ಉಡುಪಿ: ವ್ಯಕ್ತಿಯೊಬ್ಬರು ಬಟ್ಟೆ ಧರಿಸದೇ ವಾಹನ ಚಲಾಯಿಸಿಕೊಂಡು ಮಣಿಪಾಲ ಸುತ್ತಿದ ವಿಡಿಯೋ ವೈರಲ್ ಆಗಿದ್ದು, ಈ ರೀತಿಯ ಸ್ಕೂಟರ್ ಸವಾರಿಗೆ ಕಾರಣ ಏನು ಅನ್ನೋದು ಕೂಡ ತಿಳಿದುಬಂದಿದೆ.
ಮಣಿಪಾಲ ಪರಿಸರದಲ್ಲಿ ವ್ಯಕ್ತಿಯೊಬ್ಬರು ಕೇವಲ ಬನ್ನಿಯನ್ಧ ರಿಸ ಪ್ಯಾಂಟು ಒಳಚಡ್ಡಿ ಇಲ್ಲದೆ ಸ್ಕೂಟರ್ ನಲ್ಲಿ ಸವಾರಿ ಮಾಡುತ್ತಿರುವ ದೃಶ್ಯ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
ಸ್ಕೂಟರ್ ನಲ್ಲಿ ಅರೆಬೆತ್ತಲೆಯಾಗಿ ಸವಾರಿ ಮಾಡುತ್ತಿರುವ ದೃಶ್ಯವನ್ನು ದಾರಿಹೋಕರು, ವಾಹನಗಳಲ್ಲಿ ತೆರಳುತ್ತಿರುವವರು ಬೈಕ್ ನಲ್ಲಿ ತೆರಳುತ್ತಿರುವವರು ತಮ್ಮ ತಮ್ಮ ಮೊಬೈಲ್ಗಳಲ್ಲಿ ಚಿತ್ರೀಕರಿಸಿಕೊಂಡಿದ್ದರು.
ಈ ಕುರಿತು ನಾನಾ ರೀತಿಯ ಚರ್ಚೆ ವಿಮರ್ಶೆ ವಾದಮಂಡನೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿತ್ತು.
ಆಟಿ ಅಮಾವಾಸ್ಯೆ ಆಗಿರುವುದರಿಂದ ಬೆಳಿಗ್ಗೆ ಬೇಗನೆ ಎದ್ದು ಹಾಲೆ ಕೆತ್ತೆ ತರಲು ಹೋಗಿರಬಹುದು. ವಾಪಸ್ ಬರುವಾಗ ತಡವಾಗಿದೆ ಎಂದು ವಿಶ್ಲೇಷಣೆ ಮಾಡಿರುವ ವಿಚಾರ ವೈರಲ್ ಕೂಡ ಆಗಿತ್ತು.
ಇದೀಗ ವ್ಯಕ್ತಿಯ ಮನೆಯವರಿಗೆ ಸಂಪರ್ಕಿಸಿದಾಗ ನಿಜ ವಿಚಾರ ಹೊರ ಬಂದಿದೆ. ಆ ವ್ಯಕ್ತಿಗೆ ಮಾನಸಿಕ ಸಮಸ್ಯೆ ಇದ್ದು, ಡಿಪ್ರೆಶನ್ ಕಾಯಿಲೆಯ ಕಾರಣದಿಂದಾಗಿ ಆ ರೀತಿ ವರ್ತಿಸಿದ್ದಾರೆ.
ಘಟನೆಯು ಕೂಡ ಒಂದು ದಿನದ ಹಿಂದೆ ನಡೆದಿದ್ದು ಆ ವ್ಯಕ್ತಿಯು, ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ..
ಹೀಗಾಗಿ ಈ ವಿಡಿಯೋಗಳನ್ನು ವೆಬ್ ಸುದ್ದಿವಾಹಿನಿಗಳು ಫೇಸ್ಬುಕ್ ಇನ್ಸ್ಟಾ ಸಹಿತ ಜಾಲತಾಣಗಳಿಂದ ತೆಗೆದು ಹಾಕುವಂತೆ ಮನೆಯವರು ಮನವಿ ಮಾಡಿದ್ದಾರೆ.
