LATEST NEWS

ಕಾಲು ಕತ್ತರಿಸಿಕೊಂಡಿದ್ದ ಸದಾನಂದ ಮಾಸ್ಟರ್ ಈಗ ರಾಜ್ಯಸಭೆಯ ಸದಸ್ಯ ಮೋದಿಯಿಂದ ಬಣ್ಣಿಸಿಕೊಂಡ ಮಹಾ ನಾಯಕ

Share

ಕೇರಳದಲ್ಲಿ ಸಿಪಿಎಂ ದುಷ್ಕರ್ಮಿಗಳಿಂದ ಕಾಲನ್ನು ಕತ್ತರಿಸಿಕೊಂಡರೂ ಎದೆಗುಂದದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನಾಗಿ ಹವಿರತ ದುಡಿದು ಸಮಾಜದ ಬೆಳವಣಿಗೆಗೆ ಶ್ರಮಿಸಿದ ಸದಾನಂದ ಮಾಸ್ಟರ್ ಅವರಿಗೆ ರಾಜ್ಯಸಭೆಯ ಸದಸ್ಯತ್ವ ಗೌರವಾ ಲಭಿಸಿದೆ.

ಸದಾನಂದ ಮಾಸ್ಟರ್ ಪ್ರಧಾನಿ ಮೋದಿಯಿಂದ ಮೆಚ್ಚುಗೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಖ್ಯಾತ ವಕೀಲರಾದ ಉಲ್ವಲ್‌ ನಿಕಮ್‌, ಮಾಜಿ ವಿದೇಶಾಂಗ ಸಚಿವ ಹರ್ಷವರ್ಧನ್‌ ಶ್ರಿಂಗ್ಲಾ, ಇತಿಹಾಸಗಾರ್ತಿ ಡಾ. ಮೀನಾಕ್ಷಿ ಜೈನ್‌ ಹಾಗೂ ಕೇರಳದ ಹಿರಿಯ ಕಾರ್ಯಕರ್ತ ಮತ್ತು ಶಿಕ್ಷಣ ತಜ್ಞರಾಗಿರುವ ಸದಾನಂದನ್ ಮಾಸ್ಟರ್‌ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದ್ದಾರೆ.

ಕೇರಳದ ಕಣ್ಣೂರು ಜಿಲ್ಲೆಯ ಕೂತುಪರಂಬಾದ ಪೆರಿಚೇರಿಯಲ್ಲಿ ಜನಿಸಿದ ಸದಾನಂದನ್ ಮಾಸ್ಟರ್‌ ಗೌವಾಹಟಿಯ ವಿಶ್ವವಿದ್ಯಾನಿಯಲದಿಂದ ಬಿಕಾಂ ಪದವಿ ಹಾಗೂ ಕ್ಯಾಲಿಕಟ್‌ ವಿಶ್ವವಿದ್ಯಾಲಯದಿಂದ ಬಿಎಡ್‌ ಪದವಿಯನ್ನು ಪಡೆದುಕೊಂಡಿದ್ದರು.

ಸದಾನಂದನ್ ಮಾಸ್ಟರ್‌ ಅವರ ತಂದೆ ಕುಂಜಿರಾಮನ್‌ ನಂಬಿಯಾರ್‌ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ತನ್ನ ತಂದೆ ಹಾಗೂ ಸದಾನಂದನ್ ಮಾಸ್ಟರ್‌ ಅವರ ಅಣ್ಣ ಸಿಪಿಐಎಂನ ಸಿದ್ದಾಂತದಿಂದ ಪ್ತಭಾವಿತರಾಗಿದ್ದರು.

ಆದರೆ ಸದಾನಂದ ಮಾಸ್ಟರ್‌ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಪ್ರಭಾವಿತರಾಗಿದ್ದರು. 1984ರಿಂದ ಸದಾನಂದನ್ ಮಾಸ್ಟರ್‌ ಅವರು ಆರ್‌ಎಸ್‌ಎಸ್‌ ನಾಯಕರಾಗಿ ಸೇವೆ ಸಲ್ಲಿಸಿದ್ದಾರೆ.

1999ರಿಂದ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿರುವ ಶ್ರೀ ದುರ್ಗಾ ವಿಲಾಸಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನ್ಯಾಷನಲ್ ಟೀಚರ್ಸ್ ಯೂನಿಯನ್‌ನ ರಾಜ್ಯ ಉಪಾಧ್ಯಕ್ಷರಾಗಿ, ದೇಶಿಯ ಅಧ್ಯಾಪಕ ವಾರ್ತಾ ಪತ್ರಿಕೆಯ ಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ. ಸದ್ಯ ಕೇರಳದ ಪ್ರಭಾವಿ ನಾಯಕರಾಗಿ ಬೆಳೆದಿದ್ದಾರೆ.

ಕೇರಳ ಬಿಜೆಪಿಯಲ್ಲಿ ಹಲವು ಹುದ್ದೆಗಳನ್ನು ಅಲಂಕರಿಸಿರುವ ಸದಾನಂದನ್ ಮಾಸ್ಟರ್‌ ಅವರು, 2016 ಮತ್ತು 2021ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕೇರಳದ ಕೂತುಪರಂಬಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು.

ಸದಾನಂದನ್ ಮಾಸ್ಟರ್‌ ಅವರು ಆರ್‌ಎಸ್‌ಎಸ್‌ನ ಬೌದ್ದಿಕ್‌ ಪ್ರಮುಖ್‌ ಆಗಿ ಕೆಲಸ ಮಾಡುತ್ತಿದ್ದರು. 1994ರ ಜನವರಿ 25ರ ರಾತ್ರಿ ಸದಾನಂದ ಮಾಸ್ಟರ್‌ ಅವರು ತನ್ನ ತಂಗಿಯ ನಿಶ್ಚಿತಾರ್ಥದ ಸಿದ್ದತೆ ಮುಗಿಸಿಕೊಂಡು ಮನೆಗೆ ನಡೆದುಕೊಂಡು ಹೋಗುತ್ತಿದ್ದರು.

ತನ್ನ ಮನೆಯಿಂದ ಸ್ವಲ್ಪ ದೂರದಲ್ಲೇ ಸಿಪಿಐಎಂ ಕಾರ್ಯಕರ್ತರು ಸದಾನಂದನ್ ಮಾಸ್ಟರ್‌ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಸದಾನಂದ ಮಾಸ್ಟರ್‌ ಅವರ ಎರಡು ಕಾಲುಗಳನ್ನು ಕತ್ತರಿಸಿ ಹಾಕಿದ್ದರು.

ಗಾಯಗೊಂಡ ಕಾಲನ್ನು ಡಾಂಬರು ರಸ್ತೆಗೆ ಉಜ್ಜಿ ವಿಕೃತಿ ಮರೆದಿದ್ದರು ಅನ್ನೋ ಆರೋಪವೂ ಇದೆ. ಗಾಯದ ಮಡುವಿನಲ್ಲಿ ಬಿದ್ದಿದ್ದ ಸದಾನಂದ ಮಾಸ್ಟರ್‌ ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಿದ್ದರು.

ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದರೂ ಕೂಡ ಸದಾನಂದನ್ ಮಾಸ್ಟರ್‌ ಅವರು ಜಗ್ಗಲೇ ಇಲ್ಲ. ಕೃತಕ ಕಾಲುಗಳನ್ನು ಅಳವಡಿಸಿಕೊಂಡು ತನ್ನ ಶಿಕ್ಷಕ ವೃತ್ತಿಯನ್ನು ಮುಂದುವರಿಸಿದ್ದರು.

ಜೊತೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಹಲವು ಹುದ್ದೆಗಳನ್ನು ನಿಬಾಯಿಸಿದ್ದಾರೆ. ದೇವರನಾಡು ಕೇರಳದಲ್ಲಿ ಆರ್‌ಎಸ್‌ಎಸ್‌ ಸಂಘಟನೆಯ ಜೊತೆಗೆ ಬಿಜೆಪಿಯನ್ನ ಸಂಘಟನಾತ್ಮಕವಾಗಿ ಬೆಳೆಸುವಲ್ಲಿ ಸದಾನಂದನ್ ಮಾಸ್ಟರ್‌ ಸಾಕಷ್ಟು ಶ್ರಮಿಸಿದ್ದಾರೆ.

ಸದಾನಂದನ್ ಮಾಸ್ಟರ್‌ ಅವರ ಕಾಲು ಕತ್ತರಿಸಿದ ಪ್ರಕರಣ ಕೇರಳ ಮಾತ್ರವಲ್ಲ ದೇಶದಾದ್ಯಂತ ಬಾರೀ ಸುದ್ದಿಯನ್ನು ಮಾಡಿತ್ತು. ತನ್ನ ಕಾಲು ಕಳೆದುಕೊಂಡಿದ್ದರೂ ಕೂಡ ಅವರು ಎದೆಗುಂದದೆ ಬದುಕಿದ್ದು ಬಿಜೆಪಿಗೆ ವರದಾನವಾಗಿತ್ತು.

ಸದಾನಂದನ್ ಮಾಸ್ಟರ್‌ ಅವರ ಪ್ರೇರಣೆಯಿಂದಲೇ ಕೇರಳದಲ್ಲಿ ಸಾಕಷ್ಟು ಹಿಂದೂ ಕಾರ್ಯಕರ್ತರು ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಕಾರ್ಯಕರ್ತರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಸಾಮಾನ್ಯ ಶಾಲೆಯ ಶಿಕ್ಷಕರಿಗೆ ರಾಜ್ಯಸಭೆಯ ಸ್ಥಾನಮಾನ ಸಿಕ್ಕಿರೋದು ಕೇರಳದ ಬಿಜೆಪಿಗರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ.

ಮುಂದಿನ ಕೇರಳ ಚುನಾವಣೆಯಲ್ಲಿ ಸದಾನಂದನ್ ಮಾಸ್ಟರ್‌ ಅವರು ಚುನಾವಣೆಯ ದೊಡ್ಡ ಶಕ್ತಿಯಾಗಿ ಹೊರಹೊಮ್ಮಲಿದ್ದಾರೆ. ಮಾತ್ರವಲ್ಲ ಎಡರಂಗದ ಸರಕಾರದ ವಿರುದ್ದ ಕೇಳಿಬರುತ್ತಿರೋ ಆರೋಪಗಳು ಬಿಜೆಪಿಗೆ ವರದಾನ ಆಗುವ ಸಾಧ್ಯತೆಯೂ ಇದೆ.

ಸದಾನಂದ ಮಾಸ್ಟರ್‌

ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಸಭೆಗೆ ಸದಾನಂದನ್ ಮಾಸ್ಟರ್‌ ಅವರು ನೇಮಕ ಆಗುತ್ತಲೇ ಪ್ರಶಂಸಿಸಿದ್ದಾರೆ.  ಮಾಸ್ಟರ್‌ ಅವರ ನೇಮಕ ತ್ಯಾಗಕ್ಕೆ ಸಿಕ್ಕ ಗೌರವ, ಅವರ ಜೀವನವನ್ನು ಧೈರ್ಯ ಮತ್ತು ಅನ್ಯಾಯಕ್ಕೆ ಮಣಿಯದೇ ಇರುವ ಪ್ರತಿರೂಪ ಎಂದು ಮೋದಿ ಅವರು ಬಣ್ಣಿಸಿದ್ದಾರೆ.

To Top