KARNATAKA

ನೃತ್ಯಕಲಾ ಪರಿಷತ್ ಅಧ್ಯಕ್ಷೆ ಕಲಾಶ್ರೀ ರಾಜಶ್ರೀ ಉಳ್ಳಾಲ್

Posted on

Share

ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ತಿನ ಅವಿಭಜಿತ ದ. ಕ ಜಿಲ್ಲಾ ಅಧ್ಯಕ್ಷರಾಗಿ ಕಲಾಶ್ರೀ ರಾಜಶ್ರೀ ಉಳ್ಳಾಲ್ ಆಯ್ಕೆ

ಕಲಾ ಶ್ರೀ ರಾಜಶ್ರೀ ಉಳ್ಳಾಲ್

ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್2025-27ರ ಸಾಲಿನ ಅವಿಭಜಿತ ದ. ಕ ಜಿಲ್ಲಾ ಅಧ್ಯಕ್ಷರಾಗಿ ವಿದುಷಿ ರಾಜಶ್ರೀ ಉಳ್ಳಾಲ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಕಲಾಶ್ರೀ ವಿದ್ವಾನ್ ಚಂದ್ರಶೇಖರ ನಾವಡ, ಕಾರ್ಯದರ್ಶಿಯಾಗಿ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್, ಜತೆ ಕಾರ್ಯದರ್ಶಿಯಾಗಿ ಗುರು ಶ್ರೀಧರ ಹೊಳ್ಳ,ಕೋಶಾಧಿಕಾರಿ ವಿದ್ವಾನ್ ಸುರೇಶ್ ಅತ್ತಾವರ  ಖಾಯಂ ಟ್ರಸ್ಟಿಯಾಗಿ ಕಲಾಶ್ರೀ ವಿದುಷಿ ನಯನ ವಿ ರೈ, ವಿದ್ವಾನ್ ಸುಧೀರ್ ಕೊಡವೂರು, ನಿಕಟಪೂರ್ವ ಅಧ್ಯಕ್ಷರಾಗಿ ವಿದ್ವಾನ್ ಪ್ರವೀಣ್ ಯು.ಕೆ. ಸದಸ್ಯರಾಗಿ ಮಂಗಳೂರು ವಲಯದಿಂದ ವಿದುಷಿ ಲತಾ ಶಶಿಧರ್, ವಿದ್ವಾನ್ ಸುದರ್ಶನ್, ವಿದುಷಿ ಸವಿತಾ ಜೀವನ್ , ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ, ಪುತ್ತೂರು ವಲಯದಿಂದ ವಿದ್ವಾನ್ ದೀಪಕ್ ಪುತ್ತೂರು,ವಿದುಷಿ ಮಂಜುಳಾ ಸುಬ್ರಹ್ಮಣ್ಯ, ಗುರು ರಾಮಕೃಷ್ಣ ಕೊಡಂಚ, ವಿದ್ವಾನ್ ಭವಾನಿ ಶಂಕರ ಮೊದಲಾದವರು ಆಯ್ಕೆಯಾಗಿರುತ್ತಾರೆ ಎಂದು ಪರಿಷತ್ ಪ್ರಕಟಣೆಯಲ್ಲಿ ತಿಳಿಸಿದೆ.

1 Comment

  1. user

    July 6, 2025 at 9:11 am

    ಅಭಿನಂದನೆಗಳು ಮೇಡಂ
    ನಿಮ್ಮ ಅಧ್ಯಕ್ಷತೆಯಲ್ಲಿ ಸಂಘಟನೆ ರಾಜ್ಯದಲ್ಲೇ ಕೀರ್ತಿ ತರಲಿ

Leave a Reply

Your email address will not be published. Required fields are marked *

Most Popular

Exit mobile version