CRIME NEWS

ಕೊಳತ್ತಮಜಲು ಅಬ್ದುಲ್ ರಹಿಮಾನ್ ಕೊಲೆ: 10ನೇ ಆರೋಪಿ ಸೆರೆ

Posted on

Share

 

ಬಂಟ್ವಾಳ ಕೊಳತ್ತಮಜಲು ಅಬ್ದುಲ್ ರೆಹಮಾನ್ ಕೊಲೆಗೆ ಸಂಬಂಧಿಸಿದ 10ನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪುದು ಗ್ರಾಮದ ನಿವಾಸಿ ಪ್ರದೀಪ್ ಬಂಧಿತ.

ಕೊಳತ್ತಮಜಲು ಅಬ್ದುಲ್ ರೆಹಮಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು 15 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಪೊಲೀಸರು ದೀಪಕ್, ಸುಮಿತ್ ಮತ್ತು ಇತರ 13 ಜನರನ್ನು ಆರೋಪಿಗಳೆಂದು ಹೆಸರಿಸಿದ್ದರು.

ಕೊಳತ್ತಮಜಲು ಎಂಬಲ್ಲಿ ಕೊಲೆಯಾದ ಅಬ್ದುಲ್ ರೆಹಮಾನ್. ಪೊಲೀಸರ ಮಹಜರು

ಪಿಕ್ ಅಪ್ ವಾಹನದಲ್ಲಿ ತಂದಿದ್ದ ಮರಳನ್ನು ಇಳಿಸುತ್ತಿದ್ದಾಗ ವಾಹನಗಳಲ್ಲಿ ಬಂದ ಜನರ ಗುಂಪೊಂದು ಅಬ್ದುಲ್ ರೆಹಮಾನ್ ಮತ್ತು ಕಲಂದರ್ ಶಫಿ ಅವರ ಮೇಲೆ ದಾಳಿ ನಡೆಸಿತ್ತು.
ಪಿಕ್ ಅಪ್ ವಾಹನದ ಮುಂಭಾಗದ ಗಾಜನ್ನು ಒಡೆದು, ಇಬ್ಬರನ್ನು ಹೊರಗೆಳೆದು ಹಲ್ಲೆ ನಡೆಸಿತು. ಅಬ್ದುಲ್ ರೆಹಮಾನ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಶಫಿ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ
ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ, ದೀಪಕ್ ಮತ್ತು ಸುಮಿತ್ ಅವರು ಕಲಂದರ್ ಶಾಫಿಗೆ ಪರಿಚಿತರು ಎಂದು ದೂರುದಾರ ಮೊಹಮ್ಮದ್ ನಿಸ್ಸಾರ್ ಹೇಳಿದಂತೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಶಫಿ ಅವರಿಗೆ ಹೆಸರುಗಳನ್ನು ಬಹಿರಂಗಪಡಿಸಿದ್ದಾರೆ ಎಂದು ನಿಸ್ಸಾರ್ ದೂರು ನೀಡಿದ್ದರು.

ಅಬ್ದುಲ್ ರೆಹಮಾನ್ ಕೊಳತಮಜಲು ಜುಮ್ಮಾ ಮಸೀದಿ ಕಾರ್ಯದರ್ಶಿಯಾಗಿದ್ದರು. ಅವರು ಪತ್ನಿ ಮತ್ತು ಇಬ್ಬರು ಮಕ್ಕಳು ತಂದೆಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

Most Popular

Exit mobile version