FILM

ಕಾಂಟಾ ಲಾಗಾ ಖ್ಯಾತಿಯ ಶೆಫಾಲಿ ಗೆ ಹೃದಯಾಘಾತ!

Posted on

Share

ನಾ ಬೋರ್ಡು ಇರದ ಬಸ್ಸನೂ… ಹಾಡಿಗೂ ನೃತ್ಯ ಮಾಡಿದ್ದರು..
ಮುಂಬೈ: ಬಿಗ್ ಬಾಸ್ 13ರ ಸ್ಪರ್ಧಿ ಮತ್ತು ಕಾಂಟಾ ಲಗಾ ಹಾಡಿನ ಹಿಟ್ ರೀಮಿಕ್ಸ್‌ ಹಾಡಿಗೆ ಹೆಸರುವಾಸಿಯಾಗಿದ್ದ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ತಡರಾತ್ರಿ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದು, ಅವರ ಹಠಾತ್ ನಿಧನದ ಸುದ್ದಿ  ಆಘಾತಕ್ಕೀಡು ಮಾಡಿದೆ.
‘ನಾ ಬೋರ್ಡು ಇರದ ಬಸ್ಸನು ಹತ್ತಿ ಬಂದ ಚೋಕರಿ’ ಹಾಡಿನಲ್ಲಿ ‘ಶೆಫಾಲಿ ನಟಿಸಿದ್ದರು.
ಶೆಫಾಲಿ ಜರಿವಾಲಾ ಶುಕ್ರವಾರ ತಡರಾತ್ರಿ ತಮ್ಮ ಮುಂಬೈ ನಿವಾಸದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರ ಪತಿ ಪರಾಗ್ ತ್ಯಾಗಿ ನಟಿಯನ್ನು ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ವೈದ್ಯರು ಆಕೆ ಆಸ್ಪತ್ರೆಗೆ ಬರುವಷ್ಟರಲ್ಲಿಯೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು ಎಂದು ತಿಳಿದುಬಂದಿದೆ.
ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿರುವ ಹಲವಾರು ವೀಡಿಯೊಗಳ ಕುರಿತಂತೆ ಶೆಫಾಲಿಯ ಗಂಡ ಪರಾಗ್ ತ್ಯಾಗಿ ಅವರು ಅಸಮಾಧಾನಗೊಂಡಿದ್ದು, ತಮ್ಮ ಕಾರಿನಿಂದ ಇಳಿಯುತ್ತಲೇ ಅವರನ್ನು ಸುತ್ತುವರೆದ ಪಪರಾಜಿಗಳನ್ನು ಉದ್ದೇಶಿಸಿ ‘ಖಾಸಗಿ ಜೀವನದಲ್ಲಿ ಮೂಗು ತೂರಿಸಬೇಡಿ.. ತಮ್ಮ ಖಾಸಗಿತನವನ್ನು ಗೌರವಿಸಿ’ ಎಂದು ಕೈ ಮುಗಿದು ಮನವಿ ಮಾಡಿಕೊಂಡಿದ್ದಾರೆ.
ಯಾರು ಶೆಫಾಲಿ ಜರಿವಾಲಾ
2002 ರಲ್ಲಿ ಬಿಡುಗಡೆಯಾದ ಕಾಂಟಾ ಲಗಾ ಎಂಬ ಸಂಗೀತ ವಿಡಿಯೋ ಮೂಲಕ ಶೆಫಾಲಿ ಮೊದಲು ಖ್ಯಾತಿ ಗಳಿಸಿದರು.  ನಂತರ ಅವರು ಅಕ್ಷಯ್ ಕುಮಾರ್ ಮತ್ತು ಸಲ್ಮಾನ್ ಖಾನ್ ಅವರೊಂದಿಗೆ ಮುಜ್ಸೆ ಶಾದಿ ಕರೋಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ನಂತರದ ವರ್ಷಗಳಲ್ಲಿ, ಅವರು ದೂರದರ್ಶನದಲ್ಲಿ ಕಾಣಿಸಿಕೊಂಡರು. ತಮ್ಮ ಪತಿ ಪರಾಗ್ ತ್ಯಾಗಿ ಅವರೊಂದಿಗೆ ನಾಚ್ ಬಲಿಯೇ ಎಂಬ ನೃತ್ಯ ರಿಯಾಲಿಟಿ ಶೋನಲ್ಲಿ ಭಾಗವಹಿಸಿದರು ಮತ್ತು ನಂತರ ಬಿಗ್ ಬಾಸ್ 13 ಮನೆಗೆ ಪ್ರವೇಶಿಸಿದರು. ಬಿಗ್ ಬಾಸ್‌ಗೆ ಅವರ ಪ್ರವೇಶವು ಗಮನ ಸೆಳೆಯಿತು, ವಿಶೇಷವಾಗಿ ಸಹ ಸ್ಪರ್ಧಿ ಮತ್ತು ದಿವಂಗತ ನಟ ಸಿದ್ಧಾರ್ಥ್ ಶುಕ್ಲಾ ಅವರೊಂದಿಗಿನ ಹಿಂದಿನ ಸಂಬಂಧದಿಂದಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದರು. ಸಿದ್ದಾರ್ಥ್ ಶುಕ್ಲ ಅವರು ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದರು.

Leave a Reply

Your email address will not be published. Required fields are marked *

Most Popular

Exit mobile version