LATEST NEWS

ಜ್ವರದಿಂದ ಕಬ್ಬಡಿ ಆಟಗಾರ ಸಂದೀಪ್ ಕುಲಾಲ್ ನಿಧನ

Posted on

Share
ಬೆಳ್ತಂಗಡಿ: ಜ್ವರದಿಂದ ಬಳಲುತ್ತಿದ್ದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾದೆ ಸಾವನಪ್ಪಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಮೃತರನ್ನು ಲ್ಯಾಲ ಗ್ರಾಮದ ವಿವೇಕಾನಂದ ನಗರದ ಸೋಮಣ್ಣ ಕುಂಬಾರ ಅವರ ಪುತ್ರ ಸಂದೀಪ್ ಕುಲಾಲ್ (28) ಎಂದು ಗುರುತಿಸಲಾಗಿದೆ.
ಸಂದೀಪ್ ಕೆಲವು ದಿನಗಳ ಹಿಂದೆ ಜಾಂಡೀಸ್ ಉಂಟಾಗಿತ್ತು. ಅದಕ್ಕೆ ಚಿಕಿತ್ಸೆ ಪಡೆದುಕೊಂಡು ಸಂಪೂರ್ಣ ಗುಣಮುಖರಾಗಿದ್ದರು. ಆದರೆ ಎರಡು ದಿನಗಳಿಂದ ಮತ್ತೆ ಜ್ವರ ಉಲ್ಬಣಗೊಂಡು ಜೂನ್ 24ರಂದು ಮೃತಪಟ್ಟಿದ್ದಾರೆ.
ವೃತ್ತಿಯಲ್ಲಿ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಕೆಲಸ ಮಾಡುತ್ತಿದ್ದ ಅವರು ಕಬಡ್ಡಿ ಆಟಗಾರರಾಗಿದ್ದರು. ಹಲವಾರು ಸಂಘ- ಸಂಸ್ಥೆಗಳಲ್ಲೂ ಗುರುತಿಸಿಕೊಂಡಿದ್ದರು. ಮೃತರು ತಂದೆ, ತಾಯಿ, ಪತ್ನಿ, ಐದು ತಿಂಗಳ ಮಗು ಹಾಗೂ ಸಹೋದರನನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

Most Popular

Exit mobile version