ಮಂಗಳೂರು: ಫೇಸ್ಬುಕ್ಕಿನಲ್ಲಿ ಪ್ರಚೋದನಾಕಾರಿಯಾಗಿ ಕಮೆಂಟು ಹಾಕುತ್ತಿರುವವರನ್ನೇ ಗುರಿಯಾಗಿಸಿ ಸೈಬರ್ ಖದಿಮನೊಬ್ಬ ಅಂಥವರನ್ನು ಬೆದರಿಸಿ 1.23 ಲಕ್ಷಕ್ಕೂ ಹೆಚ್ಚು ಹಣವನ್ನ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ.
ತುಮಕೂರು ಕೋತಿತೋಪು ಚಾಮುಂಡೇಶ್ವರಿ ದೇವಸ್ಥಾನದ ಬಳಿ ನಿವಾಸಿ ಅರುಣ್ ಟಿ ( 27) ಬಂಧಿತ
ಅ ಪೇಸ್ ಬುಕ್ ಖಾತೆ, ಕನ್ನಡ ಮಾಡೆಲ್ಸ್ , ಟ್ರೋಲ್ ಮಾಸ್ಟರ್ , ಟ್ರೋಲ್ ಬಸ್ಯಾ ಇತ್ಯಾದಿ ಪೇಜ್ ಗಳಲ್ಲಿ ಕಮೆಂಟ್ಸ್ ಹಾಕಿರುವ ವ್ಯಕ್ತಿಗಳಿಗೆ ಕರೆಮಾಡುವ ಅರುಣ್, ನಾನು ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಎಂದು ಪರಿಚಯಿಸಿಕೊಂಡು ಕೇಸ್ ಹಾಕುವುದಾಗಿ ಬಂಧಿಸುವುದಾಗಿ ಬೆದರಿಸುತ್ತಿದ್ದ.
ನಿಮ್ಮ ಮೇಲೆ ದೂರುಗಳು ಬಂದಿದೆ ನಿಮ್ಮನ್ನು ಬಂಧಿಸುತ್ತೇನೆ ಎಂದು ಬೆದರಿಸಿ ಅವರಿಂದ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದ.
ಇದುವರೆಗೆ 1,23,000 ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದ.
ಈತನ ಮೇಲೆ ಸೈಬರ್ ಪೊರ್ಟಲ್ ನಲ್ಲಿ ಒಟ್ಟು 11 ದೂರುಗಳು ದಾಖಲಾಗಿವೆ.
ಕೋರ್ಟಿಗೆ ಹಾಜರುಪಡಿಸಿದಾಗ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
