KARNATAKA
ಮಂಗಳೂರು ಜಿಲ್ಲೆಗಾಗಿ ಸರ್ವರ ಹೋರಾಟ: ಎಡಚರರದ್ದು ಹಾರಾಟ!
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆಯಾಗಿ ಬದಲಾಯಿಸುವ ಅಭಿಯಾನದಕ್ಕೆ ಪಕ್ಷ ಭೇದ ಮರೆತು ರಾಜಕಾರಣಿಗಳು ಸಂಘಟನೆಗಳು, ಉದ್ಯಮಿಗಳ ಜನಪ್ರತಿನಿಧಿಗಳು ಕೈ ಜೋಡಿಸಿದ್ದಾರೆ. ಆದರೆ ಬೆರಳೆಣಿಕೆಯ ಎಡಚರರು ಮಾತ್ರ ಕೈ ಕೈ ಹಿಸುಕಿಕೊಂಡು ಅಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಕೆಲವು ಜಗಳಗಂಟಿ ಸ್ವಭಾವದ ವ್ಯಕ್ತಿಗಳು ಯಥಾಪ್ರಕಾರ ಮೊಸರಲ್ಲಿ ಕಲ್ಲು ಹುಡುಕುವಂತೆ ಅಭಿಯಾನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಒಳ್ಳೆಯ ಕೆಲಸ ಮಾಡುವಾಗ ಇಂತಹ ಸಣ್ಣ ಮನಸ್ಸಿನವರು ಇದ್ದೇ ಇರುತ್ತಾರೆ ಅದನ್ನು ಒಂದು ಬದಿಗೆ ಇಟ್ಟು, ಜಿಲ್ಲೆಯ ಎಲ್ಲರೂ ಒಗ್ಗಟ್ಟಾಗಿ ಮಂಗಳೂರು ಜಿಲ್ಲೆ ನಾಮಕರಣ ಮಾಡಿಸಲು ಹೋರಾಟಕ್ಕಾಗಿ ಸಮಿತಿ ಅಸ್ತಿತ್ವಕ್ಕೆ ಬಂದಿದೆ.
ಅಭಿಯಾನಕ್ಕಾಗಿ ಮಂಗಳೂರು ಜಿಲ್ಲೆ ತುಳು ಪರ ಹೋರಾಟ ಸಮಿತಿ ಸೋಮವಾರ ಸಂಜೆ ಅಸ್ತಿತ್ವಕ್ಕೆ ಬಂದಿದೆ.
ಕದ್ರಿ ಪಾರ್ಕ್ ಬಳಿ ಎಲ್ಲ ರಾಜಕೀಯ ಪಕ್ಷ, ಸಂಘಟನೆ, ಉದ್ಯಮಿಗಳು, ಜನಪ್ರತಿನಿಧಿಗಳು ಒಟ್ಟು ಸೇರಿ ಸಭೆ ನಡೆಸಿದ್ದಾರೆ.
ದಕ್ಷಿಣ ಕನ್ನಡ ಹೊರತುಪಡಿಸಿದರೆ ರಾಜ್ಯದಲ್ಲೆಡೆ ಮತ್ತು ಬೆಂಗಳೂರಿನಲ್ಲೂ ಕೂಡ ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಜಿಲ್ಲೆ ಎಂದೇ ಕರೆಯುತ್ತಿರುವುದರಿಂದ ರಾಜ್ಯದಲ್ಲಿ ಇದಕ್ಕೆ ಯಾವುದೇ ಆಕ್ಷೇಪ ವ್ಯಕ್ತವಾಗಿಲ್ಲ ಅಥವಾ ವಿವಾದ ಮೂಡಿಲ್ಲ.
ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡುವಾಗ ವ್ಯಾಪಕಪ್ರತಿರೋಧ ಇದ್ದರೂ ರಾಜ್ಯ ಸರ್ಕಾರ ಕ್ಯಾರೇ ಅಂದಿರಲಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಣ್ಣಮಟ್ಟಿನ ವಿರೋಧ ಇದೆ.
ಜಿಲ್ಲಾ ಕೇಂದ್ರವಾದ ಮಂಗಳೂರು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ಯಾಂಕಿಂಗ್, ಸ್ವಾಯತ್ತ ವಿಶ್ವವಿದ್ಯಾನಿಲಯಗಳು, ಶಿಕ್ಷಣ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ಆದರ ಆತಿಥ್ಯ ಉದ್ಯಮದ ಕೇಂದ್ರವಾಗಿದೆ.
ಅಂತರಾಷ್ಟ್ರೀಯ ಮಟ್ಟದ ಬ್ರಾಂಡ್ ಮಂಗಳೂರು ರೂಪುಗೊಳ್ಳಲು ಇದು ಪೂರಕವಾಗಲಿದೆ.
1997ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಉಡುಪಿ ಜಿಲ್ಲೆ ಪ್ರತ್ಯೇಕವಾದಾಗ ಉಡುಪಿ ತಾಲೂಕಿನ ಹೆಸರನ್ನೇ ಕುಂದಾಪುರ, ಕಾರ್ಕಳ ತಾಲೂಕು ಒಳಗೊಂಡ ಜಿಲ್ಲೆಗೆ ನಾಮಕರಣ ಮಾಡಲಾಗಿತ್ತು.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವನ್ನು ಅಧಿಕೃತವಾಗಿ ಮಂಗಳೂರು ಕ್ಷೇತ್ರ ಎಂದು ಕರೆಯಲಾಗುತ್ತಿದೆ. 1951 ರಿಂದಲೂ ಇದೇ ಹೆಸರು ಬಳಕೆಯಲ್ಲಿದೆ.
ಬೆರಳೆಣಿಕೆ ಸಂಘಟನೆಗಳು, ಜನರು ದಕ್ಷಿಣ ಕನ್ನಡ ಜಿಲ್ಲೆ ಇರಲಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
- ಬಿಜೆಪಿ ಮುಖಂಡರೂ ಆದ ಶಾಸಕ ವೇದವ್ಯಾಸ ಕಾಮತ್, ಕಾಂಗ್ರೆಸ್ ಮುಖಂಡರೂ ಆದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಸಂಸದ ಬ್ರಿಜೇಶ್ ಚೌಟ ಕೂಡಾ ಸಮ್ಮತಿ ಮಾತ್ರವಲ್ಲದೆ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.
ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಪಕ್ಷದ ಮುಖಂಡರುಗಳು ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಪಕ್ಷ, ಸಂಘಟನೆ, ಉದ್ಯಮಿಗಳು, ಜನಪ್ರತಿನಿಧಿಗಳು ಒಟ್ಟು ಸೇರಿ ಸಭೆ ನಡೆಸ ಲಾಗಿದೆ. ಇದರಲ್ಲಿ ಎಲ್ಲರೂ ಅಧ್ಯಕ್ಷರೇ ಎಲ್ಲರೂ ಕಾರ್ಯಕರ್ತರು. ಇದರ ಸ್ಪಷ್ಟ ರೂಪುರೇಷೆ ತಿಳಿಸಲು ಮಂಗಳೂರು ಜಿಲ್ಲೆ ಹೋರಾಟ ಸಮಿತಿ ಮಂಗಳವಾರ ಪತ್ರಿಕಾಗೋಷ್ಠಿಯನ್ನು ಕೂಡ ಕರೆದಿದೆ
– ರೋಷನ್ ರೊನಾಲ್ಡ್ , ಮಂಗಳೂರು ಮಂಗಳೂರು ಜಿಲ್ಲೆ ಸಮಿತಿ, ಹೋರಾಟಗಾರ