ಮೂಡುಬಿದರೆ : ಹತ್ತು ಹಲವು ಜಾತಿ, ಭಾಷೆ, ಧರ್ಮದ ವೈವಿಧ್ಯತೆ ನಡುವೆ ನಾವೆಲ್ಲರೂ ಭಾರತೀಯರು ಅನ್ನುವ ಪ್ರಜ್ಞೆ ಮೂಡಿಸುವ ಶಿಕ್ಷಣ ಸಂಸ್ಥೆಗಳು ನಂದಾದೀಪದಂತೆ ಬೆಳಗುತ್ತವೆ ಎಂದು
ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಚಾರ್ಯವರ್ಯ ಸ್ವಾಮೀಜಿ ಹೇಳಿದರು
ಅವರು ಸಾಣೂರಿನಲ್ಲಿ ರಾಜೇಶ್ವರಿ ನ್ಯಾಷನಲ್ ಸ್ಕೂಲ್ ನಲ್ಲಿ ಬಯಲು ರಂಗ ಮಂದಿರ ಉದ್ಘಾಟನೆ ಮತ್ತು ವಿದ್ಯಾರ್ಥಿಗಳ ಸಾಮೂಹಿಕ ವಂದೇ ಮಾತರಂ ಗೀತ ಗಾಯನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಶ್ರವಣರ ಊರು ಸಾಣೂರಿನಲ್ಲಿ ರಾಜೇಶ್ವರಿ ದೇವಿಯ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಪ್ರಕೃತಿ ರಮಣೀಯಶಬಯಲುರಂಗ ಮಂದಿರದಲ್ಲಿ ಮಕ್ಕಳ ಕಂಠದಲ್ಲಿ ವಂದೇ ಮಾತರಂ ಮೂಲಕ ಮನಸ್ಸಿನ ಜಡತ್ವ ದೂರೀಕರಣ ಆಗಿದೆ ಎಂದರು.
ಪಾಠ ಮತ್ತು ಪಠ್ಯೇತರ ಚಟುವಟಿಕೆಗಳು ಜೊತೆಗೆ ಆಧ್ಯಾತ್ಮದ ಕಥಾನಕಗಳು, ನೃತ್ಯ, ನಾಟ್ಯ, ಸಂಗೀತದ ಮೂಲಕ ಅಂತರಂಗ ಶಕ್ತಿಗಳ ಹರಿವು ಉಂಟಾಗುತ್ತದೆ.
ರಾಜಸಿಕ, ತಾಮಸಿಕ ಗುಣಗಳಿಗಿಂತ ಸಾತ್ವಿಕತೆಯ ಶ್ರೇಷ್ಠ. ಶಾಂತರಸ ಅತ್ಯಂತ ಶ್ರೇಷ್ಠ.
ಆತ್ಮನಿರ್ಭರ ಭಾರತ ರೂಪಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಸೇವಾ ರಂಗ, ವೈಜ್ಞಾನಿಕ ರಂಗದಲ್ಲಿ ಪ್ರಗತಿ, ಮಿಲಿಟರಿ ರಕ್ಷಣೆಯಿಂದ ಕಲೆಗಳಿಗೆ ಪೋಷಣೆ ಆಗುತ್ತದೆ. ವಿದ್ಯೆ, ಬುದ್ಧಿ, ಸಂಸ್ಕೃತಿ, ಸಾಹಿತ್ಯದ ಬೆಳವಣಿಗೆ ಆಗುತ್ತದೆ ಎಂದರು.
ರಾಜೇಶ್ವರಿ ವಿದ್ಯಾ ಸಂಸ್ಥೆ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಮಾತನಾಡಿ, ಗ್ರಾಮದಲ್ಲಿ ದೇಶಭಕ್ತ ತರುಣ ಸಮುದಾಯ ನಿರ್ಮಾಣ ಮಾಡುವ ಬದ್ಧತೆ ಮತ್ತು ಯುವಕರಲ್ಲಿ ದಕ್ಷತೆ, ಕೌಶಲ್ಯ, ಸಮಾಜಮುಖಿ ಚಿಂತನೆ, ದೇಶಭಕ್ತಿ ಮೈಗೂಡಿಸುವ ಶಿಕ್ಷಣ ನೀಡುವ ಉದ್ದೇಶದಿಂದ ವಿದ್ಯಾ ಸಂಸ್ಥೆ ಪ್ರಾರಂಭ ಮಾಡಿದ್ದೇವೆ.
ವಿದ್ಯಾರ್ಥಿಗಳ ಸೇರ್ಪಡೆ ಮತ್ತು ಪ್ರಾರಂಭಿಕ ಯಶಸ್ಸು
ಮೊದಲ ವರ್ಷವೇ 1ನೇ ತರಗತಿಯಿಂದ ಪ್ರಥಮ ಪಿಯುಸಿ ವರೆಗೆ 419 ವಿದ್ಯಾರ್ಥಿಗಳು ಸೇರ್ಪಡೆ
ಆಗಿದ್ದಾರೆ. ಕರ್ನಾಟಕದ ರಾಯಚೂರು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳ ವಿದ್ಯಾರ್ಥಿಗಳಿದ್ದಾರೆ– ದೇವಿ ಪ್ರಸಾದ್ ಶೆಟ್ಟಿ
ಯೋಗ, ಭಜನೆ, ಸಾಂಸ್ಕೃತಿಕ ಚಟುವಟಿಕೆ ತರಬೇತಿ, ಭರತನಾಟ್ಯ, ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ಕೊಳಲು, ಸ್ಯಾಕ್ಸೋಫೋನ್, ಕೀಬೋರ್ಡ್, ತಬಲ ಕಲಿಸಿಕೊಡಲಾಗುತ್ತದೆ.
ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಉದ್ದೀಪನ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. 9ನೇ ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಕಡ್ಡಾಯ ಮಿಲಿಟರಿ ಶಿಕ್ಷಣದ ಯೋಜನೆ ಇದೆ ಎಂದರು.
ಅಧ್ಯಾಪಕ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ವಂದೇ ಮಾತರಂ ಕುರಿತು ಉಪನ್ಯಾಸ ನೀಡಿದರು.
ಉದ್ಯಮಿ ಅಲಂಗಾರು ಶ್ರೀಪತಿ ಭಟ್, ಗ್ರಾಮ ಪಂಚಾಯತ್ ಅಧ್ಯಕ್ಷ ಯುವರಾಜ್ ಜೈನ್,
ಶಿಕ್ಷಣ ಸಂಸ್ಥೆಯ ಟ್ರಸ್ಟಿ ಜಯರಾಮ್ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭ ನಿವೃತ್ತ ಸೈನಿಕರನ್ನು ಗೌರವಿಸಲಾಯಿತು.
ಶ್ವೇತಾ ಡಿ. ಶೆಟ್ಟಿ ಸ್ವಾಮೀಜಿಗಳಿಗೆ ಫಲ ಪುಷ್ಪ ಅರ್ಪಿಸಿ ಗೌರವಿಸಿದರು.
ಉಷಾ ಅಂಬರೀಶ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲ ಸಚಿನ್ ಕೆಎಸ್ ವಂದಿಸಿದರು.

ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಕೊಡವೂರು ನೃತ್ಯ ನಿಕೇತನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು.



