CRIME NEWS

ಉದ್ಯಮಿ ಮತ್ತು ಸಂಸ್ಥೆಯ ಮಹಿಳಾ ಉದ್ಯೋಗಿ ವಿರುದ್ಧ ಮಿಥ್ಯಾರೋಪ: ಆರೋಪಿ ಸೆರೆ

Posted on

Share

ಕೊಡಿಕೆರೆ ಲೋಕೇಶ- ರಾಮಪ್ರಸಾದ ಪೋಚ ವಿರುದ್ಧ ಕೇಸ್

ಮಂಗಳೂರು:  ಉದ್ಯಮಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೋಮುದ್ವೇಷ ಮತ್ತು ಸುಳ್ಳು ಆರೋಪಗಳನ್ನು ಪ್ರಚಾರ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಸುರತ್ಕಲ್ ಠಾಣೆಯ ಪೊಲೀಸರು ಬಂದಿದ್ದಾರೆ.

ಆರೋಪಿ ರಾಮಪ್ರಸಾದ ಪೋಚ

ರಾಮ್ ಪ್ರಸಾದ್ @ ಪೋಚ (42) ಬಂಧಿತ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಬ್ಬ ಆರೋಪಿ, ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣವೊಂದರಲ್ಲಿ ಭಾಗಿಯಾಗಿ ಪ್ರಸಕ್ತ ಉಡುಪಿ ಜಿಲ್ಲಾ ಕಾರಾಗೃಹದಲ್ಲಿರುವ ಸುರತ್ಕಲ್ ಕೋಡಿಕೆರೆ ನಿವಾಸಿ ಲೋಕೇಶ್ ಎಂಬಾತನನ್ನು ಬಾಡಿ ವಾರೆಂಟ್ ಪಡೆದು ಸುರತ್ಕಲ್ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದೂರುದಾರ ರಾಜೇಶ್ ಎಂಬವರು ಹೊಸಬೆಟ್ಟು ಸುರತ್ಕಲ್ ನಲ್ಲಿ RV Enterprises ಎಂಬ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದು, ವಾಟ್ಸಪ್ ಗ್ರೂಪ್ ಗಳಲ್ಲಿ ಯಾರೋ ದುಷ್ಕರ್ಮಿಗಳು ಹಿಂದೂ ಜನರಲ್ಲಿ ದೂರುದಾರರ ವಿರುದ್ದ ಕೋಮು ದ್ವೇಷ ಹರಡಿಸುವ ಪ್ರಯತ್ನಪಟ್ಟಿದ್ದಾರೆ.

ದೂರುದಾರ ಸುಮಾರು 20 ಕ್ಕೂ ಅಧಿಕ ಯುವತಿಯರನ್ನು ಮತಾಂತರ ಮಾಡಿರುತ್ತಾರೆ ಅಲ್ಲದೇ ಉದ್ಯಮಿ ಬ್ಲೂ ಫಿಲಂ ಸಿಡಿ ಮಾರಾಟ ಮಾಡಿ ಸಿಕ್ಕಿಹಾಕಿಕೊಂಡಿರುತ್ತಾರೆ.  ಅವರ ಕಚೇರಿಯಲ್ಲಿರುವ ಯುವತಿಯರನ್ನು ಮತಾಂತರ ಮಾಡಿರುತ್ತಾರೆ ಹಾಗೂ 24 ವರ್ಷ ಪ್ರಾಯದ ಹಿಂದೂ ಯುವತಿಯನ್ನು ಉದ್ಯಮಿ ತನ್ನ ತಮ್ಮನಿಗೆ ಮದುವೆ ಮಾಡಲು ಸಿದ್ದತೆ ನಡೆಸಿದ್ದಾರೆ.

ಆ ಹಿಂದೂ ಯುವತಿ ಹಣೆಗೆ ಕುಂಕುಮ ಹಾಕುವುದನ್ನು ದೇವಸ್ಥಾನಕ್ಕೆ ಹೋಗುವುದನ್ನು ನಿಲ್ಲಿಸಿರುತ್ತಾಳೆ ಬದಲಿಗೆ ಚರ್ಚ್ ಗೆ ಪ್ರಾರ್ಥನೆಗೆ ತಪ್ಪದೇ ಹಾಜರಾಗುತ್ತಿರುತ್ತಾಳೆ ಎಂದು ಕ್ಷಮೆ ವಿರುದ್ಧ  ಇಲ್ಲಸಲ್ಲದ ಸುಳ್ಳು ಆರೋಪವನ್ನು ಮಾಡಿ ಪಿರ್ಯಾದಿದಾರರ ವಿರುದ್ದ ಕೋಮುದ್ವೇಷ ಸಂದೇಶಗಳನ್ನು ವಾಟ್ಸಪ್ ಗ್ರೂಪ್ ಗಳಲ್ಲಿ ಹರಿಬಿಟ್ಟಿದ್ದಾರೆ.

ಈ ಕಾರಣಕ್ಕೆ ರಾಜೇಶ್ ಅವರು ಆರೋಪಿಗಳ ಮೇಲೆ ಸೂಕ್ತ ಕಾನೂನುಕ್ರಮ ಜರುಗಿಸಲು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ತನಿಖೆ ನಡೆಸಿದ ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್ ರವರ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.

Most Popular

Exit mobile version