WORLD
ಉಗ್ರರ ಒತ್ತಾಯಕ್ಕೆ ಬಾಂಗ್ಲಾದಲ್ಲಿ ಹಿಂದೂ ದೇಗುಲ ಧ್ವಂಸ
ಢಾಕಾ: ಢಾಕಾದ ಖಿಲ್ಖೇತ್ ಪ್ರದೇಶದಲ್ಲಿ ದುರ್ಗಾ ದೇವಾಲಯ ಧ್ವಂಸಗೊಂಡ ಘಟನೆಗೆ ಭಾರತ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಗುರುವಾರ ಈ ಕೃತ್ಯವು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಿದ್ದು, ಇದನ್ನು ಹಗುರವಾಗಿ ಪರಿಗಣಿಸಲಾಗದು ಎಂದು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಘಟನೆಯು ಕೇವಲ ಭೂ ಬಳಕೆಯ ವಿಷಯವಲ್ಲ, ಬದಲಾಗಿ ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆಗೆ ಸಂಬಂಧಿಸಿದ ಗಂಭೀರ ಪ್ರಶ್ನೆ ಎಂದು ಭಾರತ ಆರೋಪಿಸಿದೆ.
ಆದರೆ ಇದನ್ನು ಒಪ್ಪದ ಭಾರತ, ಈ ಬಗ್ಗೆ ಭಾರತ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯಿಸಿದ್ದು, ಉಗ್ರಗಾಮಿಗಳ ಒತ್ತಾಯದ ಮೇರೆಗೆ ದೇವಾಲಯ ಕೆಡವಲಾಗಿದೆ. ಭದ್ರತೆ ಒದಗಿಸುವ ಬದಲು, ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಇದನ್ನು ಅಕ್ರಮ ಭೂ ಆಕ್ರಮಣದ ವಿಷಯವಾಗಿ ತಿರುಚಿದೆ ಎಂದು ಟೀಕಿಸಿದ್ದಾರೆ. ಹಿಂದೂ ಸಮುದಾಯ, ಅವರ ಆಸ್ತಿಗಳು ಮತ್ತು ಧಾರ್ಮಿಕ ಸ್ಥಳಗಳ ಸಂಪೂರ್ಣ ಸುರಕ್ಷತೆಯನ್ನು ಖಾತರಿಪಡಿಸುವುದು ಬಾಂಗ್ಲಾದೇಶದ ಜವಾಬ್ದಾರಿಯಾಗಿದೆ ಎಂದು ಭಾರತ ಎಚ್ಚರಿಸಿದೆ. ಈ ವಿಷಯವನ್ನು ಹಲವು ವೇದಿಕೆಗಳಲ್ಲಿ ಈ ಹಿಂದೆಯೂ ಎತ್ತಲಾಗಿದ್ದು, ಭಾರತವು ಈ ಸಮಸ್ಯೆಗಳ ಪರಿಹಾರಕ್ಕಾಗಿ ಕಾಯುತ್ತಿದೆ ಎಂದು ಜೈಸ್ವಾಲ್ ಹೇಳಿದ್ದಾರೆ.