LATEST NEWS

ನಕಲಿ ಚಿನ್ನ ಅಡಮಾನ ಇರಿಸಿ ಬ್ಯಾಂಕ್‌ಗೆ ವಂಚನೆ ಆರೋಪ ; ಪೊಲೀಸರಿಗೆ ದೂರು

Posted on

Share
ಮಂಗಳೂರು,: ಶ್ರೀ ಗೋಕರ್ಣನಾಥ ಕೋ-ಓಪರೇಟಿವ್ ಬ್ಯಾಂಕ್ ಲಿಮಿಟೆಡ್ ಸುರತ್ಕಲ್ ಶಾಖೆಗೆ ಗುರುಪುರದ ಅಡ್ಡೂರು ನಿವಾಸಿ ಮುಹಮ್ಮದ್ ಆಸೀಫ್ ಎಂಬವರು ನಕಲಿ ಚಿನ್ನವನ್ನು ಅಡವಿಟ್ಟು ಒಟ್ಟು ರೂ ರೂ. 3,36,000 ರೂ. ವಂಸಿಸಿರುವುದಾಗಿ ಪೊಲೀಸರಿಗೆ ದೂರು ನೀಡಿರುವ ಘಟನೆ ವರದಿಯಾಗಿದೆ.
ಈ ಸಂಬಂಧ ಬ್ಯಾಂಕ್‌ನ ಶಾಖಾಧಿಕಾರಿ ಸುರತ್ಕಲ್ ಪೊಲೀಸರಿಗೆ ದೂರು ನೀಡಿದ್ದಾರೆ.
ಜೂ. 23ರಂದು ಮಧ್ಯಾಹ್ನ 12:25 ಗಂಟೆಗೆ ಸಂಸ್ಥೆಯ ಪರಿಚಿತ ಗ್ರಾಹಕರಾದ ಮುಹಮ್ಮದ್ ಆಸೀಫ್ ಸಾಲದ ಖಾತೆ ಸಂಖ್ಯೆ 32314 ರಲ್ಲಿ ಒಟ್ಟು 16.100 ಗ್ರಾಂ, ನಿವ್ವಳ 15.500 ಗ್ರಾಂ ನ 1 ಜೊತೆ ಬಳೆಯನ್ನು ಅಡಮಾನವಿಟ್ಟು ರೂ. 92,000 ಹಾಗೂ ಖಾತೆ ಸಂಖ್ಯೆ 32315 ರಲ್ಲಿ ಒಟ್ಟು 41.800 ಗ್ರಾಂ ನಿವ್ವಳ 41.000 ಗ್ರಾಮ್‌ನ 1 ಜೊತೆ ಕಾಲಿನ ಚೈನ್ ಹಾಗೂ 1 ಎಳೆ ಚೈನು ಇವುಗಳನ್ನು ಅಡಮಾನ ಇರಿಸಿ ರೂ. 2,44,000 ಸಾಲ ಸೇರಿದಂತೆ ಒಟ್ಟು ರೂ ರೂ. 3,36,000 .ಹಣವನ್ನು ಸಾಲವಾಗಿ ಪಡೆದುಕೊಂಡಿದ್ದರು.
ಚಿನ್ನಾಭರಣಗಳನ್ನು ಸಂಸ್ಥೆಯ ಅಧಿಕೃತ ಚಿನ್ನಾಭರಣ ಪರಿಶೋಧಕರಾದ ಭಾಸ್ಕರ ಅಚಾರಿ ರವರು ಪರಿಶೀಲನೆ ನಡೆಸಿ, ಅಸಲಿ ಚಿನ್ನಾಭರಣ ಎಂಬುದಾಗಿ ದೃಡಪಡಿಸಿದ ಬಳಿಕ ಸಂಸ್ಥೆಯಿಂದ ಸಾಲ ಮಂಜೂರು ಮಾಡಲಾಗಿತ್ತು ಎಂದು ಬ್ಯಾಂಕ್‌ನ ಅಧಿಕಾರಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಬಳಿಕ ಚಿನ್ನಾಭರಣಗಳ ಪಕ್ವತೆ ಮೇಲೆ ಅನುಮಾನ ಬಂದು ಭಾಸ್ಕರ ಅಚಾರಿ ಪುನರ್ ಪರಿಶೀಲನೆ ಮಾಡಿದಾಗ ಈ ಎಲ್ಲಾ ಚಿನ್ನಾಭರಣಗಳು ನಕಲಿ ಎಂಬುದಾಗಿ ತಿಳಿದು ಬಂದಿರುತ್ತದೆ.
ಮುಹಮ್ಮದ್ ಆಸೀಫ್ ನಕಲಿ ಚಿನ್ನಾಭರಣವನ್ನು ಅಡಮಾನ ಇರಿಸಿ ಬ್ಯಾಂಕ್‌ಗೆ ವಂಚನೆಗೈದು ನಂಬಿಕೆ ದ್ರೋಹ ಮಾಡಿದ್ದಾರೆಂದು ಆರೋಪಿಸಿ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಬ್ಯಾಂಕ್‌ನ ಶಾಖಾಧಿಕಾರಿ ದೂರು ನೀಡಿ ಆಗ್ರಹಿಸಿದ್ದಾರೆ. ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Most Popular

Exit mobile version