INDIA

ಗೆದ್ದ ಇಂಗ್ಲೆಂಡ್! ಭಾರತ 170: 22 ರನ್ನುಗಳ ಸೋಲು

Share

:  ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ  ಭಾರತ ತಂಡವು ಇಂಗ್ಲೆಂಡ್ ವಿರುದ್ಧ 22 ರನ್ಗಳ ಸೋಲು ದಾಖಲಿಸಿದೆ.

 

ಕೊನೆಯ ದಿನದಾಟ ರೋಚಕ ಕಾದಾಟಕ್ಕೆ ಸಾಕ್ಷಿಯಾಗುವ ನಿರೀಕ್ಷೆ ಇದ್ದಿತಾದರೂ ಇದೀಗ ಟೀಮ್ ಇಂಡಿಯಾ ವಿಕೆಟ್ಗಳನ್ನು ಕಳೆದುಕೊಳ್ಳುತ್ತಾ ಸೋಲನ್ನು ಅಪ್ಪಿಕೊಳ್ಳಬೇಕಾಯಿತು.

ಕೊನೆಯ ಹಂತದಲ್ಲಿ ಜಡೇಜಾ ಪ್ರತಿರೋಧ ತೋರಿದರಾದರು ಅವರ ಜೊತೆ  ನಿಲ್ಲುವಂತಹ ದಂ ಉಳಿದ ಯಾವುದೇ ಆಟಗಾರನಿಗೆ ಇರಲಿಲ್ಲ. ಕೊನೆಗೂ ಜಡೇಜಾ 61 ರನ್ ಗಳಿಸಿ ನಾಟೌಟ್ ಆಗಿ ಉಳಿದರು.

ನಾಲ್ಕನೇ ದಿನದಾಟದ ಅಂತ್ಯದ ಬಳಿಕ ಉಭಯ ತಂಡಗಳು ಗೆಲುವಿನ ಕನಸು ಕಂಡಿದ್ದವು.

ಬೆನ್ ಸ್ಟೋಕ್ಸ್ ನೇತೃತ್ವದ ಇಂಗ್ಲೆಂಡ್ ತಂಡವು ತನ್ನ ಪಾಲಿನ ಎರಡನೇ ಇನ್ನಿಂಗ್ಸ್‌ನಲ್ಲಿ ವಾಷಿಂಗ್ಟನ್ ಸುಂದರ್ ಮಾರಕ ದಾಳಿಗೆ ತತ್ತರಿಸಿ ಕೇವಲ 192 ರನ್‌ಗಳಿಗೆ ಸರ್ವಪತನ ಕಂಡಿತು. ಹೀಗಾಗಿ ಲಾರ್ಡ್ಸ್ ಟೆಸ್ಟ್ ಪಂದ್ಯವನ್ನು ಗೆಲ್ಲಲು ಭಾರತಕ್ಕೆ 193 ರನ್‌ಗಳ ಸ್ಪರ್ಧಾತ್ಮಕ ಗುರಿ ಸಿಕ್ಕಿದೆ. ಈ ಗುರಿ ಬೆನ್ನತ್ತಿರುವ ಟೀಂ ಇಂಡಿಯಾ, ನಾಲ್ಕನೇ ದಿನದಾಟ ಮುಕ್ತಾಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 58 ರನ್ ಬಾರಿಸಿತ್ತು.

ಇದೀಗ ಭಾರತ ಎಲ್ಲ ವಿಕೆಟ್ ಕಳೆದುಕೊಂಡು 170 ರನ್ ಒಟ್ಟುಗೂಡಿಸಿತು.

ಜಡೇಜಾ ಮತ್ತು ಮೊಹಮ್ಮದ್ ಸಿರಾಜ್  ಕೊನೆಯಲ್ಲಿ ಗೆಲುವಿನ ಹತ್ತಿರ ಹೋಗುವ ಸಣ್ಣ ಆಸೆ ಮೂಡಿಸಿದರಾದರೂ 22 ರನ್ ಗಳು ಕಡಿಮೆಯಾಯಿತು.

 

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲೆರಡು ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತಗಳು ದಾಖಲಾಗಿದ್ದವು. ಆದರೆ ಲಾರ್ಡ್ಸ್ ಟೆಸ್ಟ್‌ನಲ್ಲಿ ಉಭಯ ತಂಡಗಳ ಬಹುತೇಕ ಬ್ಯಾಟರ್‌ಗಳು ದೊಡ್ಡ ಮೊತ್ತ ಕಲೆಹಾಕಲು ವಿಫಲವಾಗಿರುವುದು ಈ ಪಿಚ್‌ನಲ್ಲಿ ಬ್ಯಾಟ್ ಮಾಡುವುದು ಸುಲಭವಲ್ಲ ಎನ್ನುವುದು ಸಾಬೀತಾಯಿತು.
ಮೂರನೇ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡರು. ಜಸ್ಪ್ರೀತ್ ಬುಮ್ರಾ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡವು 387 ರನ್‌ಗಳಿಗೆ ಸರ್ವಪತನ ಕಂಡಿತು.
ಇದಕ್ಕುತ್ತರವಾಗಿ ಭಾರತ ಕೂಡಾ ತನ್ನ ಪಾಲಿನ ಮೊದಲ ಇನ್ನಿಂಗ್ಸ್‌ನಲ್ಲಿ 387 ರನ್‌ಗಳಿಗೆ ಸರ್ವಪತನ ಕಂಡಿತು. ಹೀಗಾಗಿ ಮೂರನೇ ದಿನದಾಟದವರೆಗೂ ಉಭಯ ತಂಡಗಳು ಸಮಬಲದ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿವೆ. ಮೊದಲ ನಾಲ್ಕು ದಿನದ ದಿನದಾಟದಲ್ಲಿ ಕೇವಲ ಎರಡು ಶತಕಗಳಷ್ಟೇ ದಾಖಲಾಗಿರುವುದು ಈ ಪಿಚ್‌ನಲ್ಲಿ ಬ್ಯಾಟಿಂಗ್‌ ಎಷ್ಟು ಕಷ್ಟ ಎನ್ನುವುದು ಸಾಬೀತಾಗಿದೆ.  ಕೊನೆಯ ದಿನದಾಟದಲ್ಲಿ ಟೀಂ ಇಂಡಿಯಾ ಶರಣಾಯಿತು.

To Top