
ಮಂಗಳೂರು:. ಕೋಟಿ ಬೆಲೆಬಾಳುವ ಕಾರನ್ನು ಅದರ ಅದರ ದಾಖಲೆಗಳನ್ನು ಮಾರ್ಪಾಡು ಮಾಡಿ ಕಡಿಮೆ ಬೆಲೆ ನಮೂದಿಸಿ ಕಡಿಮೆ ತೆರಿಗೆ ಕಟ್ಟುವ ಹಾಗೆ ಮಾಡಿ ರಾಜ್ಯ ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂ. ನಷ್ಟ ಮಾಡಿದ ಮೂವರು ಆರ್ ಟಿಓ ಕಚೇರಿ ಸಿಬ್ಬಂದಿಯನ್ನು ಅಮಾನತು ಗೊಳಿಸಲಾಗಿದೆ.
.ಮಂಗಳೂರು ಉಪ ಸಾರಿಗೆ ಆಯುಕ್ತರ ಕಚೇರಿಯ ಕೇಂದ್ರ ಸ್ಥಾನೀಯ ಸಹಾಯಕಿ ಸರಸ್ವತಿ, ಅಧೀಕ್ಷಕಿ ರೇಖಾ ನಾಯಕ್, ಪ್ರಥಮ ದರ್ಜೆ ಸಹಾಯಕ ನೀಲಪ್ಪ ಕೆ.ಎಚ್. ಅಮಾನತುಗೊಂಡವರು.
ಮರ್ಸಿಡಿಸ್ ಬೆನ್ ಕಾರಿಗೆ ಸಂಬಂಧಿಸಿದಂತೆ 01.01.2017ರಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಅವರ ಎಲೆಕ್ಟ್ರಾನಿಕ್ ಸಿಟಿ ಕಚೇರಿಯಿಂದ ಮಂಗಳೂರು ಕಚೇರಿಗೆ ತಾತ್ಕಾಲಿಕ ನೋಂದಣಿ ಪತ್ರವನ್ನು ನಿಹಾಲ್ ಅಹಮದ್ ಹೆಸರಿನಲ್ಲಿ₹1,96,95,000ಕ್ಕೆ ಇನ್‌ವಾಯಿಸ್ ನೀಡಲಾಗಿದೆ. ಈ ತಾತ್ಕಾಲಿಕ ನೋಂದಣಿಯ ವಿವರಗಳನ್ನು 24.12.2024ರಂದು ಮಂಗಳೂರು ಕಚೇರಿಯಲ್ಲಿ ಮಾರ್ಪಾಡುಗೊಳಿಸಿ, ಈ ಕಾರಿನ ಮಾರಾಟ ಮೊತ್ತ ₹32,15,000 ಎಂದು ನಮೂದಿಸಲಾಗಿದೆ. ಈ ಅಕ್ರಮವೆಸಗಿದ ಕಾರಣಕ್ಕಾಗಿ ಈ ಮೂವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗಿದೆ ಎಂದು ಸಾರಿಗೆ ಆಯುಕ್ತ ಯೋಗೀಶ್ ಎ.ಎಂ. ಅವರು ಹೊರಡಿಸಿರುವ ಅಮಾನತು ಆದೇಶದಲ್ಲಿ ತಿಳಿಸಿದ್ದಾರೆ.