Mangaluru

ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ ಗ್ರಂಥಾಲಯ ಸ್ಥಾಪನೆಗೆ ಸೂಕ್ತ ಕ್ರಮ- ದಿನೇಶ್ ಗುಂಡೂರಾವ್ 

Posted on

Share
ಮಂಗಳೂರು: ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ ಗ್ರಂಥಾಲಯ ಸ್ಥಾಪನೆಗೆ ಸೂಕ್ತ ಕ್ರಮ ಕೈ ಗೊಳ್ಳಲಾಗುವುದುಎಂದು ಅರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ವೆನ್‌ಲಾಕ್‌ ಆಸ್ಪತ್ರೆಯಲ್ಲಿ ಗ್ರಂಥಾಲಯವನ್ನು ಆರೋಗ್ಯ ಸಚಿವ ಗುಂಡೂರಾವ್‌ ಉದ್ಘಾಟಿಸಿದರು.

     ಅವರು ಬುಧವಾರ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ, ಯೂತ್ ರೆಡ್ ಕ್ರಾಸ್ ಸೊಸೈಟಿ, ವೆನ್ ಲಾಕ್ ಆಸ್ಪತ್ರೆ, ನಗರ ಕೇಂದ್ರ ಗ್ರಂಥಾಲಯ, ಕೆ ಎಂ ಸಿ ಆಸ್ಪತ್ರೆ ಸಹಭಾಗಿತ್ವದಲ್ಲಿ
ವೆನ್ ಲಾಕ್ ಆಸ್ಪತ್ರೆ ಆವರಣ ದಲ್ಲಿ
ಸ್ಥಳಾಂತರಗೊಂಡ ಸಮುದಾಯ ವಾಚನಾಲಯ ಮತ್ತು ಗ್ರಂಥಾಲಯ ಉದ್ಘಾಟನೆ ನೆರವೇರಿಸಿ ಮಾತನಾ ಡುತ್ತಿದ್ದರು.
 ದಕ್ಷಿಣ ಕನ್ನಡ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ಸಮುದಾಯ ವಾಚನಾಲಯ ರಾಜ್ಯಕ್ಕೆ ಮಾದರಿ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅವರ ಸಹಾಯಕರಿಗೆ ಸಂದರ್ಶಕರಿಗೆ ಮತ್ತು ಸಾರ್ವಜನಿಕರಲ್ಲಿ ಸಮಯದ ಸದುಪ ಯೋಗ ಮಾಡಲು ಮತ್ತು ಮಾಹಿತಿ ಪಡೆಯಲು ಒಂದು ಒಳ್ಳೆಯ ಅವಕಾಶ ಒದಗಿ ಸಿದಂತಾಗಿದೆ – ದಿನೇಶ್‌ ಗುಂಡೂರಾವ್‌
ಸಮಾರಂಭದಲ್ಲಿ ವೆನ್ಲಾಕ್ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಶಿವಪ್ರಕಾಶ್, ಜಿಲ್ಲಾ ಆರೋಗ್ಯ  ಅಧಿಕಾರಿ ಡಾ.ತಿಮ್ಮಯ್ಯ,ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ರಾಘವೇಂದ್ರ,ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ,ಕೆಎಂಸಿ ಅಸೋಸಿಯೇಟ್ ಡೀನ್ ಡಾ.ಸುರೇಶ್ ಶೆಟ್ಟಿ, ಡಾ ಶೀತಲ್ ,ಐಆರ್ ಸಿಎಸ್ ಡಾ.ಕೆ.ಆರ್. ಕಾಮತ್,ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ,ನಿವೃತ್ತ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ,ಇಂಡಿಯನ್ ರೆಡ್ ಕ್ರಾಸ್ ಘಟಕದ ರಾಜ್ಯದ ನಿಕಟಪೂರ್ವ ಖಜಾಂಚಿ ಯತೀಶ್ ಬೈಕಂಪಾಡಿ,ಹಿರಿಯ ಸಲಹೆಗಾರ ರವೀಂದ್ರ ನಾಥ ಉಚ್ಚಿಲ್ ,ರೋಟರಿ ಕ್ಲಬ್ ಮಂಗಳೂ ರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ ರೈ ಕಟ್ಟ,ಜಿಲ್ಲಾ ಮುಖ್ಯ ಗ್ರಂಥ ಪಾಲಕಿ ಗಾಯತ್ರಿ ,ವೆನ್ಲಾಕ್ ರಕ್ಷಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Most Popular

Exit mobile version