ಬಹುಕೋಟಿ ವಂಚನೆ: ಮತ್ತೆರಡು ದೂರು ದಾಖಲು
ಮಂಗಳೂರು: ಕೋಟಿ ಕೋಟಿ ಸಾಲ ಕೊಡುವುದಾಗಿ ಹೇಳಿ ಹಲವು ಮಂದಿಗೆ ವಂಚಿಸಿದ ಬೋರುಗುಡ್ಡೆಯ ರೋಷನ್ ಸಲ್ದಾನ ವಂಚನೆಯು ಒಂದೊಂದಾಗಿ ಬಯಲಾಗುತ್ತಿದೆ.
ಮಹಾರಾಷ್ಟ್ರ ಮತ್ತು ಅಸ್ಸಾಂನ ಉದ್ಯಮಿಗಳು ಮಂಗಳೂರು ಸೆನ್ ಅಪರಾಧ ಪೊಲೀಸ್ ಠಾಣೆಗೆ ಬಂದು ತಮಗಾದ ವಂಚನೆಯ ಬಗ್ಗೆ ದೂರು ನೀಡಿದ್ದಾರೆ.
ನಗರ ಸೆನ್ ಕ್ರೈಂ ಪೊಲೀಸ್ ಠಾಣೆಗೆ ಹಾಜರಾದ ಮಹಾರಾಷ್ಟ್ರದ ಉದ್ಯಮಿಯೊಬ್ಬರು ರೂ 5 ಕೋಟಿ ರೂ. ಹಾಗೂ ಅಸ್ಸಾಂ ರಾಜ್ಯದ ವ್ಯಕ್ತಿಯೊಬ್ಬರು 20 ಲಕ್ಷ ರೂ ಎರಡು ದಿನಗಳ ಹಿಂದಷ್ಟೇ ಬ್ಯಾಂಕ್ ಮೂಲಕ ವರ್ಗಾಯಿಸಿರುವುದಾಗಿ ತಿಳಿಸಿದ್ದು ಕೂಡಲೇ ಸಂಬಂಧಪಟ್ಟ ಬ್ಯಾಂಕ್ ಗಳಿಗೆ ಸಂಪರ್ಕಿಸಿ ಮಹಾರಾಷ್ಟ್ರದ ಉದ್ಯಮಿಗೆ ಸಂಬಂಧಿಸಿದ ರೂ 3.5 ಕೋಟಿ ರು. ಹಾಗೂ ಅಸ್ಸಾಂ ರಾಜ್ಯದ ವ್ಯಕ್ತಿಗೆ ಸಂಬಂಧಿಸಿದ ರೂ 20 ಲಕ್ಷ ರೂ. ಪ್ರೀಜ್ ಮಾಡಲಾಗಿದೆ. ಆರೋಪಿ ರೋಷನ್ ಸಲ್ದಾನನನ್ನು ಪೊಲೀಸ್ ಕಸ್ಟಡಿಗೆ ಶೀಘ್ರವೇ ವಶಪಡಿಸಿಕೊಳ್ಳಲು ಕ್ರಮ ವಹಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
