CRIME NEWS

ಬಾಡಿಗೆ ಕೇಳಲು ಹೋದವನಿಗೆ ಬಡಿಗೆ ಏಟು

Posted on

Share

n

ಬೆಳ್ತಂಗಡಿ : ಟಿಪ್ಪರ್ ವಾಹನದ ಬಾಡಿಗೆ ಹಣ ಕೇಳಲು ಹೋದವನ ಮೇಲೆ ಸೋಡಾ ಬಾಟಲ್ ಬಿಸಾಕಿ ಕೊಲೆಗೆ ಯತ್ನಿಸಿದ ಘಟನೆ ಚಾರ್ಮಾಡಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿಯಲ್ಲಿ ಆರು ತಿಂಗಳ ಹಿಂದೆ ಕೆಲಸ ಮಾಡಿದ್ದ ಟಿಪ್ಪರ್ ವಾಹನದ ಬಾಡಿಗೆಯ 65 ಸಾವಿರ ರೂಪಾಯಿ ಹಣ ಬಾಡಿಗೆಗೆ ಕಳುಹಿಸಿದ್ದ ಮಧ್ಯವರ್ತಿ ಚಿಬಿದ್ರೆ ಗ್ರಾಮದ ಕಕ್ಕಿಂಜೆ ನಿವಾಸಿ ಮಹಮ್ಮದ್ ತೌಸಿಫ್ ಗೆ ಚಾರ್ಮಾಡಿ ಗ್ರಾಮದ ಬೀಟಿಗೆ ನಿವಾಸಿ ರಹೀಂ ನೀಡಲು ಬಾಕಿ ಇದ್ದು ಇದಕ್ಕಾಗಿ ಚಾರ್ಮಾಡಿ ಗ್ರಾಮದ ಬೀಟಿಗೆ ಜಂಕ್ಷನ್ ನಲ್ಲಿ ರಹೀಂ ಮತ್ತು ಮಹಮ್ಮದ್ ಫೈಯಾಜ್ ಇದ್ದ ಸ್ಥಳಕ್ಕೆ ಟಿಪ್ಪರ್ ಮಾಲಕ ಅರೀಫ್ ಜೊತೆ ಮಹಮ್ಮದ್ ತೌಸಿಫ್ ಜೂ.27 ರಂದು ಮಧ್ಯಾಹ್ನ ಸುಮಾರು 2:23 ಗಂಟೆಗೆ ಹೋಗಿ ಹಣ ಕೇಳಿದ್ದರು ಈ ನಡುವೆ ರಹೀಂ ಮತ್ತು ಮಹಮ್ಮದ್ ಫೈಯಾಜ್ ಸೇರಿ ತೌಸಿಫ್ ಗೆ ಬೆದರಿಕೆ ಹಾಕಿ ಹಲ್ಲೆ ಮಾಡಿ ಬಳಿಕ ಮಹಮದ್ ತೌಸಿಫ್ ಗೆ ಪಕ್ಕದಲ್ಲಿದ್ದ ಸೋಡಾ ಬಾಟಲ್ ತೆಗೆದುಕೊಂಡು ರಹೀಂ ಬಿಸಾಕಿದ್ದಾನೆ. ಇದರಿಂದ ಮಹಮ್ಮದ್ ತೌಸಿಫ್ ಕಣ್ಣಿಗೆ ಗಂಭೀರ ಗಾಯವಾಗಿದೆ‌. ಇದರಿಂದ ತಕ್ಷಣ ಸ್ಥಳೀಯರೆಲ್ಲ ಸೇರಿ ಉಜಿರೆ ಖಾಸಗಿ ಆಸ್ಪತ್ರೆಗೆ ಸಾಗಿದ್ದರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ.
ಈ ಘಟನೆ ಬಗ್ಗೆ ಧರ್ಮಸ್ಥಳ ಪೊಲೀಸರು ಆಸ್ಪತ್ರೆಗೆ ತೆರಳಿ ಗಾಯಗೊಂಡ ಮಹಮ್ಮದ್ ತೌಸಿಫ್ ವಿಚಾರಿಸಿ ಮಹಮ್ಮದ್ ತೌಸಿಫ್ ಸ್ನೇಹಿತ ನೀಡಿದ ದೂರು ಮೇರೆಗೆ 109,118(2),115(2),351(2),352 r/w 3(5) BNS ಅಡಿಯಲ್ಲಿ ಚಾರ್ಮಾಡಿ ಗ್ರಾಮದ ಬೀಟಿಗೆ ನಿವಾಸಿಗಳಾದ ರಹೀಂ ಮತ್ತು ಮಹಮ್ಮದ್ ಫೈಯಾಜ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಜೂ.27 ರಂದು ರಾತ್ರಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಮಂಗಳೂರು ಮಹಮ್ಮದ್ ತೌಸಿಫ್ ದಾಖಲಾದ ಆಸ್ಪತ್ರೆಗೆ ಆರೋಪಿಗಳಾದ ರಹೀಂ ಮತ್ತು ಮಹಮ್ಮದ್ ಫೈಯಾಜ್ ಕೂಡ ದಾಖಲಾಗಿ ನಮಗೆ ಮಹಮ್ಮದ್ ತೌಸಿಫ್ ಹಲ್ಲೆ ನಡೆಸಿದ್ದಾರೆಂದು ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಅದರಂತೆ ಧರ್ಮಸ್ಥಳ ಪೊಲೀಸರು ಜೂ. 28 ರಂದು ಬೆಳಗ್ಗೆ ಆಸ್ಪತ್ರೆಗೆ ತೆರಳಿ ಮಾಹಿತಿ ಕಲೆ ಹಾಕಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

Most Popular

Exit mobile version