FILM
ರಾಜ ರತ್ನಾಕರ Film
ಅವಧಿ : 2 ಘಂಟೆ 18 ನಿಮಿಷಗಳು
ತಾರಾಗಣ : ಚಂದನ್ ರಾಜ್ Chethan Durga, ವಿದ್ಯಾ ಶ್ರೀ
ನಿರ್ದೇಶಕರು : ವೀರೇಶ್ ಬೊಮ್ಮಸಾಗರ
ಉಡಾಫೆ ನಾಯಕ ಶೋಕಿಲಾಲ. ಜೇಬಲ್ಲಿ ಮೂರ್ಕಾಸಿದ್ದರೂ ಕೋಟ್ಯಾಧೀಶನಂತೆ ಬದುಕಲು ಇಚ್ಚಿಸುವವನು. ಆತನಿಗೆ ಮನೆಯವರ ಬಗೆಗೆ ಕೇರ್ ಇಲ್ಲ. ಬೇರೆಯವರ ಕಷ್ಟಕ್ಕೆ ಕ್ಯಾರೆ ಎನ್ನುವುದಿಲ್ಲ. ಇಂತಿಪ್ಪ ಹುಡುಗನಿಗೆ ಹುಡುಗಿ ಸಿಗುತ್ತಾಳೆ. ಪ್ರೀತಿಸಲು ತೊಡಗಿದಾಗ ನಾಯಕಿ ಒಂದು ಸವಾಲು ಎಸೆಯುತ್ತಾಳೆ. ಅದು ನಾಯಕನ ಬದುಕಿನ ದಿಕ್ಕನ್ನೂ ಜೊತೆಗೆ ಸಿನಿಮಾದ ದಿಕ್ಕನ್ನೂ ಬದಲಿಸುತ್ತದೆ.
ಹೇಗೆ?
ಸಿನಿಮಾ ಒಂದು ಸಾಲಿನಲ್ಲಿ ನೇರಕ್ಕೆ ಹೆಚ್ಚು ಗೊಂದಲವಿಲ್ಲದೇ ಸಾಗುತ್ತದೆ. ಮೊದಲಾರ್ಧ ತಮಾಷೆಯಲ್ಲಿಯೇ ಒಂದಷ್ಟು ಘಟನೆಗಳನ್ನ ಹೆಣೆಯಲಾಗಿದೆ. ಮಧ್ಯಂತರದ ನಂತರ ಚಿತ್ರದ ಸತ್ವ ತೆರೆದುಕೊಳ್ಳುತ್ತದೆ.
ಹಾಡುಗಳು ಚೆನ್ನಾಗಿವೆ. ಛಾಯಾಗ್ರಹಣ ಸಖತ್. ಕಲಾವಿದರ ಅಭಿನಯಕ್ಕೆ ಫುಲ್ ಮಾರ್ಕ್ಸ್ ಕೊಡಬಹುದು.
ವಿಮರ್ಶೆ:
#ರವೀಂದ್ರವೆಂಶಿ