CRIME NEWS
ಆಮಿಷ ಒಡ್ಡಿ ಇಸ್ಲಾಂಗೆ ಮತಾಂತರ: ಸೆರೆ
ಲಕ್ನೋ: ಆರ್ಥಿಕ ನೆರವು, ವಿವಾಹ ಸೇರಿದಂತೆ ಹತ್ತು ಹಲವು ಭರವಸೆಗಳನ್ನ ಹಿಂದೂಗಳನ್ನ ಇಸ್ಲಾಂಗೆ ಮತಾಂತರ ಮಾಡುತ್ತಿದ್ದ ಧಾರ್ಮಿಕ ಮತಾಂತರ ತಂಡದ ಮಾಸ್ಟರ್ ಮೈಂಡ್ ಮತ್ತು ಆತನ ಸಹಾಯಕನನ್ನ ಉತ್ತರ ಪ್ರದೇಶ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ.
ಜಲಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ ಮತ್ತು ಸಹಯಾಕ ನೀತು ಅಲಿಯಾಸ್ ನಸ್ರೀನ್ ಬಂಧಿತರು. ಇವರಿಬ್ಬರು ಬಲರಾಂಪುರ ಜಿಲ್ಲೆಯ ಮಧಪುರ ನಿವಾಸಿಗಳೆಂದು ತಿಳಿದುಬಂದಿದೆ.
ಆಮಿಷ ಒಡ್ಡಿ ಮತಾಂತರ ಮಾಡುವುದು ಕಾನೂನಿನ ಪ್ರಕಾರ ತಪ್ಪು. ಸ್ವಯಂ ಪ್ರೇರಿತವಾಗಿ ಧರ್ಮವನ್ನು ಸ್ವೀಕರಿಸಿದರೆ ತಪ್ಪಲ್ಲ.
ಮತಾಂತರ ಮಾಡುವ ದುಷ್ಟ ಬಡವರನ್ನು ಅಸಹಾಯಕರನ್ನ ವಿಧವೆಯರನ್ನು ಹುಡುಕಿ ಅವರ ಸಂಕಷ್ಟಕ್ಕೆ ಪರಿಹಾರ ನೀಡುವ ರೀತಿಯಲ್ಲಿ ಆಮಿಷ ಒಡ್ಡಿ ಮತಾಂತರ ಮಾಡುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಭಯೋತ್ಪಾದನಾ ನಿಗ್ರಹದಳ ಆರೋಪಿಯನ್ನ ಬಂಧಿಸಿದೆ.