
ಟಿವಿ9, ವಿಶ್ವವಾಣಿ ಮೊದಲಾದ
ಪ್ರಮುಖ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದ ಅತ್ಯಂತ ಸೌಮ್ಯ ಹಾಗೂ ಸಂಭಾವಿತ ಪತ್ರಕರ್ತ ಮಿತ್ರ ಶಿವಪ್ರಸಾದ್ (47) ಅನುಮಾನಸ್ಪದ ರೀತಿಯಲ್ಲಿ ದೂರದ ಕೋಲಾರದಲ್ಲಿರುವ ತಮ್ಮ ಅತ್ತೆಯ ಮನೆಯಲ್ಲಿ ನಿಗೂಢವಾಗಿ ನೇಣಿಗೆ ಶರಣಾಗಿದ್ದಾರೆ.
ಕೆಲಸದ ನಿಮಿತ್ತ ಕೋಲಾರಕ್ಕೆ ತೆರಳಿದ್ದ ಶಿವಪ್ರಸಾದ್,ಅಪರೂಪಕ್ಕೆ ಅತ್ತೆ ಮನೆಗೆ ತೆರಳಿದ್ದರು.ತೆರಳುವಾಗ ಸ್ವೀಟ್ಸ್, ಹಣ್ಣುಗಳನ್ನು ತೆಗೆದುಕೊಂಡು ಹೋಗಿ ನಿನ್ನೆ ರಾತ್ರಿವರೆಗೂ ಎಲ್ಲರೊಂದಿಗೆ ಚೆನ್ನಾಗಿಯೇ ಮಾತನಾಡಿದ್ದಾರೆ.
ಮನೆಯ ಹೊರಗೆ ವಾಕ್ ಮಾಡಿ, ಎಲ್ಲರಿಗೂ ಗುಡ್ ನೈಟ್ ಎಂದ್ಹೇಳಿ ರೂಮಿಗೆ ತೆರಳಿ ಬೀಗ ಹಾಕಿಕೊಂಡಿದ್ದರು.
ಬೆಳಗ್ಗೆ ನೋಡಿದಾಗ ಅವರು ಬೆಡ್ಡು ರೂಮಿನಲ್ಲಿ ಹಗ್ಗ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.
ಶಿವಪ್ರಸಾದ್ ಬೆಂಗಳೂರಿನ ಕೋಗಿಲು ಕ್ರಾಸ್ ನ ಬಳಿ ತಮ್ಮ ಹೆಂಡತಿ ಹಾಗೂ ಮಗಳೊಂದಿಗೆ ವಾಸವಾಗಿದ್ದರು.
ಅವರು ಕೋಲಾರ ಮೂಲದ ನೇಚರ್ ಕೇರ್ ಎನ್ನುವ ಆಯುರ್ವೇದಿಕ್ ಸಂಸ್ಥೆಯ ಕಂಟೆಂಟ್ ಬರಹಗಾರ ಮತ್ತು ಸೋಷಿಯಲ್ ಮೀಡಿಯಾದ ಉಸ್ತುವಾರಿ ಹೊತ್ತಿದ್ದರು.ಬಹುತೇಕ ಬೆಂಗಳೂರಿನಲ್ಲೇ ಕೆಲಸ ಮಾಡುತ್ತಿದ್ದ ಶಿವಪ್ರಸಾದ್ ಏನಾದ್ರೂ ಶೂಟಿಂಗ್ ಇದ್ದಾಗ ಮಾತ್ರ ಕೋಲಾರಕ್ಕೆ ತೆರಳುತಿದ್ದರು.ಮೊನ್ನೆ ಕೂಡ ಹಾಗೆಯೇ ತೆರಳಿದ್ದರು. ಹಾಗೆ ಹೋದಾಗಲೆಲ್ಲಾ ತಮ್ಮ ವೈದ್ಯಮಿತ್ರರೊಬ್ಬರ ರೂಮಿನಲ್ಲಿ ಉಳಿದುಕೊಳ್ಳುತ್ತಿದ್ದರು.
ಆದರೆ ಮೊನ್ನೆ ವೈದ್ಯಮಿತ್ರರ ರೂಮಿನಲ್ಲೂ ಉಳಿದುಕೊಳ್ಳದೆ ನೇರವಾಗಿ ಅತ್ತೆ ಮನೆಗೆ ತೆರಳಿದ್ದರು. ಸ್ವೀಟ್ ಹಾಗೂ ಹಣ್ಣನ್ನು ಕೊಂಡೊಯ್ದಿದ್ದಾರೆ. ರಾತ್ರಿಯೆಲ್ಲಾ ಮಾತನಾಡಿ ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆ
ಬೆಳಗ್ಗೆಯಾದರೂ ಬಾಗಿಲು ತೆರೆದಿರುವುದಕ್ಕೆ ಅನುಮಾನಗೊಂಡ ಅತ್ತೆ ಮನೆಯವರು ಬಾಗಿಲು ಒಡೆದು ನೋಡಿದಾಗ ಕಣ್ಣೆದುರೇ ಅಳಿಯ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಶವದ ಬಳಿ ಒಂದು ಡೆತ್ ನೋಟ್ ಸಿಕ್ಕಿದ್ದು ಅದರಲ್ಲಿ ಬರೆದಿರುವ ಸಾಕಷ್ಟು ವಿವರಗಳನ್ನು ಪೊಲೀಸರು ತನಿಖೆಯ ಕಾರಣಕ್ಕೆ ಬಹಿರಂಗಪಡಿಸಿಲ್ಲ.ಆದರೆ ಅದರಲ್ಲಿ ತನಗೆ ಸಾಲ ಯಾರಿಂದ ಬರಬೇಕು..ತಾನು ಯಾರಿಗೆಲ್ಲಾ ಸಾಲ ಕೊಡಬೇಕೆನ್ನುವುದನ್ನು ವಿವರಿಸಿದ್ದಾರೆ ಎನ್ನಲಾಗಿದೆ.
ಪತ್ರಕರ್ತ ಶಿವಪ್ರಸಾದ್: ಯಾರಿಗೂ ನೋವಾಗದಂತೆ ನಡೆದುಕೊಂಡಿದ್ದೇ ಇಲ್ಲ.ಡೆಸ್ಕ್ ನಲ್ಲಿ “ ಅಜಾತಶತ್ರು ಎಂದು ಹೆಸರು ಮಾಡಿಕೊಂಡಿದ್ದರು.