INDIA
#JusticeForMen
ಪ್ರಿಯಕರನ ಜೊತೆ ಆಕ್ಷೇಪಾರ್ಹ ಸ್ಥಿತಿಯ ತನ್ನ ವಿಡಿಯೋವನ್ನು ಗಂಡನಿಗೆ ಕಳುಹಿಸಿದ ಹೆಂಡತಿ? ಗಂಡ ಆತ್ಮ ಹ* ತ್ಯೆ.
ಸಾಯುವ ಮುನ್ನ ಗಂಡ ಬರೆದ ಪತ್ರ..
ನನ್ನ ಹೆಸರು ಮಗನ್, ಪತ್ನಿ ದಿವ್ಯಾ ಮತ್ತು ಆಕೆಯ ಪ್ರಿಯಕರ್ ದೀಪಕ್ ಕಿರುಕುಳದಿಂದ ನಾನು ಆತ್ಮಹ*ತ್ಯೆ ಮಾಡಿಕೊಳ್ಳುತ್ತಿದ್ದೇನೆ. ಪತ್ನಿಯ ಪ್ರಿಯಕರ ದೀಪಕ್ ಸಂಭಾಜಿ ನಗರದ ನಿವಾಸಿಯಾಗಿದ್ದು, ಪೊಲೀಸ್ ಸೇವೆಯಲ್ಲಿದ್ದಾನೆ. ಇವರಿಬ್ಬರು ಜೊತೆಯಾಗಿ ನನಗೆ ಕಿರುಕುಳ ನೀಡುತ್ತಿದ್ದಾರೆ. ನನಗೆ ಮೋಸವಾಗಿದ್ದು, ಹಣವನ್ನು ಸಹ ಪಡೆದುಕೊಂಡಿದ್ದಾರೆ. ನನಗೆ ಹಣ ನೀಡುವಂತೆ ಪದೇ ಪದೇ ಒತ್ತಡ ಹಾಕುತ್ತಾರೆ. ಈಗ ದೀಪಕ್‌ಗೆ ಉದ್ಯೋಗದಲ್ಲಿ ಬಡ್ತಿ ಸಿಗಲು ಲಂಚ ಕೊಡಬೇಕಿದೆ. ಅದಕ್ಕಾಗಿ ತಂದೆಯನ್ನು ಕೊ*ಲ್ಲು ಮತ್ತು ಪೂರ್ವಜರಿಂದ ಬಂದಿರುವ ಜಮೀನು ಮಾರಾಟ ಮಾಡಿ ಹಣ ನೀಡುವಂತೆ ಹೇಳುತ್ತಿದ್ದಾರೆ.
ಪತ್ನಿ ದಿವ್ಯಾ ವಿಡಿಯೋ ಕಳುಹಿಸಿದ್ದು, ಇದರಲ್ಲಿ ಆಕೆ ದೀಪಕ್ ಮುಂದೆ ಡ್ಯಾನ್ಸ್ ಮಾಡುತ್ತಿದ್ದಾಳೆ. ದಿವ್ಯಾ ಮತ್ತು ದೀಪಕ್ ಆಕ್ಷೇಪಾರ್ಹ ಸ್ಥಿತಿಯಲ್ಲಿರುವ ವಿಡಿಯೋ ಇದಾಗಿದೆ. ಈ ವಿಡಿಯೋ ನನ್ನನ್ನು ತುಂಬಾ ಡಿಸ್ಟರ್ಬ್ ಮಾಡಿದೆ. ಇದರಿಂದಾಗಿ ನಾನು ಮಾನಸಿಕವಾಗಿ ಕುಸಿದಿದ್ದೇನೆ ಎಂದು ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹರಿಯಾಣದ ಈ ವಿವಾಹಿತ ರೀತಿಯಲ್ಲಿ ಅನೇಕ ಮಂದಿ ಪತ್ನಿಯರಿಂದಲೇ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂಬ ಆಕ್ರೋಶ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ.