CRIME NEWS

ಹಾರ್ಟ್ ಅಟ್ಯಾಕ್: ವಿದ್ಯಾರ್ಥಿ ಸಾವು

Share

ಮಂಗಳೂರು: ಬಾಳಿ ಬದುಕಬೇಕಾದ ಕುಟುಂಬವನ್ನ ಬೆಳಗಬೇಕಾದ ಹದಿ ಹರೆಯದ ಯುವಕ ಯುವತಿಯರೇ ಹೃದಯಘಾತದಿಂದ ಸಾವನ್ನಪ್ಪುತ್ತಿರುವ ಸರಣಿಗೆ ಮಂಗಳೂರಿನ ವಿದ್ಯಾರ್ಥಿ ಸೇರ್ಪಡೆಯಾಗಿದ್ದಾನೆ.

ಮೃತ ವಿದ್ಯಾರ್ಥಿ

ಎಂಜಿನಿಯರಿಂಗ್ ವಿದ್ಯಾರ್ಥಿ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾನೆ. ಸುರತ್ಕಲ್‌ನ ಕೃಷ್ಣಾಪುರ ಹಿಲ್‌ಸೈಡ್ ಬಳಿಯ ನಿವಾಸಿ ಅಸ್ಗರ್ ಅಲಿ ಅವರ ಪುತ್ರ ಅಫ್ತಾಬ್ (18) ಸಾವನ್ನಪ್ಪಿದ ವಿದ್ಯಾರ್ಥಿ.

ಸುರತ್ಕಲ್‌ನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದ.

ಸೋಮವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಫ್ತಾಬ್ ಮನೆಯಲ್ಲಿ ಸ್ನಾನಕ್ಕೆ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದ.

ಆಟೋ ರಿಕ್ಷಾ ಚಾಲಕರಾದ ಅಸ್ಗರ್ ಅಲಿ, ಮಧ್ಯಾಹ್ನದವರೆಗೂ ತಮ್ಮ ಮಗನೊಂದಿಗೆ ಮನೆಯಲ್ಲಿದ್ದರು. ಅವರು ಸುಮಾರು 1 ಗಂಟೆಗೆ ಕೆಲಸಕ್ಕೆ ಹೋದ ನಂತರ ಈ ದುರಂತ ಸಂಭವಿಸಿದೆ.

To Top