ಮಂಗಳೂರಿನ ನ್ಯಾಯಾಧೀಶರು ನ್ಯಾಯವಾದಿಗಳಿಂದ ಬೇರೆಯಾಗಿದ್ದ ಜೋಡಿಯ ಒಂದುಗೂಡಿಸುವ ಶುಭ ಕಾರ್ಯಕ್ಕೆ ಮುನ್ನುಡಿ…
ಮಂಗಳೂರು: ಮಂಗಳೂರಿನಲ್ಲಿ ನಡೆದ ಲೋಕ ಅದಲಾತ್ ನಲ್ಲಿ ಹಲವಾರು ವರ್ಷಗಳಿಂದ ಬೇರೆ ಬೇರೆಯಾಗಿ ವಾಸಿಸುತ್ತಿದ್ದ ಗಂಡ ಹೆಂಡತಿಯನ್ನು ಮತ್ತೆ ಒಂದಾಗಿದ್ದಾರೆ.

ಲೋಕ ಅದಾಲಾತ್ ನಲ್ಲಿ ನ್ಯಾಯಾಧೀಶರ ಮತ್ತು ನ್ಯಾಯವಾದಿಗಳ ಸಮ್ಮುಖದಲ್ಲಿ ಹೂಗಾರ್ ದಂಪತಿ ಮತ್ತೆ ಒಂದಾಗಿ ಪರಸ್ಪರ ಮಾಲೆ ಹಾಕಿಕೊಂಡರು
ಮಂಗಳೂರಿನ ನ್ಯಾಯಾಲಯದಲ್ಲಿ ನಡೆದ ಲೋಕಅದಾಲತ್ ನಲ್ಲಿ ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಲಕ್ಷ್ಮೀನಾರಾಯಣ ಭಟ್ ಕೆ, ಅದಲತ್ ಸದಸ್ಯರಾದ ಶ್ರೀಮತಿ ಕೆ ಎಸ್ ಗೌರಿ ರವರು ಕೌಟುಂಬಿಕ ಸಮಸ್ಯೆಯಿಂದ ಬೇರೆ ಬೇರೆಯಾದ ಗಂಡ ಹೆಂಡತಿಯನ್ನು ಒಟ್ಟುಗೂಡಿಸಿದ ಪ್ರಸಂಗ ನಡೆಯಿತು.
ಕಾವೂರು ನಿವಾಸಿ ಹನುಮಂತ ಹೂಗಾರ್ ಮತ್ತು ಬಿಜೈ ನಿವಾಸಿ ಸಾವಿತ್ರಿ ಹೂಗಾರ್ ರವರು ಮದುವೆಯಾಗಿ 16 ವರ್ಷ ಆಗಿದ್ದು, ಇಬ್ಬರು ಮಕ್ಕಳಿದ್ದಾರೆ.
ಕೌಟುಂಬಿಕ ಸಮಸ್ಯೆಯಿಂದ ಇಬ್ಬರು ಬೇರೆಬೇರೆಯಾಗಿ ವಾಸಿಸುತ್ತಿದ್ದರು ಹನುಮಂತ ಹೂಗಾರ್ ಅವರು ನನಗೆ ಹೆಂಡತಿ ಜೊತೆ ಬಾಳಲು ಅವಕಾಶ ಮಾಡಿಕೊಡಬೇಕೆಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.
ಅರ್ಜಿದಾರ ಹನುಮಂತ ಹೂಗಾರ್ ಪರವಾಗಿ ನ್ಯಾಯವಾದಿ ಅನಿಶಾ ಡಿಸೋಜ ಮತ್ತು ಪ್ರತಿವಾದಿ ಸಾವಿತ್ರಿ ಹೂಗಾರ್ ಪರವಾಗಿ ನ್ಯಾಯವಾದಿ ದಿನಕರ್ ಶೆಟ್ಟಿ ಅವರು ವಕಾಲತು ವಹಿಸಿದ್ದರು.ಮತ್ತು ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಜೈಬುನ್ನಿಸ್ಸ ಉಪಸ್ಥಿತರಿದ್ದರು.
ವೈವಾಹಿಕ ಜೀವನದ ಬಗ್ಗೆ ಸವಿಸ್ತಾರವಾಗಿ ಮತ್ತು ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮುಂದಿನ ಜೀವನ ನಡೆಸುವ ಬಗ್ಗೆ ತಿಳುವಳಿಕೆ ಹೇಳಿ ಅವರ ನಡುವೆ ಇದ್ದ ಸಮಸ್ಯೆಯನ್ನು ಬಗೆಹರಿಸಿ ಒಂದುಗೂಡಿಸಿದರು.
ನ್ಯಾಯಾಧೀಶರ ಸಲಹೆ ಮತ್ತು ತಿಳುವಳಿಕೆಯನ್ನು ಅರ್ಥಮಾಡಿ ಕೊಂಡು ಗಂಡ ಹೆಂಡತಿ ಮುಂದಿನ ಜೀವನ ಮಕ್ಕಳ ಜೊತೆ ಸಂತೋಷದಿಂದ ಬಾಳಲು ನಿರ್ಧರಿಸಿದರು. ನಂತರ ನ್ಯಾಯಾಧೀಶರ ಸಮ್ಮುಖದಲ್ಲಿ ಹೂವಿನ ಮಾಲೆ ಬದಲಿಸಿ, ಎಲ್ಲರೂ ಶುಭ ಹಾರೈಸಿದರು.
