CRIME NEWS

ತಿರುಪತಿ ದೇವಸ್ಥಾನ ಸಂಸ್ಥೆಯಲ್ಲಿ ಕ್ರೈಸ್ತ ಧರ್ಮ ಪಾಲನೆ ಮಾಡುತ್ತಿದ್ದ ನಾಲ್ವರು ವಜಾ

Posted on

Share

 

ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿಯ ಸಹಾಯಕ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್ ಬಾಬು ಪ್ರತಿ ಭಾನುವಾರ ಚರ್ಚಿಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಹಿನ್ನೆಲೆಯಲ್ಲಿ ಅಮಾನತ್ ಗೊಂಡ ಬೆನ್ನಲ್ಲಿಯೇ ಇದೀಗ ನಾಲ್ವರು ಸಿಬ್ಬಂದಿಯನ್ನು ವಜಾಗೊಳಿಸಿ ಟಿಟಿಡಿ ಆದೇಶ ಹೊರಡಿಸಿದೆ

  • ತಿರುಪತಿ ದೇವಸ್ಥಾನ ಸಂಸ್ಥೆಯಲ್ಲಿ ಕ್ರೈಸ್ತ ಧರ್ಮ ಪಾಲನೆ ಮಾಡುತ್ತಿದ್ದ ನಾಲ್ವರು ವಜಾ

ತಿರುಪತಿ: ಧರ್ಮ ಪಾಲನೆ ಮಾಡುತ್ತಿದ್ದ ನಾಲ್ವರು ಸಿಬ್ಬಂದಿಯನ್ನು ತಿರುಮಲ ತಿರುಪತಿ ದೇವಸ್ಥಾನ (TTD) ಆಡಳಿತ ಮಂಡಳಿ
ವಜಾಗೊಳಿಸಿ ಆದೇಶ ಹೊರಡಿಸಿದೆ. ಅಮಾನುತುಗೊಂಡಿರುವ ನಾಲ್ವರು ಉದ್ಯೋಗಿಗಳು ಕ್ರೈಸ್ತ ಧರ್ಮ ಅನುಸರಿಸುತ್ತಿದ್ದರು ಎಂದು ಟಿಟಿಡಿ ಹೇಳಿದೆ.
ಹಿಂದೂ ಧಾರ್ಮಿಕ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡು ಅನ್ಯ ಧರ್ಮ ಪಾಲಿಸೋದು ಟ್ರಸ್ಟ್‌ನ ಸಾಂಸ್ಥಿಕ ನೀತಿ ಸಂಹಿತೆಯ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ. ವಿಜಿಲೆನ್ಸ್ ವರದಿ ಮತ್ತು ಆಂತರಿಕ ತನಿಖೆಯ ನಂತರವೇ ನಾಲ್ವರು ಉದ್ಯೋಗಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಅಮಾನತುಗೊಂಡ ನೌಕರರು ಹಿಂದೂ ಧಾರ್ಮಿಕ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ನಿರೀಕ್ಷಿತ ಧಾರ್ಮಿಕ ನಡವಳಿಕೆಯನ್ನು ಅನುಸರಿಸಲು ವಿಫಲರಾಗಿದ್ದಾರೆ. ನಿಯಮಗಳ ಪ್ರಕಾರ ನಾಲ್ವರನ್ನು ಅಮಾನತುಗೊಳಿಸಲಾಗಿದೆ ಎಂದು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

ಅಮಾನತುಗೊಂಡ ಅಧಿಕಾರಿಗಳ ವಿವರ

  • ಬಿ. ಅಲಿಜರ್ – ಉಪ ಕಾರ್ಯನಿರ್ವಾಹಕ ಎಂಜಿನಿಯರ್ (ಗುಣಮಟ್ಟ ನಿಯಂತ್ರಣ ಅಧಿಕಾರಿ)
    ಎಸ್. ರೋಸ್ಸಿ – ಸ್ಟಾಫ್ ನರ್ಸ್, BIRD ಆಸ್ಪತ್ರೆ
    ಎಂ.ಪ್ರೇಮಾವತಿ – ಗ್ರೇಡ್-1 ಫಾರ್ಮಾಸಿಸ್ಟ್, ಬಿಆರ್‌ಡಿ ಆಸ್ಪತ್ರೆ
    ಡಾ. ಜಿ. ಅಸುಂತ – ಎಸ್‌ವಿ ಆಯುರ್ವೇದ ಫಾರ್ಮಸಿ

Most Popular

Exit mobile version