FILM
ಸ್ಕೂಲ್ ಲೀಡರ್ ಸಿನೆಮಾ 25 ದಿನ ಸಂಭ್ರಮ
ಕಾರ್ಕಳ : 25 ದಿನಗಳನ್ನು ಪೂರೈಸಿದ ಸ್ಕೂಲ್ ಲೀಡರ್ ಕನ್ನಡ ಸಿನೆಮಾದ ಸಾಧನ ಸಂಭ್ರಮ ಸಮಾರಂಭ ಪ್ಲಾನೆಟ್ ಥಿಯೇಟರ್ ನಲ್ಲಿ ನಡೆಯಿತು.
ಸ್ಕೂಲ್ ಲೀಡರ್ ಸಿನೆಮಾವು ಸರಕಾರಿ ಶಾಲೆಯಲ್ಲಿ ಓದುವ ಮಕ್ಕಳ ನಾಯಕತ್ವವನ್ನು ಪ್ರತಿಬಿಂಬಿಸುವ ಉತ್ತಮ ಸಿನೆಮಾ. ಈ ನಿಟ್ಟಿನಲ್ಲಿ ಸಿನೆಮಾ ಯಶಸ್ವಿಯಾಗಿ ಮುಂದುವರಿಯಲಿ ಎಂದು ಸಮಾರಂಭ ಉದ್ಘಾಟಿಸಿದ ಕಾರ್ಕಳ ಶಿಕ್ಷಣಾಧಿಕಾರಿ ಗಿರಿಜಮ್ಮ ಅಭಿಪ್ರಾಯಪಟ್ಟರು.
ರೋಟರಿ ಮಾಜಿ ಗವರ್ನರ್ ಡಾ. ಭರತೇಶ್ ಮಾತನಾಡಿ, ಸತ್ಯೇಂದ್ರ ಪೈ ನಿರ್ಮಾಣದ ಎಲ್ಲಾ ಸಿನೆಮಾಗಳು ಒಂದೊಳ್ಳೆಯ ಥೀಮ್ ಹೊಂದಿರುತ್ತದೆ. ಅಂತೆಯೇ ಸ್ಕೂಲ್ ಲೀಡರ್ ಸಿನೆಮಾವು ಸಮಾಜಕ್ಕೆ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ಧನಾತ್ಮಕ ಚಿತ್ರಣವನ್ನು ನೀಡುವ ಸಿನೆಮಾವಾಗಿದ್ದು, ಯಶಸ್ವಿಯಾಗಿ ಮುಂದುವರಿಯಲಿ ಎಂದು ಶುಭಹಾರೈಸಿದರು.
ಉದ್ಯಮಿ ರವೀಂದ್ರ ಶೆಟ್ಟಿ ಬಜಗೋಳಿ ಮಾತನಾಡಿ, ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಲ್ಲಿ ಸಿನೆಮಾದ ಪಾತ್ರ ಮಹತ್ತರವಾಗಿದೆ. ಸರಕಾರಿ ಶಾಲೆಯ ಅಭಿವೃದ್ಧಿಗೆ ಸ್ಕೂಲ್ ಲೀಡರ್ ಸಿನೆಮಾ ಸಹಕಾರಿಯಾಗಲಿ ಎಂದು ಆಶಿಸಿದರು.
ನಿರ್ಮಾಪಕ ಸತ್ಯೆಂದ್ರ ಪೈ ಮಾತನಾಡಿ, ಕಾರ್ಕಳದ ಶಾಲೆಗಳು ಸೇರಿದಂತೆ 25 ಶಾಲೆಯ ವಿದ್ಯಾರ್ಥಿಗಳು ಈ ಸಿನೆಮಾದಲ್ಲಿ ಅಭಿನಯಿಸಿದ್ದಾರೆ. ಶೈಕ್ಷಣಿಕ ವ್ಯವಸ್ಥೆಯ ಬಗೆಗಿನ ಚಿಂತನೆಗಳು ಮತ್ತು ವಿದ್ಯಾರ್ಥಿಗಳಲ್ಲಿ ಅಡಗಿರುವ ನಾಯಕತ್ವ ಗುಣವನ್ನು ಸಿನೆಮಾ ಪ್ರತಿಬಿಂಬಿಸುತ್ತದೆ. ಸಿನೆಮಾದ ಯಶಸ್ಸಿಗೆ ನಿಮ್ಮೆಲ್ಲರ ಸಹಕಾರ ಅವಶ್ಯ ಎಂದರು.
ಉದ್ಯಮಿ ಬೋಳ ಪ್ರಶಾಂತ್ ಕಾಮತ್, ಮಜಾ ಟಾಕೀಸ್ ಖ್ಯಾತಿಯ ಮೋಹನ್ ಕಾರ್ಕಳ, ವಿವೇಕಾನಂದ ಶೆಣೈ, ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಪೀಟರ್ ಫೆರ್ನಾಂಡೀಸ್, ಜಿಎಸ್‌ಬಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿವೇಕಾನಂದ ಶೆಣೈ, ತಾ. ಪಂ. ಮಾಜಿ ಅಧ್ಯಕ್ಷ ವಿಕ್ರಂ ಹೆಗ್ಡೆ, ನಿವೃತ್ತ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ, ಶಿಕ್ಷಕಿ ಪೂರ್ಣಿಮಾ ಶೆಣೈ, ರಮೀತಾ ಶೈಲೇಂದ್ರ, ನವೀನ್ ಚಂದ್ರ, ಡಾ, ಗಣೇಶ್ ಕಾಮತ್, ಸಿನೆಮಾ ನಿರ್ದೇಶಕ ರಜಾಕ್ ಪುತ್ತೂರು, ಛಾಯಾಗ್ರಾಹಕ ಮೋಹನ್ ಪಡ್ರೆ, ಸಿನೆಮಾದ ವಿತರಕರು ಬಾಲಕೃಷ್ಣ ಶೆಟ್ಟಿ, ಸಿನೆಮಾ ತಂಡದ ನಾಗೇಶ್ ಕಾಮತ್, ಅಶ್ವಿನಿ, ಪ್ರಭಾವತಿ, ವೀಣಾ, ಕಲಾವಿದರಾದ ಶೀಜಯ್, ದೃಶ್ಯ, ಮಾನ್ಸಿ, ಅಕ್ಷರ, ಅಮೂಲ್ಯ, ವಿಘ್ನೇಶ್ ಸೇರಿದಂತೆ ಮೊದಲಾದವರಿ ಉಪಸ್ಥಿತರಿದ್ದರು. ಸಹ ನಿರ್ದೇಶಕ ಅಕ್ಷತ್ ವಿಟ್ಲ ಕಾರ್ಯಕ್ರಮ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.