LATEST NEWS

ಜುಲೈ 5ರಂದು ಸಾಹಿತ್ಯ ಕೃತಿ ಅವಲೋಕನ

Posted on

Share
ಮಂಗಳೂರು:
ಕನ್ನಡ ಸಾಹಿತ್ಯಪರಿಷತ್ತು, ಮಂಗಳೂರು ತಾಲೂಕು ಘಟಕ‌ ಹಾಗೂ ನೆಲ್ಲಿಕಾರು ಜಿನದತ್ತ ಶೆಟ್ಟಿ ವಸಂತಮ್ಮ ಪ್ರತಿಷ್ಠಾನ ಸಹಯೋಗದಲ್ಲಿ ಸಾಹಿತ್ಯ ಕೃತಿ ಅವಲೋಕನ  ಜುಲೈ 5ರಂದು ಶಾರದಾ ವಿದ್ಯಾಲಯದ ಧ್ಯಾನಮಂದಿರ ಸಭಾಂಗಣದಲ್ಲಿ‌ ನಡೆಯಲಿದೆ.
 ಗಣೇಶ ಪ್ರಸಾದ ಜೀ(ಜೀ ಜೀ) ಯವರ ‘ಕಾಂತೆ ಕವಿತೆ’ ಕವನಗಳ ಗುಚ್ಛದ ಬಗ್ಗೆ ಖ್ಯಾತ ಹಾಸ್ಯ ಲೇಖಕಿ  ಪ್ರೊ. ಭುವನೇಶ್ವರಿ ಹೆಗಡೆಯವರು ಅವಲೋಕನ ಗೈಯಲಿದ್ದಾರೆ.
 ಡಾ. ಮೀನಾಕ್ಷಿ ರಾಮಚಂದ್ರರವರ ಅನುವಾದಿತ ಕೃತಿ ‘ಮಾತು ಎಂಬ ವಿಸ್ಮಯ’ ಕೃತಿಯ ಬಗ್ಗೆ ಮಂಗಳೂರಿನ  ಸ್ವರೂಪ ಅಧ್ಯಯನ ಕೇಂದ್ರದ  ಸುಮಂಗಲಾ ಕೃಷ್ಣಾಪುರರವರು‌ ಅವಲೋಕಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾರದಾ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕರು ನೆರವೇರಿಸಲಿದ್ದಾರೆ. ಕ.ಸಾ.ಪ.ದ  ಮಂಗಳೂರು ತಾಲೂಕಿನ ಅಧ್ಯಕ್ಷರಾದ ಡಾ. ಮಂಜುನಾಥ ರೇವಣಕರರು ಅಧ್ಯಕ್ಷತೆ ವಹಿಸಲಿದ್ದಾರೆ. ಮೈರುಗ ಪ್ರಕಾಶನದ ಶ್ರೀ ಗೋವಿಂದ ಭಟ್ ಮೈರುಗ ಹಾಗೂ ನೆಲ್ಲಿಕಾರು ಜಿನದತ್ತ ಶೆಟ್ಟಿ ವಸಂತಮ್ಮ ಪ್ರತಿಷ್ಠಾನದ ಅಧ್ಯಕ್ಷ
ಎನ್. ತಿಲಕ ಪ್ರಸಾದ ಜೀಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Leave a Reply

Your email address will not be published. Required fields are marked *

Most Popular

Exit mobile version