CRIME NEWS

ಧರ್ಮಸ್ಥಳ ಪ್ರಕರಣ: ಹಿಂದೂ ನಾಯಕರು ಎಲ್ಲಿ ಅಡಗಿದ್ದಾರೆ: ಮುಸ್ಲಿಂ ಮಹಿಳಾ ಸಂಘಟನೆ ಆಕ್ರೋಶ

Share

 

ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಕೂತಿದ್ದೇನೆ ಎಂಬ ಅಜ್ಞಾತ ವ್ಯಕ್ತಿಯ ಆರೋಪದ  ಪ್ರಕರಣಕ್ಕೆ ಕಮ್ಯುನಿಸ್ಟ್ ಎಡ ಪಕ್ಷಗಳು ಸಂಪೂರ್ಣ ಬಲದಲ್ಲಿ ಮುನ್ನುಗ್ಗುತ್ತಿರುವ ಹೊತ್ತಿನಲ್ಲಿ  ಮುಸ್ಲಿಂ ಮಹಿಳಾ ಸಂಘಟನೆ ವಿಮೆನ್ ಫ್ರಂಟ್ ಪ್ರವೇಶ ಮಾಡಿದೆ.

ಹೆಣ್ಣು ಮಕ್ಕಳ ರಕ್ಷಣೆಗಾಗಿ ನಾವಿದ್ದೇವೆ ಎಂದು ಹೇಳುವ ಸ್ವಯಂ ಘೋಷಿತ ಹಿಂದೂ ನಾಯಕರು ಇಷ್ಟು ಹೆಣ್ಣುಮಕ್ಕಳ ಮೇಲೆ ದೌರ್ಜನ್ಯವಾಗಿ ಕೊಲೆಯಾದರೂ ಕೂಡ ಯಾಕೆ ಇವರು ಮಾತನಾಡುತ್ತಿಲ್ಲ – ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ

ಮಂಗಳೂರು: ಧರ್ಮಸ್ಥಳ ಹೆಣಹೂತ ಪ್ರಕರಣ ಕೂಲಂಕುಶವಾದ ತನಿಖೆ ಶೀಘ್ರವಾಗಿ ನಡೆಯಬೇಕಿದ್ದು, ವಿಳಂಬ ಸಾಕ್ಷಿ ನಾಶಕ್ಕಾಗಿ ಮಾಡುತ್ತಿದ್ದಾರೆ ಎಂಬ ಸಂಶಯ ಮೂಡುತ್ತಿದ್ದು, ತನಿಖೆಗಾಗಿ ಪ್ರತಿಭಟನೆ ಮಾಡಲು ಕೂಡ ಪೊಲೀಸ್ ಇಲಾಖೆ ಅವಕಾಶ ನೀಡುತ್ತಿಲ್ಲ‌ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ ಆರೋಪಿಸಿದ್ದಾರೆ.

    ಮುಸ್ಲಿಂ ಮಹಿಳಾ ಸಂಘಟನೆ ವುಮೆನ್ ಫ್ರಂಟ್ ಅಧ್ಯಕ್ಷ ಫಾತಿಮಾ ಸುದ್ದಿಗೋಷ್ಠಿಯಲ್ಲಿ ಮಾತಾಡಿದರು

ಮಂಗಳೂರಿನಲ್ಲಿ ಮಾತನಾಡಿದ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಕಾರ ಯಾವುದೇ ಆಸಕ್ತಿ ತೋರಿಸುತ್ತಿಲ್ಲ. ಸರಕಾರದ ಜೊತೆಗೆ ಇಂತಹ ಕೃತ್ಯಗಳನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ ಎಂಬ ಸಂಶಯ ಮೂಡುತ್ತಿದೆ. ಹೆಣ್ಣು ಮಕ್ಕಳ ರಕ್ಷಣೆಗಾಗಿ ನಾವಿದ್ದೇವೆ ಎಂದು ಹೇಳುವ ಸ್ವಯಂ ಘೋಷಿತ ಹಿಂದೂ ನಾಯಕರು ಇಷ್ಟು ಹೆಣ್ಣುಮಕ್ಕಳ ಮೇಲೆ ದೌರ್ಜನ್ಯವಾಗಿ ಕೊಲೆಯಾದರೂ ಕೂಡ ಯಾಕೆ ಇವರು ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗುತ್ತಿದ್ದು, ಇದರ ಹಿಂದೆ ದೊಡ್ಡ ವ್ಯವಸ್ಥೆಯೇ ಶಾಮೀಲಾಗಿದೆ ಎಂಬ ಸಂಶಯ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದರು. ಈ ಪ್ರಕರಣದ ನ್ಯಾಯಕ್ಕಾಗಿ ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯಮಟ್ಟದಲ್ಲಿ ಪ್ರತಿಭಟನೆಯನ್ನು ಆಯೋಜಿಸಿದ್ದು, ಈ ಪ್ರತಿಭಟನೆಯ ಪೋಸ್ಟರ್ ಕ್ಯಾಂಪೆನ್ ಗಳನ್ನು ಪ್ರಾರಂಭಿಸುತ್ತಿದ್ದೇವೆ ಎಂದರು.

ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಕೊಲೆ ಕೃತ್ಯದ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಆಸಕ್ತಿ ತೋರದಿರುವುದನ್ನು ಗಮನಿಸಿದರೆ, ಇದರ ಹಿಂದೆ ದೊಡ್ಡ ವ್ಯವಸ್ಥೆಯೇ ಶಾಮೀಲಾಗಿರುವ ಅನುಮಾನ ಮೂಡುತ್ತಿದೆ’ ಎಂದು ವಿಮೆನ್ ಇಂಡಿಯಾ ಮೂವ್‌ಮೆಂಟ್‌ನ ರಾಜ್ಯ ಘಟಕದ ಅಧ್ಯಕ್ಷೆ ಫಾತಿಮಾ ನಸೀಮಾ ಹೇಳಿದರು

To Top