CRIME NEWS

ವಿದ್ಯಾರ್ಥಿಗಳಿಗೆ ಡ್ರಗ್ಸ್: ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಹಳೆ ವಿದ್ಯಾರ್ಥಿ ಸೆರೆ

Posted on

Share

ಮಂಗಳೂರು: ವಿದ್ಯಾರ್ಥಿಗಳಿಗೆ ಡ್ರಗ್ಸ್ ಸಪ್ಲೈ ಮಾಡುವ ಜಾಲದ ರೂವಾರಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಶಾಲೆ ಕಾಲೇಜುಗಳಲ್ಲಿ ಮಕ್ಕಳು ಮಾದಕ ದ್ರವ್ಯಗಳ ದಾಸರಾಗುತ್ತಿರುವ ಆತಂಕದ ಹೊತ್ತಿನಲ್ಲಿ ಹೆತ್ತವರು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ಸುಳಿವು ನೀಡಿದ್ದರು.

Prajwal Peenya ಪ್ರಜ್ವಲ್ ಪೀಣ್ಯಾಸಾ

ಪ್ರಜ್ವಲ್ ಪೀಣ್ಯಾಸ್‌ ಬಂಧಿತ.‌ ಮೂಲತಃ ಬೀದರ್ ನ ಮಂಗಲಪೇಟೆಯವ. ಬೆಂಗಳೂರು ಕೆಂಗೇರಿಯ‌ ಕೋಡಿಪಾಳ್ಯ‌ ನಿವಾಸಿ.

ಮಾದಕ ವಸ್ತು ಸೇವನೆ ಮಾಡುವವರಿಂದ ತನಿಖೆ ಆರಂಭಿಸಿ ಮಂಗಳೂರು ನಗರದಲ್ಲಿ  ಡ್ರಗ್ಸ್ ಪೂರೈಕೆ ಮಾಡುವ 9 ಬಂಧಿಸಲಾಗಿದೆ. ಅವರು ಜೈಲಿನಲ್ಲಿದ್ದಾರೆ.

ತನಿಖೆಯ ವೇಳೆ  ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯದಿಂದ ಟ್ರಕ್  ಪಡೆದುಕೊಂಡು ಮಂಗಳೂರು ನಗರಕ್ಕೆ  ಪೂರೈಕೆ  ಮಾಡುವ ಜಾಲದ ಪ್ರಮುಖ ರೂವಾರಿ.

ಮಂಗಳೂರು ನಗರ ಫಾದರ್‌ ಮುಲ್ಲರ್‌  ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡಿದ್ದ.

ಈತನ ವಿರುದ್ಧ ಮಂಗಳೂರು ನಗರದ ವಿವಿಧ ಠಾಣೆಗಳಲ್ಲಿ 3  ಮಾದಕ ವಸ್ತು ಮಾರಾಟ ಪ್ರಕರಣಗಳು ದಾಖಲಾಗಿವೆ.

 

Most Popular

Exit mobile version