INDIA
ಭಾರತಕ್ಕೆ 336 ರನ್ ಗೆಲುವು! 608 ಗುರಿ, 68 ವರ್ಷಗಳ ಬಳಿಕ ಗೆಲುವಿನ ದಾಖಲೆ
ಇಂಗ್ಲೆಂಡ್ ವಿರುದ್ದದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 336 ರನ್ ಗೆಲುವು ದಾಖಲಿಸಿದೆ.
ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಗೆಲುವು ಸಾಧಿಸಿದೆ. ಶುಬಮನ್ ಗಿಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಈ ಸಾಧನೆ ಮಾಡಿದೆ. ಇಂಗ್ಲೆಂಡ್ ತಂಡಕ್ಕೆ 608 ರನ್ ಟಾರ್ಗೆಟ್ ನೀಡಿದ್ದ ಟೀಂ ಇಂಡಿಯಾ, ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿತ್ತು. ಅಕಾಶ್ ದೀಪ್ ದಾಳಿಗೆ ಇಂಗ್ಲೆಂಡ್ ವಿಕೆಟ್ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. 271 ರನ್‌ಗೆ ಇಂಗ್ಲೆಂಡ್ ಆಲೌಟ್ ಆಯಿತು. ಈ ಮೂಲಕ ಭಾರತ 336 ರನ್ ಗೆಲುವು ದಾಖಲಿಸಿದೆ.
ಟೀಂ ಇಂಡಿಯಾ ದಿಟ್ಟ ಬ್ಯಾಟಿಂಗ್ ಪ್ರದರ್ಶನದಿಂದ ಇಂಗ್ಲೆಂಡ್ ತಂಡಕ್ಕಕೆ 608 ರನ್ ಟಾರ್ಗೆಟ್ ನೀಡಲಾಗಿತ್ತು. 4 ದಿನದಾಟದ ಅಂತ್ಯದಲ್ಲಿ 2ನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಆಘಾತ ಎದುರಿಸಿತ್ತು. ಪ್ರಮುಖ 3 ವಿಕೆಟ್ ಆರಂಭದಲ್ಲೇ ಕಳೆದುಕೊಂಡು ಆಘಾತ ಎದುರಿಸಿತ್ತು.
ಕೊನೆಯ ದಿನದ ಆರಂಭದಲ್ಲೇ ವಿಕೆಟ್ ಕಬಳಿಸಲು ಟೀಂ ಇಂಡಿಯಾ ಸಜ್ಜಾಗಿತ್ತು. ಮಳೆ ಯೊಂದೇ ಇಂಗ್ಲೆಂಡಿನ ಮಾನ ಉಳಿಸಬಹುದಿತ್ತು.
5ನೇ ದಿನದಾಟದ ಆರಂಭದಲ್ಲೇ ಇಂಡಿಯಾ ಮೇಲುಗೈ
ಅಂತಿಮ ದಿನದಾಟ ಮಳೆಯಿಂದ ವಿಳಂಬವಾಗಿ ಆರಂಭಗೊಂಡಿತು. ಕ್ರೀಸ್ ನಲ್ಲಿ ಉಳಿದುಕೊಂಡಿದ್ದ ಹ್ಯಾರಿ ಬ್ರೂಕ್ ಹಾಗೂ ಒಲಿ ಪೊಪ್ ಜೊತೆ ಆಟ ಮುರಿಯಿತು. ಒಲಿ ಪೋಪ್ 24 ರನ್ ಹೊಡೆದು ಔಟಾದರೆ, ಹ್ಯಾರಿ ಬ್ರೂಕ್ 23 ರನ್ ಸಿಡಿಸಿ ನಿರ್ಗಮಿಸಿದ್ದರು. ಆಕಾಶ್ ದೀಪ್ ದಾಳಿಗೆ ಇಂಗ್ಲೆಂಡ್ ಮುದುಡಿತು. ನಾಯಕ ಬೆನ್ ಸ್ಟೋಕ್ಸ್ 33 ರನ್ ಸಿಡಿಸಿ ವಿಕೆಟ್ ಕೈಚೆಲ್ಲಿದರು.
ಭಾರತ ತಂಡದ ಕ್ಯಾಪ್ಟನ್ ಶುಭಮನ್ ಗಿಲ್ ಸಂಭ್ರಮಾಚರಣೆ
ಗೆಲುವಿಗೆ 4 ವಿಕೆಟ್ ಬೇಕಿದ್ದರೆ, ಇಂಗ್ಲೆಂಡ್ ಪಂದ್ಯ ಡ್ರಾ ಮಾಡಲು ಹೋರಾಟ ಮುಂದುವರಿಸಿತ್ತು. ಗಟ್ಟಿಯಾಗಿ ನಿಂತುಕೊಂಡ ಜ್ಯಾಮಿ ವಿರುದ್ಧ ಅಂಪೈರ್ ಕೆಟ್ಟ ತೀರ್ಪು ನೀಡಿದರೂ ಡಿಆರ್‌ಎಸ್ ನೆರವಾಗಿತ್ತು. ಅಕಾಶ್ ದೀಪ್ ಎಸೆತದಲ್ಲಿ ವಾಶಿಂಗ್ಟನ್ ಸುಂದರ್‌ಗೆ ಕ್ಯಾಚ್ ನೀಡಿದರು. ಜ್ಯಾಮಿ 88 ರನ್ ಸಿಡಿಸಿ ಔಟಾದರು.
ಇಂಗ್ಲೆಂಡ್ 271 ರನ್‌ಗೆ ಆಲೌಟ್ ಆಯಿತು. ಟೀಂ ಇಂಡಿಯಾ 336 ರನ್ ಗೆಲುವು ದಾಖಲಿಸಿತು.