂತೆ ಒತ್ತಡ ಇರುವ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ ಹಾಗೆಲ್ಲ ಮಾಡೋಕೆ ಆಗಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಗೃಹ ಸಚಿವ ಪರಮೇಶ್ವರ್ ಈ ಪ್ರಕರಣಕ್ಕೆ ಅಗತ್ಯವಿದ್ದರೆ ವಿಶೇಷ ತನಿಕಾ ತಂಡ ರಚಿಸುವುದಾಗಿಯೂ ಹೇಳಿಕೆ ನೀಡಿದ್ದರು.

ಇದೀಗ ರಾಜ್ಯ ಸರ್ಕಾರ ಈ ಪ್ರಕರಣದ ವಿಶೇಷ ತನಿಖೆ ನಡೆಸಲು ವಿಶೇಷ ತಂಡವನ್ನು ನಿಯೋಜಿಸಿದೆ.

ಈ ಬಗ್ಗೆಯೂ ಆರೋಪ ಹೊರಿಸಿ ಇನ್ನೊಂದು ರಾಜ್ಯದ ಪೊಲೀಸರು ತನಿಖೆ ನಡೆಸ ಬೇಕು ಅಥವಾ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದಲೇ ತನಿಖೆ ಆಗಬೇಕು ಎಂಬ ಒತ್ತಾಯ ಬರುವುದೋ ಎನ್ನುವುದನ್ನು ಕಾದು ನೋಡಬೇಕಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂದೇಶ: ಈ ಕೆಳಗಿನಂತಿದೆ

ಧರ್ಮಸ್ಥಳ ಭಾಗದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆಯನ್ನು ದಾಖಲಿಸಿದ್ದಾರೆ, ಸ್ಥಳೀಯ ಹಾಗೂ ರಾಷ್ಟ್ರೀಯ ಮಾಧ್ಯಮಗಳು ಮನುಷ್ಯನ ತಲೆಬರುಡೆ ದೊರಕಿದ ಸ್ಥಳ ಹಾಗೂ ನಾಪತ್ತೆಯಾದ ವೈದ್ಯಕೀಯ ವಿದ್ಯಾರ್ಥಿನಿಯ ಕುಟುಂಬದವರ ಹೇಳಿಕೆಯನ್ನು ಪ್ರಸಾರ ಮಾಡಿವೆ. ಈ ಪ್ರದೇಶದಲ್ಲಿ ಅಸಹಜ ಸಾವುಗಳು, ಕೊಲೆ, ಅತ್ಯಾಚಾರ ಹೀಗೆ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳು ನಡೆದಿರಬಹುದಾಗಿದ್ದು, ಈ ಎಲ್ಲಾ ಸಾಧ್ಯತೆಗಳನ್ನು ಪರಿಗಣಿಸಿ ಪ್ರಕರಣದ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗವು ರಾಜ್ಯ ಸರ್ಕಾರಕ್ಕೆ ಕೋರಿದ್ದು, ಅವರ ಕೋರಿಕೆಯ ಮೇರೆಗೆ ನಾಲ್ವರು ಐಪಿಎಸ್ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶಿಸಲಾಗಿದೆ.

ವಿಶೇಷ ತನಿಖಾ ತಂಡವು ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ದೂರು ಸೇರಿದಂತೆ ಇದಕ್ಕೆ ಸಂಬಂಧಪಟ್ಟಂತೆ ರಾಜ್ಯದ ಇತರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಹಾಗೂ ದಾಖಲಾಗುವ ಎಲ್ಲಾ ಕ್ರಿಮಿನಲ್ ಪ್ರಕರಣಗಳನ್ನು ಸಮಗ್ರ ತನಿಖೆ ನಡೆಸಿ, ವರದಿ ನೀಡಲಿದೆ.
– ಮುಖ್ಯಮಂತ್ರಿ Siddaramaiah

#Dharmastala

 

 

 

Most Popular

Exit mobile version